ಪೊಲೀಸರು ಮೂವರನ್ನು ರಸ್ತೆಯಲ್ಲಿ ಕೂಡ್ರಿಸಿ ಲಾಠಿಯಿಂದ ಥಳಿಸುತ್ತಿರುವ ವೀಡಿಯೊ ವೈರಲ್ ; ಪೊಲೀಸ್‌ ಅಮಾನತು

ಆಂಧ್ರಪ್ರದೇಶದ (Andhra Pradesh) ಗುಂಟೂರು ಜಿಲ್ಲೆಯ ಐತಾನಗರದಲ್ಲಿ ಕಾನ್‌ಸ್ಟೆಬಲ್ ಚಿರಂಜೀವಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಪೊಲೀಸರು ಮೂವರಿಗೆ ನಡು ರಸ್ತೆಯಲ್ಲಿ ಸಾರ್ವಜನಿಕವಾಗಿ ಲಾಠಿಯಿಂದ ಮನಸೋ ಇಚ್ಛೆ ಥಳಿಸಿದ್ದಾರೆ.
ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಪೊಲೀಸರು ಸಾರ್ವಜನಿಕವಾಗಿ ಆರೋಪಿಗಳಿಗೆ ಲಾಠಿಯಿಂದ ಹೊಡೆದು ಶಿಕ್ಷೆ ನೀಡಿರುವ ವೀಡಿಯೊ ವೈರಲ್‌ ಆದ ನಂತರ ಇದು ವಿವಾದಕ್ಕೆ ಕಾರಣವಾಗಿದ್ದು, ಅದಕ್ಕೆ ಪೊಲೀಸ್‌ ಸಿಬ್ಬಂದಿಯನ್ನು ಸಸ್ಪೆಂಡ್‌ ಮಾಡಲಾಗಿದೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ತೆನಾಲಿ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ರಸ್ತೆಯ ಮಧ್ಯದಲ್ಲಿ ಮೂವರನ್ನು ಕುಳ್ಳಿರಿಸಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಬಿಗಿದುಕೊಂಡು ಕುಳಿತ ಮೂವರನ್ನು ಪೊಲೀಸರು ಹಾಗೂ ಸಾರ್ವಜನಿಕರು ಸುತ್ತುವರೆದಿದ್ದಾರೆ. ಪೊಲೀಸರು ಅವರಿಗೆ ಪಾಠ ಕಲಿಸಲು ಸಾರ್ವಜನಿಕವಾಗಿ ಥಳಿಸಿದ್ದಾರೆ.

ವಿಕ್ಟರ್, ಬಾಬುಲಾಲ ಮತ್ತು ರಾಕೇಶ ಎಂಬ ಮೂವರು ವ್ಯಕ್ತಿಗಳು ಒಂದು ತಿಂಗಳ ಹಿಂದೆ ಐತಾನಗರದಲ್ಲಿ ಮಾದಕ ದ್ರವ್ಯಗಳ ಪ್ರಭಾವದಿಂದ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿದೆ. ಇವರು ಸ್ಥಳೀಯ ರೌಡಿಯ ಅನುಯಾಯಿಗಳಂತೆ. ಇದರಿಂದ ಪೊಲೀಸರು ಈ ಮೂವರನ್ನು ವಶಕ್ಕೆ ಪಡೆದಿದ್ದರು ಎಂದು ಹೇಳಲಾಗಿದೆ.ವೈಎಸ್‌ಆರ್ ಪಕ್ಷದ ವಕ್ತಾರ ಅಂಬಟಿ ರಾಂಬಾಬು, ಪೊಲೀಸರ ಕ್ರೌರ್ಯದ ವೀಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೀಡಿಯೊದಲ್ಲಿ ಒಬ್ಬ ಪೊಲೀಸ್, ಲಾಠಿಯಿಂದ ರಸ್ತೆಯಲ್ಲಿ ಕೂಡ್ರಿಸಿದ ಈ ಮೂವರ ಬಲವಾಗಿ ಹೊಡೆಯುವುದು ಕಂಡುಬಂದಿದೆ. ಅವರು ನೋವು ಸಹಿಸಲಾರದೆ ಕೊನೆಗೆ ತನ್ನ ಪಾದಗಳನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾರೆ.

“ಕ್ಷಮಿಸಿ, ಸರ್,” ಆ ವ್ಯಕ್ತಿ ಕಿರುಚುತ್ತಾನೆ. ಪೋಲೀಸ್ ಆತನನ್ನು ಬಲಕ್ಕೆ ಕುಳಿತುಕೊಳ್ಳಲು ಸನ್ನೆ ಮಾಡುತ್ತಾನೆ, ಮತ್ತು ನಂತರ ಮತ್ತೊಂದು ಹೊಡೆತವನ್ನು ಹೊಡೆಯುತ್ತಾನೆ. ಆ ವ್ಯಕ್ತಿ ನೋವಿನಿಂದ ಕೂಗುತ್ತಲೇ ಇದ್ದಾಗ ಮತ್ತೆ ಎರಡು ಹೊಡೆತಗಳು ಬರುತ್ತವೆ. ತದನಂತರ ಅವನಿಗೆ ಹೊರಗೆ ಹೋಗಲು ಸೂಚಿಸಲಾಗುತ್ತದೆ. ಹೀಗೆ ಸಾರ್ವಜನಿಕವಾಗಿ ಮೂವರ ಪಾದಗಳಿಗೂ ಪೊಲೀಸರು ಲಾಠಿಯಿಂದ ಬಲವಾಗಿ ಹೊಡೆದಿದ್ದಾರೆ. ವೀಡಿಯೊ ವೈರಲ್‌ ಆದ ನಂತರ ಪೊಲೀಸ್‌ ಸಿಬ್ಬಂದಿ ಅಮಾನತುಗೊಳಿಸಲಾಯಿತು.

ಪ್ರಮುಖ ಸುದ್ದಿ :-   ರಾಜ್ಯಸಭೆ ಪ್ರವೇಶಿಸಲು ಸಿದ್ಧರಾದ ನಟ ಕಮಲ ಹಾಸನ್‌

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement