ಭಾರತದಲ್ಲಿನ ಅನೇಕ ಭಯೋತ್ಪಾದಕ ದಾಳಿಗಳ ಮಾಸ್ಟರ್‌ ಮೈಂಡ್‌, ಕುಖ್ಯಾತ ಉಗ್ರ ಅಬ್ದುಲ್ ಅಜೀಜ್ ಎಸಾರ್ ಪಾಕಿಸ್ತಾನದಲ್ಲಿ ನಿಗೂಢ ಸಾವು: ವರದಿ

ಇಸ್ಲಾಮಾಬಾದ್ : ಭಾರತದ ಮತ್ತೊಬ್ಬ ಶತ್ರು ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್ ಹಾಗೂ ಖ್ಯಾತ ಭಯೋತ್ಪಾದಕ ಮೌಲಾನಾ ಅಬ್ದುಲ್ ಅಜೀಜ್ ಎಸಾರ್ ಪಾಕಿಸ್ತಾನದ ಪಂಜಾಬ್ ಜಿಲ್ಲೆಯಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾನೆ ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ. ಎಸಾರ್ ಸಾವಿನ ವೀಡಿಯೊ ಹಲವಾರು ವಿದೇಶಿ ಮಾಧ್ಯಮಗಳಲ್ಲಿಯೂ ಕಾಣಿಸಿಕೊಂಡಿದೆ. ಆತ ಭಾರತದಲ್ಲಿ ನಡೆದ ಅನೇಕ ಪ್ರಮುಖ ಭಯೋತ್ಪಾದಕ ದಾಳಿಗಳ ಮಾಸ್ಟರ್ ಮೈಂಡ್ ಆಗಿದ್ದ.
ಜೈಶ್‌  ಪ್ರಧಾನ ಕಚೇರಿಯಲ್ಲಿ ಅಂತ್ಯಕ್ರಿಯೆ
ಜೆಇಎಂನ ಕುಖ್ಯಾತ ಭಯೋತ್ಪಾದಕ ಮೌಲಾನಾ ಅಬ್ದುಲ್ ಅಜೀಜ್ ಎಸಾರ್ ಜೂನ್ 2 ರಂದು ಸಾವಿಗೀಡಾಗಿದ್ದಾನೆ ಎಂದು ಹೇಳುವ ದೃಶ್ಯಗಳನ್ನು ಒಸಿಂಟ್ ಟಿವಿ ಹಂಚಿಕೊಂಡಿದೆ. ಆತ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಕ್ಕರ್ ಜಿಲ್ಲೆಯ ಕಲ್ಲೂರ್ ಕೋಟ್‌ನ ಅಶ್ರಫ್‌ವಾಲಾ ನಿವಾಸಿಯಾಗಿದ್ದ. ಜೆಇಎಂ ಮೂಲಗಳ ಪ್ರಕಾರ, ಆತ ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆ. ಆದರೆ ಸಾವಿಗೆ ನಿಜವಾದ ಕಾರಣವನ್ನು ದೃಢೀಕರಿಸಲಾಗಿಲ್ಲ. ಆತನ ಅಂತ್ಯಕ್ರಿಯೆಯನ್ನು ಪಾಕಿಸ್ತಾನದ ಪಂಜಾಬ್‌ನ ಬಹವಾಲ್‌ಪುರದಲ್ಲಿರುವ ಜೆಇಎಂ ಪ್ರಧಾನ ಕಚೇರಿಯ ಮರ್ಕಜ್‌ನಲ್ಲಿ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

ಭಾರತದ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿ
ಎಸಾರ್ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಮತ್ತು ಭಯೋತ್ಪಾದಕ ದಾಳಿಯ ಯೋಜನೆಯಲ್ಲಿ ಭಾಗಿಯಾಗಿದ್ದ. ಆತನ ಸಾವಿನ ಸುತ್ತ ಅನುಮಾನಾಸ್ಪದ ಸಂದರ್ಭಗಳಿರಬಹುದು ಎಂದು ಕೆಲವು ಭದ್ರತಾ ವಿಶ್ಲೇಷಕರು ಶಂಕಿಸಿದ್ದಾರೆ. ಜೈಶ್-ಎ-ಮೊಹಮ್ಮದ್‌ನ ಪ್ರಮುಖ ಕಮಾಂಡರ್‌ ಗಳಲ್ಲಿ ಒಬ್ಬನಾದ ಎಸ್ಸಾರ್, 2016 ರ ನಗ್ರೋಟಾ ದಾಳಿ ಸೇರಿದಂತೆ ಭಾರತದಲ್ಲಿ ಹಲವಾರು ಭಯೋತ್ಪಾದಕ ಸಂಚುಗಳ ಹಿಂದೆ ಇದ್ದಾನೆ ಎಂದು ಆರೋಪಿಸಲಾಗಿದೆ. ಭಾರತ ವಿರೋಧಿ ಭಾವನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಪಾಕಿಸ್ತಾನದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ನೀಡುವಲ್ಲಿ ಅವರು ಹೆಸರುವಾಸಿಯಾಗಿದ್ದ.
ಗಮನಾರ್ಹವಾಗಿ, ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಪ್ರಧಾನ ಕಚೇರಿಯು ಆಪರೇಷನ್ ಸಿಂಧೂರ ಅಡಿಯಲ್ಲಿ ಭಾರತ ನಡೆಸಿದ ನಿಖರ ದಾಳಿಯಲ್ಲಿ ಹೆಚ್ಚು ಹಾನಿಗೊಳಗಾದ ಸ್ಥಳಗಳಲ್ಲಿ ಒಂದು.

ಪ್ರಮುಖ ಸುದ್ದಿ :-   ಜನ್ಮದಿನ ಸಂಭ್ರಮದಿಂದ ಪ್ರಧಾನಿ ನಿವಾಸದ ಬಳಿ ಧರಣಿ ವರೆಗೆ ; ಕಾಂಗ್ರೆಸ್‌ನ ಅನಿರೀಕ್ಷಿತ ಪ್ರತಿಭಟನೆ ನಡೆದದ್ದು ಹೇಗೆ...?

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement