ಅವರು 4ನೇ ತರಗತಿಯಲ್ಲಿದ್ದಾಗ ಹೊಡೆದಾಡಿಕೊಂಡಿದ್ರು… ಈಗ 50 ವರ್ಷಗಳ ನಂತರ ಭೇಟಿಯಾದಾಗ ಥಳಿಸಿ ಸೇಡು ತೀರಿಸಿಕೊಂಡ್ರು…!

ಕಾಸರಗೋಡು : ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಅಸಾಮಾನ್ಯ ಘಟನೆಯೊಂದು ವರದಿಯಾಗಿದೆ. 62 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಇದು 50 ವರ್ಷದ ಹಿಂದಿನ ಬಾಲ್ಯದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಇಬ್ಬರು ಸೇರಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕೃಷ್ಣನ್ ಎಂಬವರ ಅವರ ಮಾಜಿ ಸಹಪಾಠಿ ವಿ.ಜೆ. ಬಾಬು ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಪ್ಲಕ್ಕಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 2 ರಂದು ಈ ಹಲ್ಲೆ ನಡೆದಿದ್ದು, ಇವರ ಅನೌಪಚಾರಿಕ ಭೇಟಿಯ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಎಫ್‌ಐಆರ್ ಪ್ರಕಾರ, ಸುಮಾರು 50 ವರ್ಷದ ಹಿಂದೆ ಬಾಲಕೃಷ್ಣನ್ ಎಂಬವರು 4ನೇ ತರಗತಿಯಲ್ಲಿದ್ದಾಗ ಅವರ ಮೇಲೆ ಬಾಬು ಎಂಬವರು ಹಲ್ಲೆ ನಡೆಸಿದ್ದರಂತೆ. ಅಕ್ಕೆ ಪ್ರತೀಕಾರವಾಗಿ ಬಾಲಕೃಷ್ಣನ್‌ ಹಾಗೂ ಮ್ಯಾಥ್ಯೂ ಈಗ ಬಾಬು ಅವರ ಮೇಲೆ ಹಲ್ಲೆ ನಡೆಸಿದ್ದಾರೆ..!

ಪ್ರಮುಖ ಸುದ್ದಿ :-   ವಾಯುಪಡೆ ಸಿಬ್ಬಂದಿ ಪತ್ನಿಗೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರಕ್ಕೆ ಯತ್ನ; ಇಬ್ಬರ ಬಂಧನ

ಕೆಲವು ದಿನಗಳ ಹಿಂದೆ ನಡೆದ ಭೇಟಿಯ ಸಮಯದಲ್ಲಿ ಬಾಬು ಮತ್ತು ಬಾಲಕೃಷ್ಣನ್ ನಡುವೆ ನಾಲ್ಕನೇ ತರಗತಿಯ ಘಟನೆಯ ಬಗ್ಗೆ ಮಾತಿನ ಚಕಮಕಿ ನಡೆದಿತ್ತು ಮತ್ತು ಆ ಸಮಯದಲ್ಲಿ ಇಬ್ಬರ ನಡುವೆ ವಿಷಯ ಇತ್ಯರ್ಥವಾಗಿದ್ದರೂ, ಜೂನ್ 2 ರಂದು ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ಮತ್ತೆ ಬಾಬು ಅವರನ್ನು ಭೇಟಿಯಾದರು.
ನಾಲ್ಕನೇ ತರಗತಿಯಲ್ಲಿ ಬಾಲಕೃಷ್ಣನ್ ಮೇಲೆ ಏಕೆ ದಾಳಿ ಮಾಡಿದ್ದೀರಿ ಎಂದು ಬಾಬು ಅವರನ್ನು ಇವರು ಪ್ರಶ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾತಿನ ಚಕಮಕಿಯ ನಂತರ ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ಸೇರಿ ಬಾಬು ಅವರನ್ನು ಥಳಿಸಿದ್ದಾರೆ.
ಬಾಲಕೃಷ್ಣನ್, ಬಾಬು ಅವರ ಕಾಲರ್ ಹಿಡಿದುಕೊಂಡರೆ, ಬಾಬು ಅವರ ಮುಖ ಮತ್ತು ಬೆನ್ನಿಗೆ ಮ್ಯಾಥ್ಯೂ ಕಲ್ಲಿನಿಂದ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಬು ತಮ್ಮ ಗಾಯಗಳಿಗೆ ಪರಿಯಾರಂನಲ್ಲಿರುವ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 126(2) (ತಪ್ಪು ಸಂಯಮ), 118(1) (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳನ್ನು ಬಳಸಿ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), ಮತ್ತು 3(5) (ಸಾಮಾನ್ಯ ಉದ್ದೇಶವನ್ನು ಪೂರೈಸಲು ಬಹು ವ್ಯಕ್ತಿಗಳಿಂದ ಮಾಡಲ್ಪಟ್ಟ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಪತ್ನಿಗೆ ವಿಡಿಯೋ ಕಾಲ್‌ ಮಾಡಿ ಕ್ಯಾಮರಾ ಮುಂದೆಯೇ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ...!

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement