ಸಾಂಗ್ಲಿ : ವಿದ್ಯಾರ್ಥಿನಿ ತನ್ನ 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ. 92.60 ಅಂಕಗಳನ್ನು ಗಳಿಸಿದ್ದಾಳೆ. ಆದರೆ ಒಂದು ವರ್ಷದ ನಂತರ, ಅಣಕು ಪರೀಕ್ಷೆ(mock test)ಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ಕಾರಣಕ್ಕೆ ಅವಳ ತಂದೆ ಅವಳನ್ನು ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವರದಿಯಾಗಿದೆ.
ಮಹಾರಾಷ್ಟ್ರದ ಸಾಂಗ್ಲಿಯ ಸಾಧನಾ ಭೋಂಸ್ಲೆ – ಪೂರ್ವ ವೈದ್ಯಕೀಯ ಪರೀಕ್ಷೆ, ನೀಟ್ಗೆ ತಯಾರಿ ನಡೆಸುತ್ತಿದ್ದಳು ಮತ್ತು ಅದಕ್ಕಾಗಿ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದಳು. ಅವಳು ಈ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದು ಅವಳ ತಂದೆ, ಶಾಲಾ ಶಿಕ್ಷಕ ಧೋಂಡಿರಾಮ ಭೋಂಸ್ಲೆ ಅವರನ್ನು ಕೆರಳಿಸಿತು.
ಕೋಪದಲ್ಲಿ, ಆತ ತನ್ನ 17 ವರ್ಷದ ಮಗಳಿಗೆ ಕೋಲಿನಿಂದ ಪದೇ ಪದೇ ಹೊಡೆದಿದ್ದಾನೆ. ಈ ಹೊಡೆತದಿಂದ12 ನೇ ತರಗತಿಯ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಳು, ಮತ್ತು ಅವಳು ಶುಕ್ರವಾರ ಆಸ್ಪತ್ರೆಯಲ್ಲಿ ಸಾವಿಗೀಡಾದಳು, ತನ್ನ ಮಗಳನ್ನು ಹೊಡೆದಿದ್ದಾಗಿ ಒಪ್ಪಿಕೊಂಡ ತಂದೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ದಾಳಿಯಲ್ಲಿ ಸಾಧನಾ ಭೋಂಸ್ಲೆ ತಲೆಗೆ ಗಾಯಗಳಾಗಿವೆ. ಅವರನ್ನು ಸಾಂಗ್ಲಿಯ ಉಷಾಕಲ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ಪಡೆಯುವ ಮೊದಲೇ ಅವರು ಮೃತಪಟ್ಟರು ಎಂದು ಹೇಳಲಾಗಿದೆ.
” ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದ ಕಾರಣಕ್ಕೆ ಪತಿ ಆಕೆಗೆ ಹೊಡೆದಿದ್ದರಿಂದ ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಬಾಲಕಿಯ ತಾಯಿ ಜೂನ್ 22 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ತಂದೆಯನ್ನು ಬಂಧಿಸಲಾಗಿದ್ದು, ಜೂನ್ 24 ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪ್ರಕರಣ ತನಿಖೆಯಲ್ಲಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ