ವೀಡಿಯೊ | ಕುಮಟಾ : ಸಮುದ್ರ ತೀರದಲ್ಲಿ ಬೃಹತ್‌ ತಿಮಿಂಗಿಲದ ಮೃತದೇಹ ಪತ್ತೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಕ್ಕನಳ್ಳಿ ಬಂದರಿನ ಸಮುದ್ರ ತೀರದಲ್ಲಿ ಬೃಹತ್‌ ಗಾತ್ರದ ತಿಮಿಂಗಿಲದ ಮೃತದೇಹ ಬುಧವಾರ ಪತ್ತೆಯಾಗಿದೆ.
ಸುಮಾರು 40 ಅಡಿಗಳಷ್ಟು ಉದ್ದವಿರುವ ಈ ತಿಮಿಂಗಿಲವು ಸತ್ತು 10-15 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ತಿಮಿಂಗಿಲದ ಮೃತದೇಹವು ಬುಧವಾರ (ಜೂನ್‌ 15) ಸಮುದ್ರ ತೀರಕ್ಕೆ ಬಂದು ಬಿದ್ದಿದ್ದರೂ ಅದು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಅದರಿಂದ ದುರ್ವಾಸನೆ ಹೊರಬರುತ್ತಿದೆ ಎನ್ನಲಾಗಿದೆ. ಹೀಗಾಗಿ ಇದು ಸತ್ತು 10-15 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಸಾಮಾನ್ಯವಾಗಿ ತಿಮಿಂಗಿಲಗಳು ಆಳ ಸಮುದ್ರದಲ್ಲಿ ಇರುತ್ತವೆ. ಈ ತಿಮಿಂಗಿಲ ಸಹ ಆಳ ಸಮುದ್ರದಲ್ಲಿ ಸತ್ತಿರಬಹುದು, ನಂತರ ಬೃಹತ್‌ ಅಲೆಗಳು ಅದರ ಮೃತದೇಹವನ್ನು ಸಮುದ್ರ ತೀರಕ್ಕೆ ತಂದು ಎಸೆದಿರಬಹುದು ಎಂದು ಭಾವಿಸಲಾಗಿದೆ. ಈ ತಿಮಿಂಗಿಲವು  ಬೃಹತ್‌ ಗಾತ್ರದಲ್ಲಿ ಬೆಳೆಯುವ ತಿಮಿಂಗಿಲಗಳ ಪ್ರಭೇದಗಳಲ್ಲಿ ಎರಡನೇ ಸ್ಥಾನ ಪಡೆದಿದೆಯಂತೆ. ಇದಕ್ಕೆ ಸುಮಾರು 15-17 ವರ್ಷಗಳದ್ದಾಗಿರಬಹುದು
ಎಂದು ಊಹಿಸಲಾಗಿದೆ. ಇದು  ಯಾವ ಕಾರಣಕ್ಕೆ ಸತ್ತಿದೆ ಹಾಗೂ ಹೇಗೆ ಸತ್ತಿದೆ ಎಂಬುದು ಗೊತ್ತಾಗಿಲ್ಲ.

ಪ್ರಮುಖ ಸುದ್ದಿ :-   ಮನಗೂಳಿ ಕೆನರಾ ಬ್ಯಾಂಕ್​ ದರೋಡೆ ಪ್ರಕರಣ ಭೇದಿಸಿದ ಪೊಲೀಸರು : ಅದೇ ಬ್ಯಾಂಕಿನಲ್ಲಿ ಮ್ಯಾನೇಜರ್​ ಆಗಿದ್ದವನೇ ಮಾಸ್ಟರ್‌ ಮೈಂಡ್‌; ಮೂವರ ಬಂಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement