ಐಐಟಿ-ಬಾಂಬೆಯಲ್ಲಿ 14 ದಿನ ವಾಸವಿದ್ದ ನಕಲಿ ‘ಪಿಎಚ್‌ಡಿ ವಿದ್ಯಾರ್ಥಿ’…! ಈತನ ಗುಟ್ಟು ರಟ್ಟು ಮಾಡಿದ ಸೋಫಾ ಮೇಲಿನ ನಿದ್ರೆ…!!

ಮುಂಬೈ: 22 ವರ್ಷದ ಯುವಕನೊಬ್ಬ ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ-ಬಾಂಬೆ)ಗೆ ನುಸುಳಿ ಸುಮಾರು ಎರಡು ವಾರಗಳ ಕಾಲ ಅದರ ಹೈ ಸೆಕ್ಯುರಿಟಿ ಕ್ಯಾಂಪಸ್‌ನಲ್ಲಿ ಯಾರಿಗೂ ಗೊತ್ತಾಗದಂತೆ ವಾಸಿಸುತ್ತಿದ್ದ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಬಿಲಾಲ್ ಅಹ್ಮದ್ ತೇಲಿ ಎಂದು ಗುರುತಿಸಲ್ಪಟ್ಟ ಈ ಯುವಕ ಕಳೆದ ವಾರ ಸೋಫಾದ ಮೇಲೆ ಮಲಗಿದ್ದಾಗ ಗಮನಿಸಿದ ಐಐಟಿ-ಬಾಂಬೆ ಉದ್ಯೋಗಿಯೊಬ್ಬರು ಆತನ ಗುರುತಿನ ಬಗ್ಗೆ ಪ್ರಶ್ನಿಸಿದ ನಂತರ ಬಂಧಿಸಲಾಯಿತು. ಬಿಲಾಲ್ ಅಹ್ಮದ್ ತೇಲಿ ಸ್ಥಳದಿಂದ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ಆತ ದಾಖಲಾದ ವಿದ್ಯಾರ್ಥಿಯಲ್ಲ ಎಂದು ದೃಢಪಟ್ಟಿದೆ.
ಅಧಿಕಾರಿಗಳ ಪ್ರಕಾರ, ಬಿಲಾಲ್ ಅಹ್ಮದ್ ತೇಲಿ ಪಿಎಚ್‌ಡಿ ವಿದ್ಯಾರ್ಥಿಯಂತೆ ನಟಿಸುತ್ತಾ ಕ್ಯಾಂಪಸ್‌ನಾದ್ಯಂತ ಮುಕ್ತವಾಗಿ ಸುತ್ತಾಡುತ್ತಿದ್ದ, ಹಾಸ್ಟೆಲ್ ಲಾಂಜ್‌ಗಳಲ್ಲಿ ಮಲಗುತ್ತಿದ್ದ, ತರಗತಿಯ ಉಪನ್ಯಾಸಗಳಿಗೆ ಹಾಜರಾಗಿದ್ದ ಮತ್ತು ಕೃತಕ ಬುದ್ಧಿಮತ್ತೆಯ ಕುರಿತಾದ ಸೆಮಿನಾರ್‌ನಲ್ಲಿಯೂ ಭಾಗವಹಿಸಿದ್ದ. ಆತ ನಕಲಿ ಪ್ರವೇಶ ದಾಖಲೆಗಳನ್ನು ಸಹ ಬಳಸಿದ್ದ ಮತ್ತು ಉಚಿತ ಆಹಾರ ಮತ್ತು ಪಾನೀಯಗಳು ಲಭ್ಯವಿರುವ ಪ್ರದೇಶಗಳಿಗೆ ಆಗಾಗ್ಗೆ ಭೇಟಿ ನೀಡಿದ್ದ ಎಂದು ಹೇಳಲಾಗಿದೆ.

ಬಿಲಾಲ್ ಅಹ್ಮದ್ ತೇಲಿ 2023 ರಲ್ಲಿ ಒಂದು ತಿಂಗಳು ಐಐಟಿ-ಬಾಂಬೆಯಲ್ಲಿ ತಂಗಿದ್ದ ಆ ಸಮಯದಲ್ಲಿ ಆತ ಗಮನಕ್ಕೆ ಬಂದಿರಲಿಲ್ಲ ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಮುಂಬೈ ಅಪರಾಧ ವಿಭಾಗ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ತನಿಖೆ ಮುಂದುವರಿಸಿದ್ದು, ಬಿಲಾಲ್ ಅಹ್ಮದ್ ತೇಲಿ ಪ್ರಸ್ತುತ ಜುಲೈ 7 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾನೆ. ದೇಶ ವಿರೋಧಿ ಉದ್ದೇಶಗಳ ಬಗ್ಗೆ ಆತಂಕಗಳ ನಡುವೆ, ಅಧಿಕಾರಿಗಳು ಸೈಬರ್ ಲ್ಯಾಬ್‌ನಲ್ಲಿ ಆತನ ಫೋನ್‌ನಿಂದ ಅಳಿಸಲಾದ ಡೇಟಾವನ್ನು ರಿಟ್ರೀವ್‌ ಮಾಡುತ್ತಿದ್ದಾರೆ. ಆತ ಕ್ಯಾಂಪಸ್‌ನ ವೀಡಿಯೊಗಳನ್ನು ಚಿತ್ರೀಕರಿಸಿದ್ದಾನೆ, ಆದರೆ ಅವುಗಳನ್ನು ಯಾರಿಗೂ ಫಾರ್ವರ್ಡ್ ಮಾಡಿಲ್ಲ ಎಂದು ಅವರು ಕಂಡುಕೊಂಡಿದ್ದಾರೆ. ಗುಪ್ತಚರ ಅಧಿಕಾರಿಗಳು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಸ್ಫೋಟದ ಪ್ರಮುಖ ಆರೋಪಿ ಅರೆಸ್ಟ್‌

ವಿಚಾರಣೆಯ ಸಮಯದಲ್ಲಿ, ಬಿಲಾಲ್ ಅಹ್ಮದ್ ತೇಲಿ 21 ಇಮೇಲ್ ಖಾತೆಗಳನ್ನು ರಚಿಸಿದ್ದಾಗಿ ಒಪ್ಪಿಕೊಂಡಿದ್ದಾನೆ, ಆತನ ಉದ್ದೇಶ “ಹೆಚ್ಚಿನ ಹಣ ಗಳಿಸುವುದು ಮತ್ತು ಆನ್‌ಲೈನ್‌ನಲ್ಲಿ ಜನಪ್ರಿಯತೆ ಗಳಿಸುವುದು” ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.
ಬಿಲಾಲ್ ಅಹ್ಮದ್ ತೇಲಿ 12 ನೇ ತರಗತಿಯ ನಂತರ ಆರು ತಿಂಗಳ ಸಾಫ್ಟ್‌ವೇರ್ ಅಭಿವೃದ್ಧಿ ಕೋರ್ಸ್ ಮತ್ತು ವೆಬ್ ವಿನ್ಯಾಸದಲ್ಲಿ ಒಂದು ವರ್ಷದ ಡಿಪ್ಲೊಮಾವನ್ನು ಪೂರ್ಣಗೊಳಿಸಿದ್ದ ಮತ್ತು ಪ್ರಸ್ತುತ ಸೂರತ್‌ನ ಖಾಸಗಿ ಸಂಸ್ಥೆಯಲ್ಲಿ ₹1.25 ಲಕ್ಷ ಮಾಸಿಕ ಸಂಬಳದ ಉದ್ಯೋಗದಲ್ಲಿದ್ದಾನೆ.
ಈತನ ತಂದೆಗೆ ಗಾರ್ಮೆಂಟ್‌ ವ್ಯವಹಾರವಿದೆ. ತೇಲಿ 2024 ರಲ್ಲಿ ಬಹ್ರೇನ್‌ಗೆ ಪ್ರಯಾಣ ಬೆಳೆಸಿದ್ದ ಹಾಗೂ ಅದಕ್ಕೂ ಮೊದಲು ದುಬೈಗೆ ಪ್ರಯಾಣ ಬೆಳೆಸಿದ ಇತಿಹಾಸವನ್ನು ಹೊಂದಿದ್ದಾನೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement