ಅಪ್ರಾಪ್ತ ವಿದ್ಯಾರ್ಥಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮುಂಬೈ ಶಿಕ್ಷಕಿ…! ಆತಂಕ ನಿವಾರಕ ಮಾತ್ರೆಯನ್ನೂ ನೀಡುತ್ತಿದ್ದಳಂತೆ

ಮುಂಬೈ:   ದೇಶವನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯೊಬ್ಬನನ್ನು 5 ಸ್ಟಾರ್‌ ಹೋಟೆಲ್‌ಗೆ ಕರೆದೊಯ್ದು ಅನೇಕ ಬಾರಿ ಲೈಂಗಿಕ ದೌರ್ಜಜ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಮುಂಬೈಯ ಪ್ರತಿಷ್ಠಿತ ಶಾಲೆಯೊಂದರ 40 ವರ್ಷದ, ಇಂಗ್ಲಿಷ್‌ ಶಿಕ್ಷಕಿ ಕಳೆದೊಂದು ವರ್ಷದಿಂದ 16 ವರ್ಷದ ಬಾಲಕನ್ನು ಹೊಟೇಲ್‌ಗೆ ಕರೆದೊಯ್ದು ಮದ್ಯಪಾನ ಮಾಡಿಸಿ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾಳೆ. ಸದ್ಯ ಆಕೆಯನ್ನು ಪೊಲೀಸರು ಪೋಸ್ಕೋ ಕಾಯ್ದೆಯಡಿ ಬಂಧಿಸಿದ್ದಾರೆ.
40 ವರ್ಷದ ವಿವಾಹಿತ ಶಿಕ್ಷಕಿಗೆ ಮಕ್ಕಳೂ ಇದ್ದಾರೆ. ಆದರೂ ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದಾಳೆ. 11ನೇ ತರಗತಿಯಲ್ಲಿ ಓದುತ್ತಿರುವ ಸಂತ್ರಸ್ತ ವಿದ್ಯಾರ್ಥಿಗೆ ಆಕೆ ಈ ಹಿಂದೆ ಪಾಠ ಮಾಡುತ್ತಿದ್ದಳು. 2023ರ ಡಿಸೆಂಬರ್‌ನಲ್ಲಿ ಪ್ರೌಢಶಾಲಾ ವಾರ್ಷಿಕೋತ್ಸವಕ್ಕಾಗಿ ತಯಾರಿ ನಡೆಸುತ್ತಿದ್ದ ವೇಳೆ ಆಕೆ ಅವನತ್ತ ಆಕರ್ಷಿತಳಾಗಿದ್ದಳು ಮತ್ತು 2024ರ ಜನವರಿಯಲ್ಲಿ ಮೊದಲ ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದಳು ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಅಪ್ರಾಪ್ತನಿಗೆ ನೈತಿಕ ಬೆಂಬಲ ನೀಡುವ ನೆಪದಲ್ಲಿ ಆಕೆ ಐಷಾರಾಮಿ ಹೊಟೇಲ್‌ಗಳಿಗೆ ಕರೆದೊಯ್ದು ಲೈಂಗಿಕವಾಗಿ ಆತನ ಮೇಲೆ ದೌರ್ಜನ್ಯ ಎಸಗುತ್ತಿದ್ದಳು. ಅದಕ್ಕೂ ಮೊದಲು ಆತನಿಗೆ ಮದ್ಯ ಕುಡಿಸುತ್ತಿದ್ದಳು. ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಆತಂಕ ನಿವಾರಕ ಮಾತ್ರೆ ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಮೊದಲ ಬಾರಿ ಲೈಂಗಿಕ ಸಂಪರ್ಕ ನಡೆಸಿದ ಬಳಿಕ ಬಾಲಕ ಮಾಸಿಕವಾಗಿ ಕುಗ್ಗಿಹೋಗಿದ್ದ. ಇದು ಆತನಿಗೆ ಇಷ್ಟವಿರಲಿಲ್ಲ. ಹೀಗಾಗಿ ಆತ ಶಿಕ್ಷಕಿಯನ್ನು ದೂರ ಮಾಡಿದ್ದ. ಆಕೆಗೆ ಸಿಗದಂತೆ ಓಡಾಡಲು ಆರಂಭಿಸಿದ್ದ. ಇದರಿಂದ ಶಿಕ್ಷಕಿ ತನ್ನ ಸ್ನೇಹಿತೆ ಮೂಲಕ ಬಾಲಕನನ್ನು ಸಂಪರ್ಕಿಸಿದ್ದಳು. ಸ್ನೇಹಿತೆ ಬಾಲಕನ ಬಳಿ ತೆರಳಿ ವಯಸ್ಸಾದ ಮಹಿಳೆ ಮತ್ತು ಹದಿಹರೆಯದ ಹುಡುಗರ ನಡುವಿನ ಸಂಬಂಧದಲ್ಲಿ ಯಾವುದೇ ತಪ್ಪಿಲ್ಲ, ಇದು ಸಾಮಾನ್ಯ ಎಂದು ಅಪ್ರಾಪ್ತನ ಮನವೊಲಿಸಿದ್ದಳು.

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

ʼʼಶಿಕ್ಷಕಿ ಮತ್ತು ಬಾಲಕದ್ದು ಉತ್ತಮ ಜೋಡಿ ಎಂದೆಲ್ಲ ಹೇಳಿ ಆಕೆಯ ಸ್ನೇಹಿತೆ ಬಾಲಕನನ್ನು ಶಿಕ್ಷಕಿಯನ್ನು ಭೇಟಿಯಾಗಲು ಒಪ್ಪಿಸಿದ್ದಳು. ಬಳಿಕ ಶಿಕ್ಷಕಿ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿವಸ್ತ್ರಗೊಳಿಸಿ ಕಿರುಕುಳ ನೀಡಿದ್ದಾಳೆ. ಈ ಘಟನೆಯ ಬಳಿಕ ಆತ ಆತಂಕದಿಂದ ಬಳಲುತ್ತಿದ್ದ. ಇದಕ್ಕಾಗಿ ಶಿಕ್ಷಕಿ ಆತಂಕ ನಿವಾರಕ ಮಾತ್ರೆಗಳನ್ನೂ ನೀಡಿದ್ದಳು. ಸದ್ಯ ಈ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿಕ್ಷಕಿಗೆ ನೆರವಾದ ಸ್ನೇಹಿತೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.
ʼಈ ಘಟನೆಯ ಬಳಿಕ ಶಿಕ್ಷಕಿ ಆತನಿಗೆ ಒತ್ತಾಯ ಮಾಡಿ ದಕ್ಷಿಣ ಮುಂಬೈಯ ವಿವಿಧ ಪಂಚತಾರಾ ಹೊಟೇಲ್‌ಗಳಿಗೆ ಮತ್ತು ವಿಮಾನ ನಿಲ್ದಾಣದ ಬಳಿಗೆ ಕರೆದೊಯ್ಯಲು ಪ್ರಾರಂಭಿಸಿದಳು ಮತ್ತು ಏಕಾಂತದಲ್ಲಿ ಆತನಿಗೆ ಬಲವಂತವಾಗಿ ಲೈಂಗಿಕ ಕಿರುಕುಳ ನೀಡತೊಡಗಿದಳು. ಲೈಂಗಿಕ ದೌರ್ಜನ್ಯ ಎಸಗುವ ಮೊದಲು ಆತನಿಗೆ ಮದ್ಯ ಕುಡಿಸುತ್ತಿದ್ದಳುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕನ ವರ್ತನೆಯಲ್ಲಾದ ಬದಲಾವಣೆ ಗಮನಿಸಿದ ಮನೆಯವರು ವಿಚಾರಿಸಿದಾಗ ಆತ ತನ್ನ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಹೀಗಾಗಿ ಮನೆಯವರು ಪೊಲೀಸ್‌ ಠಾಣೆ ಮೆಟ್ಟಿಲೇರಿದರು. ನಂತರ ಶಿಕ್ಷಕಿಯನ್ನು ಬಂಧಿಸಲಾಯಿತು.

ಪ್ರಮುಖ ಸುದ್ದಿ :-   ಮನೆ ಮುಂದೆಯೇ ಗುಂಡು ಹಾರಿಸಿ ಬಿಜೆಪಿ ನಾಯಕ-ಖ್ಯಾತ ಉದ್ಯಮಿ ಗೋಪಾಲ ಖೇಮ್ಕಾ ಹತ್ಯೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement