ಆನ್‍ಲೈನ್ ಗೇಮ್‍ನಲ್ಲಿ 18 ಲಕ್ಷ ರೂ. ಕಳೆದುಕೊಂಡ ಯುವಕ; ವೀಡಿಯೊ ಮಾಡಿಟ್ಟು ಆತ್ಮಹತ್ಯೆ

ದಾವಣಗೆರೆ: ಆನ್‍ಲೈನ್ ಗೇಮ್‍ನಲ್ಲಿ (Online Game) 18 ಲಕ್ಷ ರೂ. ಹಣ ಕಳೆದುಕೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತನನ್ನು ಸರಸ್ವತಿ ನಗರದ ಶಶಿಕುಮಾರ (25) ಎಂದು ಗುರುತಿಸಲಾಗಿದೆ. ಈತ ಆನ್‍ಲೈನ್ ಗೇಮ್‍ ಹುಚ್ಚಿಗೆ ಬಿದ್ದು 18 ಲಕ್ಷ ರೂ. ಕಳೆದುಕೊಂಡಿದ್ದ. ಕಳೆದ ಒಂದು ವರ್ಷದಿಂದ ಹಣ ಹಾಕಿ ಆನ್‌ಲೈನ್‌ ಗೇಮ್ಸ್‌ ಆಡುತ್ತಿದ್ದ ಎನ್ನಲಾಗಿದೆ. ಹಣ ಕಳೆದುಕೊಂಡ ನಂತರ ನೊಂದು ಆನ್‍ಲೈನ್ ಗೇಮ್ ನಿಷೇಧಿಸುವಂತೆ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಮುಖಾಂತರ ಮನವಿ ಮಾಡಿಕೊಂಡಿದ್ದ. ಆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸೆಲ್ಫಿ ವೀಡಿಯೊ ಮಾಡಿ ನೋವು ತೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಡೆತ್‍ನೋಟ್‍ನಲ್ಲಿ ಗೇಮ್‍ನ ಅಕ್ರಮದ ಬಗ್ಗೆ ಹೇಳಿದ್ದಾನೆ. ಅದರಲ್ಲಿ, ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾನೆ. ನನ್ನಂತೆ ಹಣ ಕಳೆದುಕೊಂಡು ನೋವು ಅನುಭವಿಸುವುದು ಕಡಿಮೆಯಾಗಲಿ ಎಂದು ವೀಡಿಯೊದಲ್ಲಿ ಹೇಳಿಕೊಂಡಿದ್ದಾನೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement