ಮೈಯಲ್ಲಿ ಹೊಕ್ಕಿದ್ದ ದೆವ್ವ ಬಿಡಿಸಲು ಥಳಿತ ; ಮಹಿಳೆ ಸಾವು

ಶಿವಮೊಗ್ಗ: ಮಹಿಳೆಯ ಮೈಯಲ್ಲಿ ದೆವ್ವ (devil) ಹೊಕ್ಕಿದೆ ಎಂದು ಭಾವಿಸಿ ಮನಸೋ ಇಚ್ಛೆ ಥಳಿಸಿದ್ದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಮಹಿಳೆಯನ್ನು ಗೀತಮ್ಮ(53) ಎಂದು ಗುರುತಿಸಲಾಗಿದೆ. ಮೈಯಲ್ಲಿ ದೆವ್ವವಿದೆ ಎಂದು ಬಿಡಿಸುವ ನೆಪದಲ್ಲಿ ಗೀತಮ್ಮ ಅವರಿಗೆ ಥಳಿಸಿದ ಆಶಾ ಳನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕೊಲೆ ಪ್ರಕರಣ (murder case) ದಾಖಲಾಗಿದೆ ಎಂದು ಹೇಳಲಾಗಿದೆ.
ಆಶಾ ಎಂಬ ಮಹಿಳೆ ತಮ್ಮ ಮೇಲೆ ಗ್ರಾಮದೇವತೆ ಚೌಡಮ್ಮ ದೇವಿ ಬರುತ್ತಾಳೆ ಎಂದು ಊರವರನ್ನು ನಂಬಿಸಿದ್ದರು. ಹೀಗಾಗಿ ತಮ್ಮ ತಾಯಿ ಗೀತಮ್ಮ ಅವರ ಮೈಮೇಲೆ ಆಗಾಗ ದೆವ್ವ ಬರುತ್ತದೆಯೆಂದು ಅದನ್ನು ಬಿಡಿಸಲು ಗೀತಮ್ಮ ಅವರನ್ನು ಆಶಾ ಬಳಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಗೀತಮ್ಮ ಅವರಿಗೆ “ದೆವ್ವ ಹಿಡಿದಿದೆ” ಎಂದು ಆಶಾ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಗೀತಾಳಿಗೆ ದೆವ್ವ ಬಿಡಿಸುವ ಕಾರ್ಯಕ್ಕೆ ಮುಂದಾದ ಮಹಿಳೆ, ಆಚರಣೆಯ ಸಂದರ್ಭದಲ್ಲಿ ಕೋಲಿನಿಂದಮನಸೋ ಇಚ್ಛೆ ಥಳಿಸಿದ್ದಾಳೆ ಎನ್ನಲಾಗಿದೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೀತಾ ಅವರು ಥಳಿತದಿಂದ ಅಸ್ವಸ್ಥಗೊಂಡಿದ್ದಾರೆ. ಬಳಿಕ ಅವರನ್ನು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತಳ ಮಗ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಸ್ಥಳಕ್ಕೆ ಹೊಳೆಹೊನ್ನೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಬಂಟ್ವಾಳ | ಯುವತಿಗೆ ಇರಿದು ನಂತ್ರ ಆತ್ಮಹತ್ಯೆಗೆ ಶರಣಾದ ಯುವಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement