ಮನೆಯಲ್ಲೇ ಟೆನಿಸ್ ಆಟಗಾರ್ತಿ ರಾಧಿಕಾ ಯಾದವಗೆ ಗುಂಡಿಕ್ಕಿ ಕೊಂದ ತಂದೆ….!

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ 25 ವರ್ಷದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಗುರುವಾರ ಗುರುಗ್ರಾಮದ ಸೆಕ್ಟರ್ 57 ರಲ್ಲಿರುವ ಅವರ ಮನೆಯಲ್ಲಿ ಆಕೆಯ ತಂದೆಯೇ ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ.
ಸುಶಾಂತ್ ಲೋಕ್ ಫೇಸ್ -2ರಲ್ಲಿರುವ ಅವರ ನಿವಾಸದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ತಂದೆ ದೀಪಕ, ಮಗಳು ರಾಧಿಕಾ ಮೇಲೆ ಸತತ ಐದು ಗುಂಡುಗಳನ್ನು ಹಾರಿಸಿದ್ದು, ಅದರಲ್ಲಿ ಮೂರು ಗುಂಡುಗಳು ರಾಧಿಕೆ ಅವರಿಗೆ ತಗುಲಿದವು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಚಿಕಿತ್ಸೆಯ ವೇಳೆ ಅವರು ಮೃತಪಟ್ಟಿದ್ದಾರೆ.
ಟೆನಿಸ್ ಅಕಾಡೆಮಿ ನಡೆಸುವ ನಿರ್ಧಾರದ ಬಗ್ಗೆ ತಂದೆ-ಮಗಳ ನಡುವೆ ವಾಗ್ವಾದ ನಡೆದ ನಂತರ ಕೋಪಗೊಂಡ ತಂದೆ ರಾಧಿಕಾ ಯಾದವ್ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಗುರುಗ್ರಾಮ್ ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಕೋಪಗೊಂಡ ಮತ್ತು ಹತಾಶೆಗೊಂಡ ಆರೋಪಿ ಗುರುವಾರ ಮಧ್ಯಾಹ್ನ ನಡೆದ ತೀವ್ರ ವಾಗ್ವಾದದ ನಂತರ ರಾಧಿಕಾ ಅವರ ಮೇಲೆ ಗುಂಡು ಹಾರಿಸಲು ತನ್ನ ಪರವಾನಗಿ ಪಡೆದ ಪಿಸ್ತೂಲ್ ಬಳಸಿದ್ದಾನೆ. ತಂದೆಯನ್ನು ಬಂಧಿಸಲಾಗಿದೆ ಮತ್ತು ಅಪರಾಧದಲ್ಲಿ ಬಳಸಲಾದ ಪರವಾನಗಿ ಪಡೆದ ರಿವಾಲ್ವರ್ ಅನ್ನು ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಆಕೆಯನ್ನು ಕೊಂದಿದ್ದಾಗಿ ತಂದೆ ಒಪ್ಪಿಕೊಂಡಿದ್ದಾನೆ. ನೆಲಮಹಡಿಯಲ್ಲಿ ವಾಸಿಸುವ ಆರೋಪಿಯ ಸಹೋದರ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟೆನಿಸ್ ಅಕಾಡೆಮಿ ನಡೆಸುತ್ತಿರುವುದಕ್ಕೆ ತಂದೆ ದೀಪಕ ಯಾದವ್‌ ತನ್ನ ಮಗಳ ಮೇಲೆ ಅಸಮಾಧಾನಗೊಂಡು ಅದನ್ನು ಮುಚ್ಚುವಂತೆ ಒತ್ತಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
“ನಾವು ಕುಟುಂಬ ಸದಸ್ಯರನ್ನು ಪ್ರಶ್ನಿಸುತ್ತಿದ್ದೇವೆ. ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಸ್ಪಷ್ಟವಾಗಲಿದೆ” ಎಂದು ಸೆಕ್ಟರ್ 56 ಪೊಲೀಸ್ ಠಾಣೆಯ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ವಿನೋದಕುಮಾರ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಶಾಲೆಯ ಟಾಯ್ಲೆಟ್ಟಿನಲ್ಲಿ ರಕ್ತದ ಕಲೆ ಕಂಡುಬಂದಿದ್ದಕ್ಕೆ ಮುಟ್ಟಾದ ಹುಡುಗಿಯ ಪತ್ತೆಗೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದರು...!!

ಟೆನಿಸ್‌ ಆಟಗಾರ್ತಿ ರಾಧಿಕಾ ಅವರ ಅವರ ಮಾಜಿ ತರಬೇತುದಾರ ಮನೋಜ ಭಾರದ್ವಾಜ ಅವರು ನಿಧನವನ್ನು ಭೀಕರ ನಷ್ಟ ಎಂದು ಬಣ್ಣಿಸಿದ್ದಾರೆ. “ಅವರು ಗಮನ ಕೇಂದ್ರೀಕರಿಸಿದ, ಶಿಸ್ತುಬದ್ಧ ಮತ್ತು ಅಪಾರ ಪ್ರತಿಭಾನ್ವಿತರಾಗಿದ್ದರು” ಎಂದು ಅವರು ಹೇಳಿದ್ದಾರೆ.
ರಾಧಿಕಾ ರಾಜ್ಯ ಟೆನಿಸ್ ಸರ್ಕ್ಯೂಟ್‌ನಲ್ಲಿ ಪ್ರಮುಖ ಹೆಸರು, ವಿಶೇಷವಾಗಿ ಡಬಲ್ಸ್‌ನಲ್ಲಿ ಅವರ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದರು. ಅವರು ಟೆನಿಸ್ ಅಕಾಡೆಮಿಯನ್ನು ಸಹ ನಡೆಸುತ್ತಿದ್ದರು, ಮಹತ್ವಾಕಾಂಕ್ಷಿ ಆಟಗಾರರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತಿದ್ದರು.
ಅವರು ವಿಶ್ವನಾಧ ಹರ್ಷಿನಿ, ಬೌಗ್ರಾಟ್ ಮೇಲಿಸ್, ಸನ್ ಯಿಫಾನ್, ಮರುರಿ ಸುಹಿತಾ ಮತ್ತು ಮಶಾಬಯೇವಾ ದಿಲ್ನಾಜ್ ವಿರುದ್ಧದ ಪಂದ್ಯಗಳು ಸೇರಿದಂತೆ ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement