ಶಿರಸಿ : ತೋಟಗಾರಿಕೆ ಉಪ ನಿರ್ದೇಶಕರಾದ ಸತೀಶ ಹೆಗಡೆ ಅವರ ಕರ್ಮಫಲ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಾಮ್ರಾಟ ಹೊಟೇಲ್ ಎದುರಿನ ರಂಗಧಾಮದಲ್ಲಿ ಜುಲೈ 13 ರಂದು ಅಪರಾಹ್ನ 4 ಗಂಟೆಗೆ ನಡೆಯಲಿದೆ.
ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಡಾ.ಬಿ.ಪಿ.ಸತೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟ ಸುಚೇಂದ್ರ ಪ್ರಸಾದ ತ್ರಿವೇದಿ ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪದಾಕ ರವೀಂದ್ರ ಭಟ್ ಐನಕೈ ಆಗಮಿಸಲಿದ್ದಾರೆ. ಕೃತಿಯ ಕುರಿತು ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಮಾತನಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಾಹಿತಿ ಎಸ್.ಎಸ್.ಭಟ್ ಆಗಮಿಸಲಿದ್ದಾರೆ. ಕೃತಿಕಾರರಾದ ಸತೀಶ ಹೆಗಡೆ ಹಾಗೂ ಪುಸ್ತಕ ಪ್ರಕಟಿಸಿರುವ ಯಾಜಿ ಪ್ರಕಾಶನದ ಸವಿತಾ ಯಾಜಿ ಅವರು ಉಪಸ್ಥಿತರಿರಲಿದ್ದಾರೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟನೆ ಮೂಲಕ ಕೋರಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ