ಶಿವಮೊಗ್ಗದ ಕೇಂದ್ರ ಕಾರಾಗೃಹದ ಕೈದಿಯ ಹೊಟ್ಟೆಯಲ್ಲಿ ಮೊಬೈಲ್ ಪತ್ತೆ…!

ಶಿವಮೊಗ್ಗ : ನಗರದ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಯೊಬ್ಬ ಮೊಬೈಲ್ ಫೋನ್ ನುಂಗಿದ್ದು, ಅದನ್ನು ಜುಲೈ ೮ರಂದು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಬಳಿಕ ಮೊಬೈಲ್ ಅನ್ನು ಜೈಲು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ದೌಲತ್ ಅಲಿಯಾಸ್ ಗುಂಡ (30) ಎಂಬ ಕೈದಿಯ ಹೊಟ್ಟೆಯಲ್ಲಿ ಮೂರು ಇಂಚು ಉದ್ದದ ಒಂದು ಇಂಚು ಅಗಲದ ಮೊಬೈಲ್ ಫೋನ್ ಪತ್ತೆಯಾಗಿದೆ. ಪ್ರಕರಣವೊಂದರಲ್ಲಿ ದೌಲತ್‌ಗೆ ಶಿವಮೊಗ್ಗದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ಈತನನ್ನು ಜೈಲಿಗೆ ಕಳುಹಿಸಲಾಗಿತ್ತು. ಜೂನ್‌ 24 ರಂದು ಜೈಲಿನ ಆಸ್ಪತ್ರೆಗೆ ಬಂದು, ಕಲ್ಲು ನುಂಗಿದ್ದೇನೆ ಎಂದು ಈತ ವೈದ್ಯರಿಗೆ ತಿಳಿಸಿದ್ದ. ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು.

ಅಲ್ರೇಲಿ ಎಕ್ಸ್‌ ರೇ ಮಾಡಿದಾಗ ಈತ ಹೊಟ್ಟೆಯಲ್ಲಿ ವಸ್ತುವೊಂದು ಪತ್ತೆಯಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದಾಗ ಮೊಬೈಲ್ ಫೋನ್ ಸಿಕ್ಕಿದ್ದು, ಇದು ಹೇಗೆ ಈತನಿಗೆ ಸಿಕ್ಕಿತು ಎಂದು ತನಿಖೆ ನಡೆಯುತ್ತಿದೆ.
ಹೊಟ್ಟೆಯೊಳಗೆ ಮೊಬೈಲ್ ಇದ್ದರೂ ಈತ ಆಹಾರ ಸೇವಿಸುತ್ತಿದ್ದ ಮತ್ತು ಉತ್ತಮವಾಗಿದ್ದ” ಎಂದು ಜೈಲಿನ ಮುಖ್ಯ ಅಧೀಕ್ಷಕರು ತಿಳಿಸಿದ್ದಾರೆ.
ಕೈದಿ ಮೊಬೈಲ್ ನುಂಗಲು ಕಾರಣವೇನೆಂದು ತಿಳಿದುಬಂದಿಲ್ಲ. “ಕೈದಿ ಜೈಲಿನೊಳಗೆ ಮೊಬೈಲ್ ಹೇಗೆ ಪಡೆದುಕೊಂಡ?” ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಶಜೈಲಿನ ಮುಖ್ಯ ಅಧೀಕ್ಷಕರು ಶಿವಮೊಗ್ಗದ ತುಂಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಇಬ್ಬರೂ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಜಗಳದ ಕುರಿತು ಸುಪ್ರೀಂ ಕೋರ್ಟ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement