ಮುಂಬೈ: ಕಿಂಗ್ ಸಿನೆಮಾದ ಚಿತ್ರೀಕರಣ ವೇಳೆ ಶಾರುಖ್ ಖಾನ್ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮುಂಬೈನ (Mumbai) ಗೋಲ್ಡನ್ ಟೊಬ್ಯಾಕೊ ಸ್ಟುಡಿಯೋದಲ್ಲಿ ಸಾಹಸ ದೃಶ್ಯವನ್ನು ಚಿತ್ರೀಕರಿಸುವಾಗ ಶಾರುಖ್ ಖಾನ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯದ ವಿವರಗಳು ಗೌಪ್ಯವಾಗಿ ಉಳಿದಿದ್ದರೂ, ಶಾರುಖ್ ಅವರಿಗೆ ಒಂದು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ, ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಗೋಲ್ಡನ್ ಟೊಬ್ಯಾಕೋ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಈ ವೇಳೆ ಶಾರುಖ್ ಖಾನ್ ಅವರು ಸ್ಟಂಟ್ ದೃಶ್ಯದಲ್ಲಿ ಚಿತ್ರೀಕರಣ ಮಾಡುವಾಗ ಅವರಿಗೆ ಮಸಲ್ ಇಂಜೂರಿ ಆಗಿದೆ ಎನ್ನಲಾಗಿದೆ.
ವೈದ್ಯರು ಶಾರುಖ್ಗೆ ಕನಿಷ್ಠ ಒಂದು ತಿಂಗಳ ಕಾಲ ಸಂಪೂರ್ಣ ವಿರಾಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆಂದು ವರದಿಯಾಗಿದೆ. ಪರಿಣಾಮವಾಗಿ, ಚಿತ್ರದ ಚಿತ್ರೀಕರಣ ವೇಳಾಪಟ್ಟಿಯನ್ನು ಸ್ಥಗಿತಗೊಳಿಸಲಾಗಿದೆ. ಅವರ ಚೇತರಿಕೆ ಮತ್ತು ಆರೋಗ್ಯದ ಆದ್ಯತೆ ನೀಡುವ ಸಲುವಾಗಿ ಶ್ರೀಲಂಕಾ ಪ್ರವಾಸವನ್ನು ಮುಂದೂಡಲಾಗಿದೆ. ಫಿಲ್ಮ್ ಸಿಟಿ, ಗೋಲ್ಡನ್ ಟೊಬ್ಯಾಕೊ ಮತ್ತು ವೈಆರ್ಎಫ್ ಸ್ಟುಡಿಯೋಸ್ನಂತಹ ಸ್ಥಳಗಳನ್ನು ಆರಂಭದಲ್ಲಿ ಜುಲೈ ಮತ್ತು ಆಗಸ್ಟ್ ವರೆಗೆ ಕಾಯ್ದಿರಿಸಲಾಗಿತ್ತು, ಆದರೆ ಈಗ ಮುಂದಿನ ಸೂಚನೆ ಬರುವವರೆಗೂ ಬುಕಿಂಗ್ಗಳನ್ನು ರದ್ದುಗೊಳಿಸಲಾಗಿದೆ. ಮುಂದಿನ ವೇಳಾಪಟ್ಟಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಪುನರಾರಂಭವಾಗುವ ನಿರೀಕ್ಷೆಯಿದೆ.
ಸಿದ್ಧಾರ್ಥ ಆನಂದ ನಿರ್ದೇಶನದ ‘ಕಿಂಗ್’ ಚಿತ್ರದಲ್ಲಿ ಸುಹಾನಾ ಖಾನ್ ದೊಡ್ಡ ಪರದೆಯ ಮೇಲೆ ಚೊಚ್ಚಲ ಪ್ರವೇಶ ಮಾಡಿದ್ದಾರೆ. ಅವರು ಕೊನೆಯ ಬಾರಿಗೆ ನೆಟ್ಫ್ಲಿಕ್ಸ್ನ ‘ದಿ ಆರ್ಚೀಸ್’ ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ ಬಚ್ಚನ್, ಜೈದೀಪ ಅಹ್ಲಾವತ್, ಅನಿಲ ಕಪೂರ್ ಮತ್ತು ಅಭಯ್ ವರ್ಮಾ ಕೂಡ ನಟಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ