
ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದ ಕಾಲುವೆ ಬಳಿ ಇರುವ ಕೃಷಿ ಹೊಂಡದಲ್ಲಿ ಮುಳುಗಿ ತಂದೆ, ಮಗ ಮೃತಪಟ್ಟ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಬಸವರಾಜ ನೀಲಪ್ಪ ಕೆಂಗೇರಿ(40), ಅವರ ಪುತ್ರ ಧರೆಪ್ಪ (14) ಎಂದು ಗುರುತಿಸಲಾಗಿದೆ. ಬಸವರಾಜ, ಧರೆಪ್ಪ ಮತ್ತು ಭಾಗಪ್ಪ ಸಣ್ಣಕ್ಕಿ (16) ಹುರಳಿ ಬೆಳೆಗೆ ಔಷಧ ಸಿಂಪಡಿಸುತ್ತಿದ್ದರು. ಆಗ ನೀರು ತರಲು ಹೋಗಿದ್ದ ಮಕ್ಕಳಾದ ಧರೆಪ್ಪ ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದ. ಆತನ ಸಹಾಯಕ್ಕೆ ಹೋದ ಭಾಗಪ್ಪ ನೀರಿನಲ್ಲಿ ಮುಳುಗುತ್ತಿದ್ದ. ಅವರ ರಕ್ಷಣೆಗೆ ಧಾವಿಸಿದ ಬಸರಾಜ ಸಹ ನೀರಿನಲ್ಲಿ ಮುಳುಗಿದ್ದಾರೆ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರು ಮೂವರ ರಕ್ಷಣೆಗೆ ಮುಂದಾದರು ಎಂದು ಹೇಳಲಾಗಿದೆ. ಆದರೆ, ತಂದೆ ಬಸವರಾಜ ಹಾಗೂ ಮಗ ಧರೆಪ್ಪ ಮೃತಪಟ್ಟಿದ್ದಾರೆ. ಭಾಗಪ್ಪ ಅವರನ್ನು ರಕ್ಷಿಸಿ, ಚಿಕಿತ್ಸೆಗಾಗಿ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ