ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ, ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ಹಾಗೂ ಮೂರು ವಂದೇ ಭಾರತ ರೈಲುಗಳಿಗೆ ಇಂದು, (ಆಗಸ್ಟ್ 10) ಚಾಲನೆ ನೀಡಿದ್ದಾರೆ.
ಬೆಂಗಳೂರಿಗೆ ಮೋದಿ ಆಗಮಿಸಿದ ಹಿನ್ನೆಲೆಯಲ್ಲಿ ನಗರದ 5 ವರ್ಷದ ಬಾಲಕಿ ಪ್ರಧಾನಿಗೆ ಪತ್ರ ಬರೆದಿದ್ದು, ಇದು ವೈರಲ್ ಆಗಿದೆ. ಬೆಂಗಳೂರಿನ ರಸ್ತೆಗಳ ದುಸ್ಥಿತಿ (Bengaluru Roads) ಹಾಗೂ ಸಂಚಾರ ಸಮಸ್ಯೆ (traffic problems) ಬಗ್ಗೆ ಗಮನ ಸೆಳೆದಿದ್ದಾಳೆ. ನರೇಂದ್ರ ಮೋದೀಜಿ, ಇಲ್ಲಿ ಭಾರಿ ಟ್ರಾಫಿಕ್ ಸಮಸ್ಯೆ ಇದೆ. ಇದರಿಂದ ನಾವು ಶಾಲೆಗೆ ಹೋಗಲು ತುಂಬಾ ತಡವಾಗುತ್ತಿದೆ, ಜತೆಗೆ ಆಫೀಸ್ ತೆರಳುವವರಿಗೂ ತಡವಾಗುತ್ತಿದೆ. ಇಲ್ಲಿನ ರಸ್ತೆ ಬಹಳ ಕೆಟ್ಟದಾಗಿದ್ದು, ಈ ಸಮಸ್ಯೆಗಳನ್ನು ಪರಿಹರಿಸಲು ದಯವಿಟ್ಟು ಸಹಾಯಮಾಡಿ ಎಂದು 5 ವರ್ಷದ ಬಾಲಕಿ ಆರ್ಯ ಪತ್ರ ಬರೆದಿದ್ದಾರೆ.
ಬೆಂಗಳೂರು ನಿವಾಸಿ ಅಭಿರೂಪ ಚಟರ್ಜಿ ಎಂಬವರು, ತಮ್ಮ 5 ವರ್ಷದ ಪುತ್ರಿ ಬರೆದ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಬೆಂಗಳೂರು ಭೇಟಿ ಸಂದರ್ಭದಲ್ಲಿ ಹಲವು ದಿನಗಳಿಂದ ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕಾಗಿ ನನ್ನ ಪುತ್ರಿ ಪತ್ರದ ಮೂಲಕ ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ಕೆಲ ಭಾಗದಲ್ಲಿನ ಟ್ರಾಫಿಕ್ ಸಮಸ್ಯೆ ಕುರಿತು ಹಲವರು ಧ್ವನಿ ಎತ್ತಿದ್ದಾರೆ. ಈ ಬಾಲಕಿ ಪತ್ರದ ಅಭಿಪ್ರಾಯ ನಮ್ಮದು. ಪ್ರತಿ ದಿನ ಟ್ರಾಫಿಕ್ ಸಮಸ್ಯೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದೇವೆ. ರಸ್ತೆಗಳು ಹಾಳಾಗಿವೆ. ಜತೆಗೆ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹಲವು ಸಮಸ್ಯೆಗಳು ಬೆಂಗಳೂರಿನ ಕೆಲ ಭಾಗದ ಟ್ರಾಫಿಕ್ ಸಮಸ್ಯೆ ಹೆಚ್ಚಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ ಹಳದಿ ಮಾರ್ಗ ಉತ್ತರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸೋಮವಾರದಿಂದ ಹಳದಿ ಮೆಟ್ರೋ ಮಾರ್ಗ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತವಾಗಿದೆ. ಆರ್‌ವಿ ರೋಡ್ ನಿಂದ ಬೊಮ್ಮಸಂದ್ರ ಮಾರ್ಗದ ಒಟಟಿ 19.3 ಕಿಲೋಮೀಟರ್ ಉದ್ದದ ಈ ರಸ್ತೆ ಮಾರ್ಗದಲ್ಲಿ 25 ನಿಮಿಷಕ್ಕೊಂದು ಮೆಟ್ರೋ ಸಂಚಾರ ಮಾಡಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ