ಬೆಳಗಾವಿ | ನಕಲಿ ದಾಖಲೆ ಸೃಷ್ಟಿಸಿ 16 ಕೋಟಿ ರೂ. ಜಿಎಸ್‌ಟಿ ವಂಚಿಸಿದ್ದ ಆರೋಪಿಯ ಬಂಧನ

ಬೆಳಗಾವಿ: ಕೋಟ್ಯಂತರ ರೂಪಾಯಿ ಜಿಎಸ್‌ಟಿ ವಂಚನೆ ಮಾಡಿದ್ದ ವ್ಯಕ್ತಿಯನ್ನು ಆರೋಪಿಯನ್ನು ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ವಿವಿಧ ಕಂಪನಿಗಳ ನಕಲಿ ಹೆಸರುಗಳನ್ನು ಸೃಷ್ಟಿಸಿ ಈತ ನಕಲಿ ಒಪ್ಪಂದ ಮತ್ತು ನಕಲಿ ಬಿಲ್ ಸೃಷ್ಟಿಸಿದ್ದ. ಇದಕ್ಕಾಗಿ ತನ್ನ ಕಚೇರಿಯ ನೌಕರರ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಬಳಸಿಕೊಂಡಿರುವ ಮಾಹಿತಿ ಈಗ ಬಹಿರಂಗವಾಗಿದೆ. ಸದ್ಯ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಇವನೇ ಮುಖ್ಯ ಸೂತ್ರಧಾರ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಜಿಎಸ್‌ಟಿ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ಟು 16 ಕೋಟಿ ರೂ. ಮೌಲ್ಯದ ಇನ್‌ಪುಟ್ ಟ್ಯಾಕ್ಟ್ ಕ್ರೆಡಿಟ್ ಪಡೆದಿದ್ದಾನೆ. ಸದ್ಯ ಬಂಧಿಸಲಾದ ವ್ಯಕ್ತಿಯೇ ಪ್ರಮುಖ ಸೂತ್ರಧಾರನಾಗಿದ್ದು, ಇನ್ನುಳಿದ ಆರೋಪಗಳನ್ನು ಸಹ ಶೀಘ್ರವೇ ಬಂಧಿಸಲಾಗುವುದು. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಜಿಎಸ್‌ಟಿ ಕಚೇರಿ ತಿಳಿಸಿದೆ.

ಬಳ್ಳಾರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ 16 ಕೋಟಿ ರೂ. ಜಿಎಸ್‌ಟಿ ವಂಚಿಸಿದ ಆರೋಪಿಯನ್ನು ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಯಾವುದೇ ಅಧಿಕೃತ ವ್ಯವಹಾರ ಮಾಡದೇ ಕೋಟ್ಯಂತರ ರೂಪಾಯಿ ವ್ಯವಹಾರದ ಇನ್‌ವಾಯ್ಸ್ಗಳನ್ನು ಸೃಷ್ಟಿ ಮಾಡಿದ್ದಾನೆ. ಇದು ಕೊನೆಗೂ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕಂಪನಿಗಳು ಇವೆ ಎಂದು ನಮೂದಾಗಿದ್ದ ಬಳ್ಳಾರಿಯ ಮೂರು ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿದಾಗ ಈ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ವಿವಿಧ ಹೆಸರುಗಳಲ್ಲಿ ನಕಲಿ ಕಂಪನಿಗಳ ದಾಖಲೆ ಸೃಷ್ಟಿಸಿದ್ದಾನೆ. ಈ ಮೂಲಕ ವ್ಯವಹಾರ ನಡೆಸಿದಂತೆ ಇನ್‌ವಾಯ್ಸ್ಗಳನ್ನು ಸಿದ್ಧಪಡಿಸಿ, ನಕಲಿ ಒಪ್ಪಂದ, ನಕಲಿ ಬಿಲ್‌ಗಳನ್ನು ಸೃಷ್ಟಿಸಿದ್ದಾನೆ. ತನ್ನ ಕಚೇರಿಯ ನೌಕರರ ಆಧಾರ್ ಕಾರ್ಡ್‌, ಪಾನ್ ಕಾರ್ಡ್‌ಗಳನ್ನೂ ಸಹ ಬಳಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಮುಖ ಸುದ್ದಿ :-   ವಾಟ್ಸಾಪ್​ನಲ್ಲಿ ಮದುವೆ ಆಮಂತ್ರಣ ಕಾರ್ಡ್‌ ಬಂದ್ರೆ ಕ್ಲಿಕ್ ಮಾಡುವ ಮುನ್ನ ಎಚ್ಚರ ; ಕ್ಲಿಕ್ ಮಾಡಿ 10 ಲಕ್ಷ ರೂ. ಕಳೆದುಕೊಂಡ ಅಧಿಕಾರಿ !

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement