ಸೋನಿಯಾ ಗಾಂಧಿ ಭಾರತದ ಪೌರತ್ವ ಪಡೆಯುವ ಮೊದಲೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿತ್ತು : ಬಿಜೆಪಿಯ ದೊಡ್ಡ ಆರೋಪ

ನವದೆಹಲಿ: ಮತಗಳ್ಳತನ ಮಾಡಲು ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ‘ಕೈಜೋಡಿಸಿದೆ’ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳಿಗೆ ತಿರುಗೇಟು ನೀಡಿರುವ ಬಿಜೆಪಿ, ಸೋನಿಯಾ ಗಾಂಧಿ ಭಾರತದ ಪ್ರಜೆಯಾಗುವ ಮೊದಲೇ ಅಕ್ರಮವಾಗಿ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿತ್ತು ಎಂದು ಹೇಳಿದೆ.
ಸೋನಿತಾ ಗಾಂಧಿ ಭಾರತದ ಪ್ರಜೆಯಾಗುವ ಮೊದಲು 1980 ರಿಂದ 1982 ರವರೆಗೆ ಅವರ ಹೆಸರು ಮತದಾರರ ಪಟ್ಟಿಯಲ್ಲಿತ್ತು ಎಂದು ಕೇಂದ್ರದ ಮಾಜಿ ಸಚಿವ ಅನುರಾಗ ಠಾಕೂರ್ ಹೇಳಿದ್ದಾರೆ. ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ ಭಾರತದ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಸಂಸದ ಅನುರಾಗ ಠಾಕೂರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಟಲಿಯಲ್ಲಿ ಜನಿಸಿದ ಸೋನಿಯಾ ಗಾಂಧಿ ಅವರು ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಅವರ ಹೆಸರನ್ನು 1980 ರಲ್ಲಿ ಮತದಾರರ ಪಟ್ಟಿಗೆ ಸೇರಿಸಲಾಗಿತ್ತು ಎಂದು ಹೇಳಿದ್ದಾರೆ.
1980 ರಲ್ಲಿ ನವದೆಹಲಿ ಕ್ಷೇತ್ರದ ಮತಗಟ್ಟೆಯ ಮತದಾರರ ಪಟ್ಟಿಯ ಛಾಯಾಚಿತ್ರವನ್ನು ಹಂಚಿಕೊಂಡ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ ಮಾಳವಿಯಾ ಅವರ ಹೇಳಿಕೆಗಳನ್ನು ಅನುರಾಗ ಠಾಕೂರ್ ಪ್ರತಿಧ್ವನಿಸಿದ್ದಾರೆ.

ಸಫ್ದರ್ಜಂಗ್ ರಸ್ತೆಯಲ್ಲಿರುವ 145 ನೇ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ಇಂದಿರಾ ಗಾಂಧಿ, ರಾಜೀವ ಗಾಂಧಿ, ಸಂಜಯ ಗಾಂಧಿ, ಸೋನಿಯಾ ಗಾಂಧಿ ಮತ್ತು ಮೇನಕಾ ಗಾಂಧಿ ಅವರ ಹೆಸರುಗಳಿದ್ದವು. ಆ ಸಮಯದಲ್ಲಿ ಸೋನಿಯಾ ಗಾಂಧಿ ಇನ್ನೂ ಇಟಾಲಿಯನ್ ಪೌರತ್ವವನ್ನು ಹೊಂದಿದ್ದರು ಎಂದು ಮಾಳವಿಯಾ ಹೇಳಿಕೊಂಡಿದ್ದಾರೆ.
“ಇದು ಚುನಾವಣಾ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಬಹುಶಃ ರಾಹುಲ್ ಗಾಂಧಿಯವರ ಅನರ್ಹ ಮತ್ತು ಅಕ್ರಮ ಮತದಾರರನ್ನು ಕ್ರಮಬದ್ಧಗೊಳಿಸುವ ಒಲವು ಮತ್ತು ಸರ್‌(SIR)ಗೆ ಅವರ ವಿರೋಧ ಯಾಕೆಂದು ವಿವರಿಸುತ್ತದೆ” ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.
1946 ರಲ್ಲಿ ಇಟಲಿಯಲ್ಲಿ ಆಂಟೋನಿಯಾ ಅಲ್ಬಿನಾ ಮೈನೊ ಆಗಿ ಜನಿಸಿದ ಸೋನಿಯಾ ಗಾಂಧಿ, 1968 ರಲ್ಲಿ ರಾಜೀವ್ ಗಾಂಧಿ ಅವರನ್ನು ವಿವಾಹವಾದರು ಮತ್ತು ಭಾರತಕ್ಕೆ ಬಂದರು. ಕುಟುಂಬವು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕೃತ ನಿವಾಸದಲ್ಲಿ ವಾಸಿಸುತ್ತಿದ್ದಾಗ ಮತದಾರರ ಪಟ್ಟಿಗೆ ಸೋನಿಯಾ ಗಾಂಧಿ ಹೆಸರನ್ನು ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜನತಾ ಪ್ರಾತಿನಿಧ್ಯ ಕಾಯ್ದೆ, 1950 ರ ಪ್ರಕಾರ, ಭಾರತದ ನಾಗರಿಕರಲ್ಲದ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಅರ್ಹರಲ್ಲ. “ಅವರ (ಸೋನಿಯಾ) ಹೆಸರು ಅವರು ಭಾರತೀಯ ನಾಗರಿಕರಾಗುವ ಮೂರು ವರ್ಷಗಳ ಮೊದಲು 1980 ರಲ್ಲಿ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿತು ಮತ್ತು ಆಗ ಅವರು ಇನ್ನೂ ಇಟಾಲಿಯನ್ ಪೌರತ್ವವನ್ನು ಹೊಂದಿದ್ದರು” ಎಂದು ಮಾಳವಿಯಾ ಹೇಳಿದ್ದಾರೆ.
“1980 ರಲ್ಲಿ, ನವದೆಹಲಿ ಸಂಸದೀಯ ಕ್ಷೇತ್ರದ ಮತದಾರರ ಪಟ್ಟಿಯನ್ನು ಜನವರಿ 1, 1980 ರಂದು ಪರಿಷ್ಕರಣೆಗೆ ಅರ್ಹತಾ ದಿನಾಂಕವಾಗಿ ಪರಿಷ್ಕರಿಸಲಾಯಿತು. ಈ ಪರಿಷ್ಕರಣೆಯ ಸಮಯದಲ್ಲಿ, ಸೋನಿಯಾ ಗಾಂಧಿಯವರ ಹೆಸರನ್ನು ಮತಗಟ್ಟೆ 145 ರಲ್ಲಿ ಸರಣಿ ಸಂಖ್ಯೆ 388 ರಲ್ಲಿ ಸೇರಿಸಲಾಯಿತು ಎಂದು ಅವರು ಹೇಳಿದ್ದಾರೆ. ಸಾರ್ವಜನಿಕ ಆಕ್ರೋಶದ ನಂತರ, ಅವರ ಹೆಸರನ್ನು 1982 ರಲ್ಲಿ ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಯಿತು ಮತ್ತು ಜನವರಿ 1983 ರಲ್ಲಿ ಮತ್ತೆ ಸೇರಿಸಲಾಯಿತು ಎಂದು ಮಾಳವಿಯಾ ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಆದಾಗ್ಯೂ, ಆ ಸಲವೂ ಮತದಾರರ ಪಟ್ಟಿಯಲ್ಲಿ ಅವರು ಹೆಸರು ನೋಂದಣಿ ದೋಷಪೂರಿತವಾಗಿತ್ತು ಮತ್ತು ಏಪ್ರಿಲ್ 1983 ರಲ್ಲಿ ಅವರಿಗೆ ಅಧಿಕೃತವಾಗಿ ಪೌರತ್ವ ನೀಡಲಾಗುವುದಕ್ಕೆ ತಿಂಗಳುಗಳ ಮೊದಲು ಇದನ್ನು ಮಾಡಲಾಯಿತು ಎಂದು ಮಾಳವಿಯಾ ಗಮನಸೆಳೆದಿದ್ದಾರೆ.
ನೋಂದಣಿಗೆ ಅರ್ಹತಾ ದಿನಾಂಕ ಜನವರಿ 1, 1983 – ಆದರೂ ಅವರಿಗೆ ಏಪ್ರಿಲ್ 30, 1983 ರಂದು ಭಾರತೀಯ ಪೌರತ್ವವನ್ನು ನೀಡಲಾಯಿತು. ಸೋನಿಯಾ ಗಾಂಧಿಯವರ ಹೆಸರು ಮೂಲಭೂತ ಪೌರತ್ವ ಅವಶ್ಯಕತೆಗಳನ್ನು ಪೂರೈಸದೆ ಎರಡು ಬಾರಿ ಮತದಾರರ ಪಟ್ಟಿಯಲ್ಲಿ ಪ್ರವೇಶಿಸಿದೆ. ಇದು ಸ್ಪಷ್ಟ ಚುನಾವಣಾ ದುಷ್ಕೃತ್ಯವಲ್ಲದಿದ್ದರೆ, ಇನ್ನೇನು?” ಎಂದು ಮಾಳವಿಯಾ ಪ್ರಶ್ನಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement