ಮಂಗಳೂರು: ಧರ್ಮಸ್ಥಳದಲ್ಲಿ ಶವಗಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಹೊಸ ತಿರುವು ಸಿಗುತ್ತಿದೆ. ಹಲವು ವರ್ಷಗಳ ಹಿಂದೆ ಅನೇಕ ಶವಗಳನ್ನು ಶವಗಳನ್ನು ತಾನು ಹೂತಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿ ಎಸ್ ಐಟಿ ಅಧಿಕಾರಿಗಳ ಮುಂದೆ ಶೋಧಕಾರ್ಯಕ್ಕೆ ಹೋಗುತ್ತಿದ್ದ ಮುಖವಾಡ ತೊಟ್ಟ ಅನಾಮಿಕನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಳ್ಳು ಮಾಹಿತಿ ನೀಡಿದ್ದ ಆರೋಪದಡಿ ಈತನನ್ನು ಬಂಧಿಸಲಾಗಿದೆ. ಸಾಕ್ಷಿ ಸಂರಕ್ಷಣಾ ಯೋಜನೆಯಡಿ ರಕ್ಷಣೆ ಪಡೆದಿದ್ದ ಅನಾಮಿಕ ದೂರುದಾರನನ್ನು ಎಸ್‌ಐಟಿ ಬಂಧಿಸಿದ್ದು, ದೂರಿನಲ್ಲಿ ಸುಳ್ಳು ಮಾಹಿತಿ ಮತ್ತು ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಹೊಸ ಎಫ್‌ಐಆರ್ ದಾಖಲಾಗಿದೆ.
ಸಮಾಧಿ ಸ್ಥಳಗಳಲ್ಲಿ ಅಸ್ತಿಪಂಜರಗಳು ಪತ್ತೆಯಾಗಿಲ್ಲ. ಹೀಗಾಗಿ ಬಂಧಿತನ ವಿಚಾರಣೆ ಮುಂದುವರೆದಿದೆ. ಅನೇಕ ಶವಗಳನ್ನು ಹಲವು ಸ್ಥಳಗಳಲ್ಲಿ ಹೂಳಿರುವುದಾಗಿ ಹೇಳಿಕೊಂಡಿದ್ದ ಧರ್ಮಸ್ಥಳ ದೇವಾಲಯದ ಆಡಳಿತ ಮಂಡಳಿಯ ಮಾಜಿ ಸ್ವಚ್ಛತಾ ಕಾರ್ಯಕರ್ತನನ್ನು ರಾತ್ರಿಯಿಡೀ ವಿಚಾರಣೆ ನಡೆಸಿದ ನಂತರ ಇಂದು, ಶನಿವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಈತನನ್ನು ಬಂಧಿಸಲಾಯಿತು ಎಂದು ಹೇಳಲಾಗಿದೆ.
ಸುಳ್ಳು ಸಾಕ್ಷ್ಯವನ್ನು ಒದಗಿಸಿದ ಆರೋಪದ ಮೇಲೆ ಈತನನ್ನು ಬಂಧಿಸಲಾಯಿತು. ಈತನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು. ದೂರುದಾರರನ್ನು ವೈದ್ಯಕೀಯ ತಪಾಸಣೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
1998 ಮತ್ತು 2014 ರ ನಡುವೆ ಹಲವಾರು ಅಪ್ರಾಪ್ತ ವಯಸ್ಕರು ಮತ್ತು ಮಹಿಳೆಯರನ್ನು ಸಮಾಧಿ ಮಾಡಿದ್ದೇನೆ ಎಂದು ಈತ ಹೇಳಿಕೊಂಡ 15 ಶಂಕಿತ ಸ್ಥಳಗಳಲ್ಲಿ, ಎಸ್‌ಐಟಿ ಅಗೆದು ಶವಗಳಿ ಅವಶೇಷಗಳಿಗಾಗಿ ಹುಡುಕಾಟ ನಡೆಸಿತ್ತು. ಕೇವಲ ಒಬ್ಬ ಪುರುಷನ ಅಸ್ಥಿಪಂಜರದ ಅವಶೇಷಗಳು ಸ್ಥಳ ಸಂಖ್ಯೆ 6 ರಲ್ಲಿ ಕಂಡುಬಂದಿತ್ತು. ಆತ ತೋರಿಸಿದ್ದ ಉಳಿದ್ಯಾವ ಸ್ಥಳಗಳಲ್ಲಿಯೂ ಯಾವುದೇ ಅವಶೇಷಗಳು ಕಂಡುಬಂದಿರಲಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ