ಭಾರತದ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಂನ ಮೊದಲ ಹಾರಾಟ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಡಿಆರ್‌ ಡಿಒ | ವೀಕ್ಷಿಸಿ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಒಡಿಶಾ ಕರಾವಳಿಯಲ್ಲಿ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (IADWS)ನ ಮೊದಲ ಹಾರಾಟ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು. ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ನಡೆದ ಮೂರುವರೆ ತಿಂಗಳ ನಂತರ ಈ ಹೊಸ ವಾಯು ರಕ್ಷಣಾ ವ್ಯವಸ್ಥೆಯ ಹಾರಾಟ ಪರೀಕ್ಷೆಗಳು ನಡೆದವು.
ಶನಿವಾರ ಒಡಿಶಾ ಕರಾವಳಿಯಿಂದ 12:30 ಗಂಟೆಗಳ ನಂತರ ಸ್ಥಳೀಯ ವಾಯು ರಕ್ಷಣಾ ವ್ಯವಸ್ಥೆಯನ್ನು ಹಾರಾಟ-ಪರೀಕ್ಷೆ ಮಾಡಲಾಯಿತು.
ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (IADWS)ಬಹು-ಹಂತದ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು, ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿಗಳು, ಬಹಳ ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ (VSHORADS) ಕ್ಷಿಪಣಿಗಳು ಮತ್ತು ಹೆಚ್ಚಿನ ಶಕ್ತಿಯ ಲೇಸರ್ ಆಧಾರಿತ ನಿರ್ದೇಶನ ಶಕ್ತಿ ಶಸ್ತ್ರಾಸ್ತ್ರಗಳು (DEW) ವ್ಯವಸ್ಥೆಯನ್ನು ಒಳಗೊಂಡಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ ಪ್ಲಾಟ್‌ಫಾರ್ಮ್‌ ಅಭಿವೃದ್ಧಿಪಡಿಸಿದ ಡಿಆರ್‌ಡಿಒ (DRDO) ಮತ್ತು ಸಶಸ್ತ್ರ ಪಡೆಗಳಿಗೆ ಹಾರಾಟ ಪರೀಕ್ಷೆಗಳು ಯಶಸ್ವಿಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ” ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್(IADWS) ನ ಯಶಸ್ವಿ ಅಭಿವೃದ್ಧಿಗಾಗಿ ಡಿಆರ್‌ಡಿಒ, ಭಾರತೀಯ ಸಶಸ್ತ್ರ ಪಡೆಗಳು ಮತ್ತು ಉದ್ಯಮವನ್ನು ನಾನು ಅಭಿನಂದಿಸುತ್ತೇನೆ. ಈ ವಿಶಿಷ್ಟ ಹಾರಾಟ ಪರೀಕ್ಷೆಯು ನಮ್ಮ ದೇಶದ ಬಹು-ಪದರದ ವಾಯು-ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಮತ್ತು ಶತ್ರುಗಳ ವೈಮಾನಿಕ ದಾಳಿಗಳ ವಿರುದ್ಧ ಪ್ರಮುಖ ರಕ್ಷಣಾ ವ್ಯವಸ್ಥೆಯಾಗಿ ಭಾರತದ ರಕ್ಷಣೆಯನ್ನು ಬಲಪಡಿಸಲಿದೆ” ಎಂದು ರಾಜನಾಥ ಸಿಂಗ್ X ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಭಾರತವು ಪ್ರಸ್ತುತ ಯಾವ ವಾಯು ರಕ್ಷಣಾ ವ್ಯವಸ್ಥೆ ಬಳಸುತ್ತಿದೆ?
‘ಆಪರೇಷನ್ ಸಿಂಧೂರ’ ಸಮಯದಲ್ಲಿ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಿದವು, ಪಾಕಿಸ್ತಾನದೊಂದಿಗಿನ ಹೆಚ್ಚಿದ ಉದ್ವಿಗ್ನತೆಯ ನಡುವೆ ಬಹು ಡ್ರೋನ್‌ಗಳು, ಕ್ಷಿಪಣಿಗಳು, ಮೈಕ್ರೋ-ಯುಎವಿ(UAV)ಗಳು ಮತ್ತು ಓಡಾಡುವ ಯುದ್ಧ ಶಸ್ತ್ರಾಸ್ತ್ಗಳನ್ನು ಪರಿಣಾಮಕಾರಿಯಾಗಿ ತಡೆದು ಜಾಗತಿಕವಾಗಿ ಮಹತ್ವದ ರಕ್ಷಣಾ ಸಾಮರ್ಥ್ಯವೆಂದು ಸ್ಥಾಪಿಸಿಕೊಂಡವು.
S-400 ವಾಯು ರಕ್ಷಣಾ ವ್ಯವಸ್ಥೆ
ಆಕಾಶ ವಾಯು ರಕ್ಷಣಾ ವ್ಯವಸ್ಥೆ
ಸ್ಪೈಡರ್‌ (SPYDER) ವಾಯು ರಕ್ಷಣಾ ವ್ಯವಸ್ಥೆ
ಬರಾಕ್‌-8 ಎಂಕೆ-ಎಸ್‌ಎಎಮ್‌ (Barak-8 MK-SAM)
ಇಗ್ಲಾ (Igla)-S
9K33 Osa AK
2K12 Kub
QRSAM ಭಾರತದ ಈ ರಕ್ಷನಾ ವ್ಯವಸ್ಥೆಗಳು ಶಕ್ತಿ ನೀಡಿದವು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement