ರಾಜಸ್ಥಾನಿ ವಿದ್ಯಾಪ್ರಚಾರಕ ಮಂಡಳಿ ಚುನಾವಣೆ : ಭವರಲಾಲ ಜೈನ್‌ ತಂಡಕ್ಕೆ ಭಜರಿ ಜಯ

ಹುಬ್ಬಳ್ಳಿ : ಎಸ್‌ಜೆಆರ್‌ವಿ ಮಂಡಳದ ಶಾಂತಿನಿಕೇತನ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಉದ್ಯಮಿ ಹಾಗೂ ಸಮಾಜ ಸೇವಕ ಭವರಲಾಲ ಸಿ.ಜೈನ್‌ (ಲಕ್ಕಿ) ಅವರು ಅಧ್ಯಕ್ಷರಾಗಿ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಚಲಾವಣೆಯಾದ ಮತಗಳಲ್ಲಿ 114 ಮತಗಳನ್ನು ಪಡೆಯುವ ಮೂಲಕ ಭವರಲಾಲ ಸಿ.ಜೈನ್‌ (ಲಕ್ಕಿ) ಅವರು ತಮ್ಮ ಪ್ರತಿಸ್ಪರ್ಧಿಯಾಗಿದ್ದ ರಮೇಶ ಬಾಫಣಾ ಅವರನ್ನು 36 ಮತಗಳಿಂದ ಪರಾಭವಗೊಳಿಸಿದ್ದಾರೆ. ಭವರಲಾಲ ಸಿ.ಜೈನ್‌ (ಲಕ್ಕಿ) ನೇತೃತ್ವದ 11 ಸದಸ್ಯರ ಗುಂಪು ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಆಡಳಿತ ಮಂಡಳಿ ಚುನಾವಣೆಯಲ್ಲಿ ಒಟ್ಟು 216 ಮತಗಳ ಪೈಕಿ 194 ಮತಗಳು ಚಲಾವಣೆಯಾಗಿದ್ದವು. ಭವರಲಾಲ ಸಿ.ಜೈನ್‌ (ಲಕ್ಕಿ) ಅವರು 114 ಮತಗಳನ್ನು ಪಡೆದು ಜಯಗಳಿಸಿದರೆ ರಮೇಶ ಬಾಫಣಾ ಅವರು 78 ಮತಗಳನ್ನು ಪಡೆದರು. ಎರಡು ಮತಗಳು ಅಮಾನ್ಯಗೊಂಡವು.

ಭವರಲಾಲ ಸಿ.ಜೈನ್‌ (ಲಕ್ಕಿ) ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಭರತ ಭಂಡಾರಿ ಮುಖ್ಯ ಕಾರ್ಯದರ್ಶಿಯಾಗಿ, ಮಹೇಂದ್ರ ಪಾಲ್ಗೋತಾ ಉಪಾಧ್ಯಕ್ಷರಾಗಿ, ಪೂರಣ್‌ ನಹತಾ ಖಜಾಂಚಿಯಾಗಿ ಆಯ್ಕೆಯಾದವರು. ಆಡಳಿತ ಮಂಡಳಿ ನಿರ್ದೇಶಕರಾಗಿ ಸೋಹನಲಾಲ ಜೈನ್‌, ಮನೋಜ ಜೈನ್‌, ವಿವೇಕ ಶಾ, ಪರವೇಶ ಕೊಠಾರಿ, ಅಭಿಷೇಕ ಮೆಹ್ತಾ, ಮಹಾವೀರ ಶ್ರೀಮಾಲ್‌, ಪೃಥ್ವಿರಾಜ ಸುರಾನಾ, ಮನೋಜಕುಮಾರ ಪೊಮಾನಿ ಜಯಗಳಿಸಿದ್ದಾರೆ.
ಎಸ್‌ಜೆಆರ್‌ವಿ ಮಂಡಳ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ, ಶಾಂತಿ ನಿಕೇತನ ಪಿಯು ಕಾಲೇಜ್‌, ಶಾಂತಿನಿಕೇತನ ಪದವಿ ಕಾಲೇಜ್‌, ಶಾಮತಿನಿಕೇತನ ಹಿಂದಿ ಹೈಸ್ಕೂಲ್‌ ಹಾಗೂ ಮಹಾವೀರ ಶಿಶು ವಿಹಾರ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement