ಅಮೆರಿಕ ಅಧ್ಯಕ್ಷ ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಹತ್ಯೆ: ಕಾಲೇಜು ಛಾವಣಿ ಮೇಲೆ ಶಂಕಿತ ಶೂಟರ್‌ ಇರುವಿಕೆ ತೋರಿಸಿದ ವೀಡಿಯೊ

ವಾಷಿಂಗ್ಟನ್: ಜನಪ್ರಿಯ ಬಲಪಂಥೀಯ ಕಾರ್ಯಕರ್ತ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಾಪ್ತ ಚಾರ್ಲಿ ಕಿರ್ಕ್ ಅವರನ್ನು ಬುಧವಾರ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಘಟನೆಯ ವೀಡಿಯೊದಲ್ಲಿ 31 ವರ್ಷದ ರೇಡಿಯೋ ನಿರೂಪಕ ಮತ್ತು ಪಾಡ್‌ಕ್ಯಾಸ್ಟರ್ ಹೊರಾಂಗಣದಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಕ್ಷಣಗಳ ನಂತರ, ಕಿರ್ಕ್ ತನ್ನ ಬಲಗೈಯನ್ನು ಮೇಲಕ್ಕೆತ್ತಿದ್ದು, ಹಾಗೂ ಅವರ ಕುತ್ತಿಗೆಯ ಎಡಭಾಗದಿಂದ ದೊಡ್ಡ ಪ್ರಮಾಣದ ರಕ್ತ ಚಿಮ್ಮಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಪ್ರಾರಂಭಿ ಕಿರುಚಾಡುತ್ತ ದಿಗ್ಭ್ರಮೆಗೊಂಡ ಪ್ರೇಕ್ಷಕರು ಓಡುತ್ತಿರುವುದು ಕಂಡುಬಂದಿದೆ.
ಘಟನಾ ಪ್ರದೇಶದಿಂದ 100-200 ಗಜಗಳಷ್ಟು (ಸುಮಾರು 90-180 ಮೀಟರ್) ದೂರದಲ್ಲಿರುವ ಕ್ಯಾಂಪಸ್ ಕಟ್ಟಡವಾದ ಶಾಲೆಯ ಲೂಸೀ ಸೆಂಟರ್‌ನ ಛಾವಣಿಯಿಂದ ಹಾರಿದ ಒಂದೇ ಗುಂಡೇಟಿನಿಂದ ಕಿರ್ಕ್ ಕೊಲ್ಲಲ್ಪಟ್ಟರು ಎಂದು ಅಧಿಕಾರಿಗಳು ಹೇಳುತ್ತಾರೆ.

ಗುಂಡಿನ ದಾಳಿಗೆ ಮೊದಲು ಮತ್ತು ನಂತರ ರೆಕಾರ್ಡ್ ಮಾಡಲಾದ ವೀಡಿಯೊಗಳು ಲೂಸೀ ಸೆಂಟರ್‌ನ ಛಾವಣಿಯ ಮೇಲೆ ಕಪ್ಪು ಬಟ್ಟೆ ಧರಿಸಿದ ಆಕೃತಿ ಚಲಿಸುತ್ತಿರುವುದನ್ನು ತೋರಿಸಿವೆ. ಹತ್ಯೆಗೆ ಕೆಲವೇ ಕ್ಷಣಗಳ ಮೊದಲು ರೆಕಾರ್ಡ್ ಮಾಡಲಾದ ಹವ್ಯಾಸಿ ದೃಶ್ಯಗಳು ಕಟ್ಟಡದ ಛಾವಣಿಯ ಅಂಚಿನಲ್ಲಿ ಮಲಗಿರುವ ಆಕೃತಿಯನ್ನು ತೋರಿಸಿವೆ. ಗುಂಡಿನ ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ತೆಗೆದ ಮತ್ತೊಂದು ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಮೇಲ್ಛಾವಣಿಯ ಮೇಲೆ ಓಡುತ್ತಿರುವುದು ಸೆರೆಯಾಗಿದೆ.
ಕಿರ್ಕ್ ಕಾರ್ಯಕ್ರಮದಲ್ಲಿ ಮಾತನಾಡಲು ಪ್ರಾರಂಭಿಸಿದ ಸುಮಾರು 20 ನಿಮಿಷಗಳ ನಂತರ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ. ಕಾಕತಾಳೀಯವೆಂದರೆ, ಗುಂಡು ಹಾರಿಸಿದ ಕ್ಷಣದಲ್ಲಿ ಅವರು ಅಮೆರಿಕದಲ್ಲಿನ ಬಂದೂಕು ಹಿಂಸಾಚಾರ ಮತ್ತು ಸಾಮೂಹಿಕ ಗುಂಡಿನ ದಾಳಿಯ ಬಗ್ಗೆ ಮಾತನಾಡುತ್ತಿದ್ದರು.

ಉತಾಹ್ ಸಾರ್ವಜನಿಕ ಸುರಕ್ಷತಾ ಇಲಾಖೆಯು ಕಿರ್ಕ್ “ಗುಂಡಿನ ದಾಳಿ”ಯಲ್ಲಿ ಕೊಲ್ಲಲ್ಪಟ್ಟರು ಎಂದು ಹೇಳಿದೆ. ಆದರೆ ಶಂಕಿತ ಶೂಟರ್ ನನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಉತಾಹ್ ಮೇಯರ್ ಡೇವಿಡ್ ಯಂಗ್ ಹೇಳಿದ್ದಾರೆ.
ಈವರೆಗೆ, ದಾಳಿಯ ಹಿಂದಿನ ಯಾವುದೇ ಉದ್ದೇಶವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ, ಆದರೆ ಗುಂಡಿನ ದಾಳಿಯ ಸಂದರ್ಭಗಳು ಇದು ರಾಜಕೀಯ ಹಿಂಸಾಚಾರದ ಒಂದು ಭಾಗವಾಗಿದೆ ಎಂಬ ಕಳವಳ ಹೆಚ್ಚಿಸಿವೆ.
ಜೂನ್‌ನಲ್ಲಿ ಮಿನ್ನೇಸೋಟ ರಾಜ್ಯದ ಶಾಸಕಿ ಮತ್ತು ಅವರ ಪತಿಯ ಮನೆಯಲ್ಲಿ ಹತ್ಯೆಯಾಗಿದ್ದರು, ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೊಲೊರಾಡೋ ಮೆರವಣಿಗೆಯ ಮೇಲೆ ಬಾಂಬ್ ದಾಳಿ ಮತ್ತು ಏಪ್ರಿಲ್‌ನಲ್ಲಿ ಯಹೂದಿಯಾಗಿರುವ ಪೆನ್ಸಿಲ್ವೇನಿಯಾದ ಗವರ್ನರ್ ಅವರ ಮನೆಗೆ ಬೆಂಕಿ ಹಚ್ಚಿರುವುದು ಇತ್ತೀಚಿನ ದಾಳಿಗಳಲ್ಲಿ ಸೇರಿವೆ. ಈ ಘಟನೆಗಳಲ್ಲಿ ಅತ್ಯಂತ ಕುಖ್ಯಾತವಾದ ದಾಳಿಯೆಂದರೆ ಕಳೆದ ವರ್ಷ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಟ್ರಂಪ್ ಅವರ ಗುಂಡಿನ ದಾಳಿ ನಡೆದಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement