ವೀಡಿಯೊಗಳು…| ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಮೇಲೆ ಗುಂಡು ಹಾರಿಸಿ ಹತ್ಯೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರ ಚಾರ್ಲಿ ಕಿರ್ಕ್ ಅವರನ್ನು ಬುಧವಾರ ಉತಾಹ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಇದು ಅಮೆರಿಕದಾದ್ಯಂತ ರಾಜಕೀಯ ಹಿಂಸಾಚಾರದ ಬೆದರಿಕೆ ಬಗ್ಗೆ ಕಳವಳ ಉಂಟು ಮಾಡಿದೆ.
ಶಂಕಿತ ಶೂಟರ್ ನನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಉತಾಹ್‌ನ ಒರೆಮ್‌ನ ಮೇಯರ್ ಡೇವಿಡ್ ಯಂಗ್ ಹೇಳಿದ್ದಾರೆ.
ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಿಂದ ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್ ಗೆ ಅಪ್‌ಲೋಡ್‌ ಮಾಡಲಾದ ವೀಡಿಯೊಗಳು, “ದಿ ಅಮೇರಿಕನ್ ಕಮ್‌ಬ್ಯಾಕ್” ಮತ್ತು “ಪ್ರೂವ್ ಮಿ ರಾಂಗ್” ಎಂಬ ಘೋಷಣೆಗಳು ಬರೆದಿದ್ದ ಬಿಳಿ ಟೆಂಟ್ ಅಡಿಯಲ್ಲಿ ಕುಳಿತ ಕಿರ್ಕ್ ಮೈಕ್‌ ಅನ್ನಯ ಕೈಯಲ್ಲಿ ಹಿಡಿದು ಮಾತನಾಡುತ್ತಿರುವುದನ್ನು ತೋರಿಸಿವೆ. ಒಂದೇ ಗುಂಡು ಮೊಳಗುತ್ತದೆ ಮತ್ತು ಕಿರ್ಕ್ ತನ್ನ ಬಲಗೈ ಅನ್ನು ಮೇಲಕ್ಕೆ ಚಾಚಿ ಕುತ್ತಿಗೆ ಹಿಡಿದುಕೊಳ್ಳುತ್ತಿರುವುದನ್ನು ತೋರಿಸುತ್ತದೆ. ಅವರ ಕುತ್ತಿಗೆಯ ಎಡಭಾಗದಿಂದ ದೊಡ್ಡ ಪ್ರಮಾಣದ ರಕ್ತ ಸುರಿಯುತ್ತದೆ. ಜನರು ಓಡಿಹೋಗಲು ಪ್ರಾರಂಭಿಸುವ ಮೊದಲು ದಿಗ್ಭ್ರಮೆಗೊಂಡ ಅಲ್ಲಿದ್ದ ಜನರು ಕಿರುಚುವುದು ಕೇಳಿಬರುತ್ತದೆ.

“ಅವರಿಗೆ ಗುಂಡು ಹಾರಿಸಲಾಗಿದೆ ಎಂದು ನಾವು ದೃಢೀಕರಿಸುತ್ತಿದ್ದೇವೆ ಮತ್ತು ನಾವು ಚಾರ್ಲಿಗಾಗಿ ಪ್ರಾರ್ಥಿಸುತ್ತಿದ್ದೇವೆ” ಎಂದು ಟರ್ನಿಂಗ್ ಪಾಯಿಂಟ್ ಅಮೆರಿಕದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕ ಆಬ್ರೆ ಲೈಟ್ಷ್ ಹೇಳಿದ್ದಾರೆ.
ಕಿರ್ಕ್ ತನ್ನ ಲಾಭರಹಿತ ರಾಜಕೀಯ ಸಂಸ್ಥೆ ಆಯೋಜಿಸಿದ್ದ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ಗುಂಡಿನ ದಾಳಿಗೆ ಸ್ವಲ್ಪ ಮೊದಲು, ಕಿರ್ಕ್ ಪ್ರೇಕ್ಷಕರಿಗೆ ಸಾಮೂಹಿಕ ಗುಂಡಿನ ದಾಳಿ ಮತ್ತು ಬಂದೂಕು ಹಿಂಸಾಚಾರದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.
“ಕಳೆದ 10 ವರ್ಷಗಳಲ್ಲಿ ಎಷ್ಟು ಟ್ರಾನ್ಸ್‌ಜೆಂಡರ್ ಅಮೆರಿಕನ್ನರು ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದಾರೆಂದು ನಿಮಗೆ ತಿಳಿದಿದೆಯೇ?” ಎಂದು ಪ್ರೇಕ್ಷಕರೊಬ್ಬರು ಕೇಳಿದರು. ಕಿರ್ಕ್ “ತುಂಬಾ ಹೆಚ್ಚು” ಎಂದು ಉತ್ತರಿಸಿದರು.
“ಕಳೆದ 10 ವರ್ಷಗಳಲ್ಲಿ ಅಮೆರಿಕದಲ್ಲಿ ಎಷ್ಟು ಸಾಮೂಹಿಕ ಗುಂಡಿನ ದಾಳಿಕೋರರು ಇದ್ದಾರೆಂದು ನಿಮಗೆ ತಿಳಿದಿದೆಯೇ? ಎಂದು ಒಬ್ಬರು ಪ್ರಶ್ನಿಸಿದರು. “ಗ್ಯಾಂಗ್ ಹಿಂಸಾಚಾರವನ್ನು ಲೆಕ್ಕ ಹಾಕಿದ್ದೀರಾ ಅಥವಾ ಇಲ್ಲವಾ?” ಎಂದು ಕಿರ್ಕ್ ಮರುಪ್ರಶ್ನಿಸಿದರು.ನಂತರ ಒಂದೇ ಗುಂಡು ಮೊಳಗಿತು. ಅದು ಅವರಿಗೆ ಬಡಿಯಿತು.

ಈ ಕಾರ್ಯಕ್ರಮಕ್ಕೆ ಕ್ಯಾಂಪಸ್‌ನಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ವಿಶ್ವವಿದ್ಯಾನಿಲಯದ ಆಡಳಿತಾಧಿಕಾರಿಗಳು ಕಿರ್ಕ್ ಪಾಲ್ಗೊಳ್ಳುವುದನ್ನು ನಿಷೇಧಿಸುವಂತೆ ಒತ್ತಾಯಿಸುವ ಆನ್‌ಲೈನ್ ಅರ್ಜಿಗೆ ಸುಮಾರು 1,000 ಸಹಿಗಳು ಬಂದಿದ್ದವು.
ಕಳೆದ ವಾರ, ಕಿರ್ಕ್ ಉತಾಹ್ ಕಾಲೇಜುಗಳಿಗೆ ತನ್ನ ಭೇಟಿ ವಿವಾದ ಸೃಷ್ಟಿಸುತ್ತಿರುವುದನ್ನು ತೋರಿಸುವ ಸುದ್ದಿ ತುಣುಕುಗಳ ಚಿತ್ರಗಳನ್ನು X ನಲ್ಲಿ ಪೋಸ್ಟ್ ಮಾಡಿದ್ದರು. “ಉತಾಹ್‌ನಲ್ಲಿ ಏನು ನಡೆಯುತ್ತಿದೆ?” ಎಂದು ಅವರು ಬರೆದಿದ್ದರು.
ಟ್ರಂಪ್ ಮತ್ತು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಚುನಾಯಿತ ಅಧಿಕಾರಿಗಳ ಗುಂಪೊಂದು ಗುಂಡಿನ ದಾಳಿಯನ್ನು ಖಂಡಿಸಿದರು ಮತ್ತು ಕಿರ್ಕ್‌ಗಾಗಿ ಪ್ರಾರ್ಥನೆ ಸಲ್ಲಿಸಿದರು.
“ಗುಂಡಿನ ದಾಳಿಗೆ ಒಳಗಾದ ಚಾರ್ಲಿ ಕಿರ್ಕ್‌ಗಾಗಿ ನಾವೆಲ್ಲರೂ ಪ್ರಾರ್ಥಿಸಬೇಕು. ಅವರು ಒಬ್ಬ ಮಹಾನ್ ವ್ಯಕ್ತಿ. ದೇವರು ಅವರನ್ನು ಆಶೀರ್ವದಿಸಲಿ!” ಟ್ರಂಪ್ ತಮ್ಮ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 31 ವರ್ಷದ ಕಿರ್ಕ್ ಅವರನ್ನು “ಶ್ರೇಷ್ಠ ಮತ್ತು ದಂತಕಥೆ” ಎಂದು ಹೊಗಳಿದರು.
“ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಚಾರ್ಲಿಗಿಂತ ಉತ್ತಮವಾಗಿ ಯಾರೂ ಯುವಕರ ಹೃದಯವನ್ನು ಅರ್ಥಮಾಡಿಕೊಂಡಿರಲಿಲ್ಲ ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

https://x.com/i/status/1965869531664146561

ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರದ ಏರಿಕೆಯ ಮಧ್ಯೆ ಗುಂಡಿನ ದಾಳಿ ನಡೆದಿದೆ. ಈ ದಾಳಿಗಳಲ್ಲಿ ಜೂನ್‌ನಲ್ಲಿ ಮಿನ್ನೇಸೋಟ ರಾಜ್ಯದ ಶಾಸಕಿ ಮತ್ತು ಅವರ ಪತಿಯ ಅವರ ಮನೆಯಲ್ಲಿ ಹತ್ಯೆ, ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೊಲೊರಾಡೋ ಮೆರವಣಿಗೆಯ ಮೇಲೆ ನಡೆದ ಬೆಂಕಿ ಬಾಂಬ್ ದಾಳಿ ಮತ್ತು ಏಪ್ರಿಲ್‌ನಲ್ಲಿ ಯಹೂದಿಯಾಗಿರುವ ಪೆನ್ಸಿಲ್ವೇನಿಯಾದ ಗವರ್ನರ್ ಅವರ ಮನೆಗೆ ಬೆಂಕಿ ಹಚ್ಚಲಾಯಿತು. ಈ ಘಟನೆಗಳಲ್ಲಿ ಅತ್ಯಂತ ಕುಖ್ಯಾತವಾದದ್ದು ಕಳೆದ ವರ್ಷ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದು.

ಕಾರ್ಯಕ್ರಮದಲ್ಲಿದ್ದ ರಿಪಬ್ಲಿಕನ್ ಪಕ್ಷದ ಮಾಜಿ ಉತಾಹ್ ಕಾಂಗ್ರೆಸ್ ಸದಸ್ಯ ಜೇಸನ್ ಚಾಫೆಟ್ಜ್, ಫಾಕ್ಸ್ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಒಂದು ಗುಂಡು ಹಾರಿಸುವುದನ್ನು ಕೇಳಿದೆ ಮತ್ತು ಕಿರ್ಕ್ ಬೀಳುವುದನ್ನು ನೋಡಿದೆ ಎಂದು ಹೇಳಿದರು.”ಇದು ಹತ್ತಿರದಿಂದ ಗುಂಡು ಹಾರಿಸಿದಂತೆ ತೋರುತ್ತಿತ್ತು” ಎಂದು ಚಾಫೆಟ್ಜ್ ಹೇಳಿದರು.ಕಾರ್ಯಕ್ರಮದಲ್ಲಿ ಲಘು ಪೊಲೀಸ್ ಭದ್ರತೆ ಇತ್ತು ಮತ್ತು ಕಿರ್ಕ್‌ಗೆ ಸ್ವಲ್ಪ ಭದ್ರತೆ ಇತ್ತು, ಆದರೆ ಅದು ಸಾಕಾಗಲಿಲ್ಲ ಎಂದು ಅವರು ಹೇಳಿದರು. “ಉತಾ ಭೂಮಿಯ ಮೇಲಿನ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ. ಆದ್ದರಿಂದ ನಮ್ಮಲ್ಲಿ ಈ ರೀತಿಯದ್ದು ಇರಲಿಲ್ಲ” ಎಂದು ಹೇಳಿದ್ದಾರೆ.
ಟರ್ನಿಂಗ್ ಪಾಯಿಂಟ್ ಅನ್ನು 2012 ರಲ್ಲಿ ಚಿಕಾಗೋದ ಉಪನಗರದಲ್ಲಿ, ಆಗ 18 ವರ್ಷದ ಕಿರ್ಕ್ ಮತ್ತು ಟೀ ಪಾರ್ಟಿ ಕಾರ್ಯಕರ್ತ ವಿಲಿಯಂ ಮಾಂಟ್ಗೊಮೆರಿ ಸ್ಥಾಪಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಉದಾರವಾದಿಗಳನ್ನು ಎದುರಿಸುವ ಕಿರ್ಕ್‌ನ ಉತ್ಸಾಹವು ಅಂತಿಮವಾಗಿ ಸಂಪ್ರದಾಯವಾದಿ ಹಣಕಾಸುದಾರರ ಪ್ರಭಾವಿ ಗುಂಪನ್ನು ಮನ ಗೆದ್ದಿತು.
ಆರಂಭಿಕ ಅನುಮಾನಗಳ ಹೊರತಾಗಿಯೂ, 2016 ರಲ್ಲಿ ಟ್ರಂಪ್ ಜಿಒಪಿ (GOP) ನಾಮನಿರ್ದೇಶನದಲ್ಲಿ ಗೆದ್ದ ನಂತರ ಟರ್ನಿಂಗ್ ಪಾಯಿಂಟ್ ಉತ್ಸಾಹದಿಂದ ಅವರನ್ನು ಬೆಂಬಲಿಸಿತು. ಸಾರ್ವತ್ರಿಕ ಚುನಾವಣಾ ಪ್ರಚಾರದ ಸಮಯದಲ್ಲಿ ಕಿರ್ಕ್ ಅಧ್ಯಕ್ಷರ ಹಿರಿಯ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್‌ಗೆ ವೈಯಕ್ತಿಕ ಸಹಾಯಕರಾಗಿ ಸೇವೆ ಸಲ್ಲಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement