ಸಾನ್ ಫ್ರಾನ್ಸಿಸ್ಕೋ: ಅಮೆರಿಕದ ಸಾನ್ ಫ್ರಾನ್ಸಿಸ್ಕೋ ಬೇ ಏರಿಯಾದ ಲೂಕಾಸ್ ವ್ಯಾಲಿ ನಗರದಲ್ಲಿ ಅಳಿಲು ಜನರ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಈ ಕೆಂಪುರಿಲ್ಲಿ ಅಳಿಲಿನಿಂದಾಗಿ ಕನಿಷ್ಠ ಇಬ್ಬರು ತುರ್ತು ಚಿಕಿತ್ಸೆಗೆ ದಾಖಲಾಗಿದ್ದು, ಇದು ಅಧಿಕಾರಿಗಳು ಈ ಅಳಿಲಿನ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವಂತೆ ಮಾಡಿದೆ.
ನಗರದ ಭಾಗಗಳಲ್ಲಿ ಹಾಕಿರುವ ಸೂಚನೆಗಳಲ್ಲಿ, ಒಂದರಲ್ಲಿ “ಎಚ್ಚರಿಕೆ: ಹಲ್ಲೆ ನಡೆಸುವ ಕೆಂಪುರಿಲ್ಲಿ!!!!!!!!!” ಎಂದು ಬರೆಯಲಾಗಿದೆ. ಮತ್ತೊಂದರಲ್ಲಿ “ಇದು ಹಾಸ್ಯವಲ್ಲ” ಎಂಬ ಎಚ್ಚರಿಕೆಯ ಸಂದೇಶಗಳು ಕಂಡುಬಂದಿವೆ.
ಎಬಿಸಿ (ABC) ನ್ಯೂಸ್ ವರದಿಯ ಪ್ರಕಾರ, ಈ ಕೆಂಪುರಿಲ್ಲಿ (ಅಳಿಲು) ಕನಿಷ್ಠ ಐದು ಮಂದಿ ಮೇಲೆ ದಾಳಿ ಮಾಡಿದ್ದು, ಅದೃಷ್ಟವಶಾತ್ ಗಂಭೀರ ಗಾಯಗಳಿಂದ ತಪ್ಪಿಸಿಕೊಂಡಿದ್ದಾರೆ. ಹಲ್ಲೆಗೊಳಗಾದವರು ಅನುಭವವನ್ನು ಹಂಚಿಕೊಂಡಿದ್ದಾರೆ.
“ಅಳಿಲು ನೆಲದಿಂದ ನೇರವಾಗಿ ನನ್ನ ಮುಖದತ್ತ ಜಿಗಿಯಿತು. ನಾನು ರಕ್ತದಲ್ಲಿ ಮುಳುಗಿದ್ದೆ. ತಕ್ಷಣ ತುರ್ತು ಚಿಕಿತ್ಸೆಗೆ ಓಡಿದೆ ಎಂದು ಲೂಕಾಸ್ ವ್ಯಾಲಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಸಬೆಲ್ ಕ್ಯಾಂಪೊಯ್ ಹೇಳಿದ್ದಾರೆ. ಸಾನ್ ರಫಾಯೆಲ್ನಲ್ಲಿ ಬೆಳಗಿನ ವಾಕಿಂಗ್ನಲ್ಲಿ ತೊಡಗಿದ್ದ ಜೋನ್ ಹೆಬ್ಲಾಕ್ ಕೂಡ ಹಲ್ಲೆಗೊಳಗಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
ಈ ಸುದ್ದಿ ವೈರಲ್ ಆದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ಬಗ್ಗೆ ಬೆರಗು ವ್ಯಕ್ತಪಡಿಸಿದ್ದಾರೆ. “ಇದು ನನ್ನನ್ನು ಶಾಶ್ವತವಾಗಿ ಒತ್ತಡಕ್ಕೆ ಒಳಪಡಿಸಿದೆ ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. “ಇದು ಯಾರೋ ವ್ಯಕ್ತಿಯ ಪೆಟ್ ಆಗಿರಬಹುದು. ನನಗೂ ಪೆಟ್ ಕೆಂಪುರಿಲ್ಲಿಯ ಅನುಭವವಿದೆ. ಅದು ನನಗೆ ಹಣ್ಣಿಗಾಗಿ (ಪೇರಲೆ) ದಾಳಿ ಮಾಡಿತ್ತು. ಮೂರ್ನಾಲ್ಕು ಬಾರಿ ಹಲ್ಲೆ ಮಾಡಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ.
ನಾನು ಗಾಲ್ಫ್ ಮೈದಾನದಲ್ಲಿ ಕೆಲಸ ಮಾಡುತ್ತಿದ್ದೆ. ಪ್ರತಿ ಬಾರಿ ಎಂಟ್ರಿ ಕೊಡುವಾಗ ಅಲ್ಲಿದ್ದ ರಂಧ್ರದಿಂದ ಈ ಕೆಂಪುರಿಲ್ಲಿ (ಅಳಿಲು) ಹೊರಬಂದು ದಾಳಿ ಮಾಡುತ್ತಿತ್ತು ಎಂದು ಮೂರನೆಯವರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ