ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯ ಶವ ಪತ್ತೆ

ಬೆಳಗಾವಿ : ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯ ತಿನೈಘಾಟ್ ಸೇತುವೆ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ದುರ್ಗಾ ನಗರದ ಅಶ್ವಿನಿ ಬಾಬುರಾವ್ ಪಾಟೀಲ ಮೃತ ಮಹಿಳೆ ಎಂದು ಗುರಿತಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತೆ ಎಂದು ತಿಳಿದುಬಂದಿದೆ. ಅಕ್ಟೋಬರ್ 2 ರಂದು ಅವರು ಕಕ್ಕೇರಿ ಜಾತ್ರೆಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಜಾತ್ರೆಯಿಂದ ವಾಪಸ್ ಆಗಿದ್ದ ಅಶ್ವಿನಿ ಬೀಡಿ ಗ್ರಾಮದಲ್ಲಿ ಇಳಿದಿದ್ದರು. ಆದರೆ ಮನೆಗೆ ಬಂದಿರಲಿಲ್ಲ, ತವರು ಮನೆಗೂ ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಶ್ವಿನಿ ಮಗ ಪೊಲೀಸರುಗೆ ದೂರು ನೀಡಿದ್ದರು.
ವಾಹನವೊಂದರ ಚಾಲಕ ತಿನೈಘಾಟ್ ಸೇತುವೆ ಕೆಳಗೆ ಮಹಿಳೆಯೊಬ್ಬರ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯ ಮೃತದೇಹ ಮೇಲಕ್ಕೆತ್ತಿದ್ದಾರೆ. ಶವದ ಪಕ್ಕದಲ್ಲಿದ್ದ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಇದು ಕೊಲೆಯೋ? ಆತ್ಮಹತ್ಯೆಯೋ? ಆಕಸ್ಮಿಕ ಘಟನೆಯೋ? ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement