ಹಂಗೇರಿಯನ್ ಲೇಖಕ ಲಾಸ್ಲೋ ಕ್ರಾಸ್ಜ್ನಾಹೋರ್ಕೈಗೆ 2025ರ ಸಾಹಿತ್ಯದ ನೊಬೆಲ್ ಪ್ರಶಸ್ತಿ ಘೋಷಣೆ

ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್‌ ಪ್ರಶಸ್ತಿ ಇಂದು,ಗುರುವಾರ ಘೋಷಣೆಯಾಗಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2025 ರ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು(Nobel Peace Prize 2025) ಹಂಗೇರಿಯನ್ ಲೇಖಕ ಲಾಸ್ಜ್ಲೋ ಕ್ರಾಸ್ಜ್ನಾಹೋರ್ಕೈ ಅವರಿಗೆ ಘೋಷಿಸಿದೆ. ತಮ್ಮ ತಾತ್ವಿಕ ಗದ್ಯಕ್ಕಾಗಿ ಪ್ರಸಿದ್ಧರಾದ ಕ್ರಾಸ್ನಾಹೋರ್ಕೈ, ಆಧುನಿಕ ಸಾಹಿತ್ಯವನ್ನು ಪುನರ್‌ ರೂಪಿಸಿದ್ದಕ್ಕಾಗಿ ಅವರು ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕ್ರಾಸ್ನಾಹೋರ್ಕೈ ಮಧ್ಯ ಯುರೋಪಿಯನ್ ಸಂಪ್ರದಾಯದಲ್ಲಿ ಒಬ್ಬ ಮಹಾನ್ ಮಹಾಕಾವ್ಯ ಬರಹಗಾರರಾಗಿದ್ದಾರೆ. ಕ್ರಾಸ್ನಾಹೋರ್ಕೈ 1954 ರಲ್ಲಿ ರೊಮೇನಿಯನ್ ಗಡಿಯ ಬಳಿ ಆಗ್ನೇಯ ಹಂಗೇರಿಯಲ್ಲಿರುವ ಗ್ಯುಲಾ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು. 1985 ರಲ್ಲಿ ಪ್ರಕಟವಾದ ಅವರ ಮೊದಲ ಕಾದಂಬರಿ ‘ಸಟಂಟ್ಯಾಂಗೊ’ ಇದೇ ರೀತಿಯ ದೂರದ ಗ್ರಾಮೀಣ ಪ್ರದೇಶದ ಸಂವೇದನೆಯ ಮಹತ್ವದ ಕೃತಿಯಾಗಿದೆ. ದೇಶದ ಸಾಮಾಜಿಕ ಅಶಾಂತಿಯನ್ನು ಚಿತ್ರಿಸುವಲ್ಲಿನ ನಿಖರತೆಯಿಂದಾಗಿ ಅವರ ‘ಹರ್ಷ್ಟ್ 07769’ ಅನ್ನು ಸಮಕಾಲೀನ ಜರ್ಮನ್ ಕಾದಂಬರಿ ಎಂದು ವಿವರಿಸಲಾಗಿದೆ.

ನೊಬೆಲ್ ಸಮಿತಿಯು ಕ್ರಾಸ್ನಾಹೋರ್ಕೈ ಅವರನ್ನು “ಮಧ್ಯ ಯುರೋಪಿಯನ್ ಸಂಪ್ರದಾಯದಲ್ಲಿ ಒಬ್ಬ ಮಹಾನ್ ಮಹಾಕಾವ್ಯ ಬರಹಗಾರ” ಎಂದು ಬಣ್ಣಿಸಿದೆ. ಅವರ ಬರವಣಿಗೆ “ಕಾಫ್ಕಾ ಮೂಲಕ ಥಾಮಸ್ ಬರ್ನ್‌ಹಾರ್ಡ್‌ವರೆಗೆ ವಿಸ್ತರಿಸುತ್ತದೆ” ಎಂದು ಹೇಳಿದೆ. ಸಾಮಾಜಿಕ ಅವ್ಯವಸ್ಥೆ, ಹಿಂಸೆಯಿಂದ ಕೂಡಿದ ಸಣ್ಣ ತುರಿಂಗಿಯನ್ ಪಟ್ಟಣವನ್ನು ಚಿತ್ರಿಸುವಲ್ಲಿನ ನಿಖರತೆಗಾಗಿ ಅವರ 2025 ರ ಪ್ರಶಸ್ತಿ ವಿಜೇತ ಅವರ ಕೃತಿ ಹರ್ಷ್ಟ್ 07769 ಅನ್ನು “ಮಹಾನ್ ಸಮಕಾಲೀನ ಜರ್ಮನ್ ಕಾದಂಬರಿ” ಎಂದು ಕರೆಯಲಾಗಿದೆ.
ಜೋಹಾನ್ ಸೆಬಾಸ್ಟಿಯನ್ ಬಾಚ್ ಅವರ ಸಾಂಸ್ಕೃತಿಕ ಪರಂಪರೆಯ ವಿರುದ್ಧವಾಗಿ, ಈ ಕಾದಂಬರಿಯು ಮಾನವ ಅನುಭವದಲ್ಲಿ ಹಿಂಸೆ ಮತ್ತು ಸೌಂದರ್ಯ ಹೇಗೆ ಸಹಬಾಳ್ವೆ ನಡೆಸುತ್ತದೆ ಎಂಬುದನ್ನು ಪರಿಶೋಧಿಸುತ್ತದೆ.
ಕ್ರಾಸ್ನಾಹೋರ್ಕೈ ಮೊದಲು 1985 ರ ಚೊಚ್ಚಲ ಸ್ಟ್ಂಟಾಂಗೊ (ಸ್ಯಾಟಂಗೊ) ಕೃತಿಗೆ ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಪಡೆದರು, ಇದು ಕುಸಿಯುತ್ತಿರುವ ಹಂಗೇರಿಯನ್ ಹಳ್ಳಿಯ ಜೀವನದ ಮಂದ ಆದರೆ ಭಾವಗೀತಾತ್ಮಕ ಚಿತ್ರಣವಾಗಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಅವರ ದಶಕಗಳ ವೃತ್ತಿಜೀವನದಲ್ಲಿ, ಕ್ರಾಸ್ನಾಹೋರ್ಕೈ ಪೂರ್ವ ಏಷ್ಯಾದ ತತ್ವಶಾಸ್ತ್ರ ಮತ್ತು ಭೂದೃಶ್ಯಗಳಿಂದ ಸ್ಫೂರ್ತಿ ಪಡೆದಿದ್ದಾರೆ, ಅಶಾಶ್ವತತೆ, ಸೌಂದರ್ಯ ಮತ್ತು ಸೃಷ್ಟಿಯ ಚಿಂತನಶೀಲ ವಿಷಯಗಳನ್ನು ಅವರ ಪುಸ್ತಕಗಳು ಒಳಗೊಂಡಿದೆ. ಅವರ 2003 ರ ಕಾದಂಬರಿ ಎ ಮೌಂಟೇನ್ ಟು ದಿ ನಾರ್ತ್, ಎ ಲೇಕ್ ಟು ದಿ ಸೌತ್, ಪಾಥ್ಸ್ ಟು ದಿ ವೆಸ್ಟ್, ಎ ರಿವರ್ ಟು ದಿ ಈಸ್ಟ್ ಕ್ಯೋಟೋ ಬಳಿ ಆಧ್ಯಾತ್ಮಿಕ ಹುಡುಕಾಟದ ಕುರಿತು ಭಾವಗೀತಾತ್ಮಕ ಧ್ಯಾನವಾಗಿ ತೆರೆದುಕೊಳ್ಳುತ್ತದೆ. ಆ ಕೃತಿಯ ನಂತರ ಸಿಯೊಬೊ ದೇರ್ ಬಿಲೋ (2008), ಹದಿನೇಳು ಅಂತರ್ಸಂಪರ್ಕಿತ ಕಥೆಗಳ ಸಂಗ್ರಹವಾಗಿದ್ದು, ಕಲಾತ್ಮಕ ಭಕ್ತಿ ಮತ್ತು ಅತೀಂದ್ರಿಯತೆಯ ಬಗ್ಗೆ ಅನ್ವೇಷಿಸುತ್ತದೆ.
2025ರ ನೊಬೆಲ್ ಪ್ರಶಸ್ತಿಗೆ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (SEK) ಮೊತ್ತವನ್ನು ನಿಗದಿಪಡಿಸಲಾಗಿದ್ದು, ಸ್ವೀಡಿಷ್ ಕ್ರೋನರ್ ಎಂಬುದು ನೊಬೆಲ್ ಪ್ರಶಸ್ತಿಗಳನ್ನು ನೀಡುವ ಸ್ವೀಡನ್ ದೇಶದ ಅಧಿಕೃತ ಕರೆನ್ಸಿ ಆಗಿದೆ. ಈ 11 ಮಿಲಿಯನ್ SEK ಮೊತ್ತವನ್ನು ಭಾರತೀಯ ಕರೆನ್ಸಿಗೆ ಕನ್ವರ್ಟ್ ಮಾಡಿದ್ದಾಗ, ₹10.38 ಕೋಟಿ ರೂಪಾಯಿಗಳಷ್ಟು ಆಗುತ್ತದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement