ಬೆಂಗಳೂರು : ಕರ್ನಾಟಕ ಸರ್ಕಾರ ನೀಡುವ ಡಾ ರಾಜಕುಮಾರ ಪ್ರಶಸ್ತಿ, ವಿಷ್ಣುವರ್ಧನ್ ಪ್ರಶಸ್ತಿ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಗುರುವಾರ (ಅಕ್ಟೋಬರ್ ೩೦) ಘೋಷಿಸಲಾಗಿದೆ.
ಹಿರಿಯ ನಟಿ ಉಮಾಶ್ರೀ ಅವರಿಗೆ ಡಾ ರಾಜಕುಮಾರ ಪ್ರಶಸ್ತಿಯನ್ನು ನೀಡಲಾಗಿದೆ. 2019ನೇ ಸಾಲಿನ ಡಾ ರಾಜಕುಮಾರ ಪ್ರಶಸ್ತಿ ಇದಾಗಿದೆ. ಉಮಾಶ್ರೀ ಅವರು ಇಷ್ಟು ವರ್ಷ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ, ಅವರ ಅತ್ಯುತ್ತಮ ನಟನೆಯನ್ನು ಗುರುತಿಸಿ ಅವರನ್ನು ರಾಜಕುಮಾರ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ವಿಷ್ಣುವರ್ಧನ್ ಪ್ರಶಸ್ತಿಗೆ ಹಿರಿಯ ನಟ ರಿಚರ್ಡ್ ಕ್ಯಾಸ್ಟಲಿನೋ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರು ಕನ್ನಡ, ತುಳು, ಕೊಂಕಣಿ ಸಿನಿಮಾಗಳಲ್ಲಿ ವರ್ಷಗಳ ಕಾಲ ನಟನೆಯನ್ನು ಗುರುತಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಎನ್ಆರ್ ನಂಜುಂಡೇ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳು ಐದು ಲಕ್ಷ ರೂಪಾಯಿ ನಗದು ಬಹುಮಾನದ ಜೊತೆಗೆ ಚಿನ್ನ ಲೇಪಿತ ಪದಕವನ್ನು ಸಹ ಒಳಗೊಂಡಿವೆ.
ಈ ಪ್ರಶಸ್ತಿಗಳ ಜೊತೆಗೆ ಬೆಳ್ಳಿ ತೊರೆಗೆ ಉತ್ತಮ ಸಿನಿಮಾ ಪ್ರಬಂಧ ಮತ್ತು ‘ಗುಳೆ’ ಸಿನಿಮಾಕ್ಕೆ ಉತ್ತಮ ಕಿರುಚಿತ್ರ ಪ್ರಶಸ್ತಿಗಳನ್ನು ಸಹ ಘೋಷಿಸಲಾಗಿದೆ. ಈ ಪ್ರಶಸ್ತಿಗಳು 25 ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಹಾಗೂ ಬೆಳ್ಳಿ ಪದಕಗಳನ್ನು ಒಳಗೊಂಡಿವೆ.


ನಿಮ್ಮ ಕಾಮೆಂಟ್ ಬರೆಯಿರಿ