ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; 70 ಸಾಧಕರಿಗೆ ಪ್ರಶಸ್ತಿ : ಸಂಪೂರ್ಣ ಪಟ್ಟಿ ಇಲ್ಲಿದೆ….

ಬೆಂಗಳೂರು : 2025-26ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Awards 2025)ಯನ್ನು ಪ್ರಕಟಿಸಲಾಗಿದೆ. ಒಟ್ಟು 70  ಸಾಧಕರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿ ಇಂದು (ಅಕ್ಟೋಬರ್ 30) ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟಿಸಿದ್ದು, ಇದೇ ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಆಯ್ಕೆ ಮಾಡಲಾಗಿದೆ.‌
ಮೊದಲೇ ನಿರ್ಧರಿಸಿದಂತೆ‌ ಈ ಬಾರಿ‌ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. ಈ ಬಾರಿ 12 ಮಂದಿ‌ ಮಹಿಳೆಯರರನ್ನು ಪ್ರಶಸ್ತಿಗೆ ಆಯ್ಕೆ‌‌ ಮಾಡಲಾಗಿದೆ.‌ ನವೆಂಬರ್‌ 1ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿಯು 5 ಲಕ್ಷ ನಗದು, 25ಗ್ರಾಂ ಚಿನ್ನದ ಪದಕ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಸಾಹಿತ್ಯ ಕ್ಷೇತ್ರ
ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ
ತುಂಬಾಡಿ ರಾಮಯ್ಯ ತುಮಕೂರು
ಪ್ರೊ ಅರ್ ಸುನಂದಮ್ಮ ಚಿಕ್ಕಬಳ್ಳಾಪುರ
ಡಾ.ಎಚ್.ಎಲ್ ಪುಷ್ಪ ತುಮಕೂರು
ರಹಮತ್ ತರೀಕೆರೆ ಚಿಕ್ಕಮಗಳೂರು
ಹ.ಮ. ಪೂಜಾರ ವಿಜಯಪುರ

ಜಾನಪದ
ಬಸಪ್ಪ ಭರಮಪ್ಪ ಚೌಡ್ಕಿ-ಕೊಪ್ಪಳ
ಬಿ. ಟಾಕಪ್ಪ ಕಣ್ಣೂರು-ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ-ಬೆಳಗಾವಿ
ಹನುಮಂತಪ್ಪ, ಮಾರಪ್ಪ, ಚೀಳಂಗಿ-ಚಿತ್ರದುರ್ಗ
ಎಂ. ತೋಪಣ್ಣ-ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ-ವಿಜಯಪುರ
ಸಿಂಧು ಗುಜರನ್ದ-ಕ್ಷಿಣ ಕನ್ನಡ
ಎಲ್. ಮಹದೇವಪ್ಪ ಉಡಿಗಾಲ-ಮೈಸೂರು.
ಚಲನಚಿತ್ರ /ಕಿರುತೆರೆ
ಪ್ರಕಾಶರಾಜ್- ದಕ್ಷಿಣ ಕನ್ನಡ
ವಿಜಯಲಕ್ಷ್ಮೀ ಸಿಂಗ್- ಕೊಡಗು
ಆಡಳಿತ
ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) ಬೆಂಗಳೂರು ದಕ್ಷಿಣ (ರಾಮನಗರ)
ವೈದ್ಯಕೀಯ
ಆಲಮ್ಮ ಮಾರಣ್ಣ- ತುಮಕೂರು
ಡಾ. ಜಯರಂಗನಾಥ- ಬೆಂಗಳೂರು ಗ್ರಾಮಾಂತರ
ಸಂಗೀತ: ದೇವೇಂದ್ರದ್ರಕುಮಾರ ಪತ್ತಾರ- ಕೊಪ್ಪಳ,
ಮಡಿವಾಳಯ್ಯ ಸಾಲಿ-ಬೀದರ
ನೃತ್ಯ:
ಪ್ರೊ. ಕೆ. ರಾಮಮೂರ್ತಿ ರಾವ್- ಮೈಸೂರು
ಸಮಾಜ ಸೇವೆ
ಮತಿ ಸೂಲಗಿತ್ತಿ ಈರಮ್ಮ-ವಿಜಯನಗರ
ಫಕ್ಕೀರಿ-ಬೆಂಗಳೂರು ಗ್ರಾಮಾಂತರ
ಕೋರಿನ್ ಆಂಟೊನಿಯಟ್ ರಸ್ಕೀನಾ-ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ-ಉಡುಪಿ
ಕೋಣಂದೂರು ಲಿಂಗಪ್ಪ-ಶಿವಮೊಗ್ಗ
ಸಂಕೀರ್ಣ:
ಉಮೇಶ ಪಂಬದ -ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟರ್ ಧಾರವಾಡ
ಕೆ.ದಿನೇಶ್- ಬೆಂಗಳೂರು
ಶಾಂತರಾಜು -ತುಮಕೂರು
ಜಾಫರ್ ಮೊಹಿಯುದ್ದೀನ್- ರಾಯಚೂರು
ಪೆನ್ನ ಓಬಳಯ್ಯ- ಬೆಂಗಳೂರು ಗ್ರಾಮಾಂತರ
ಶಾಂತಿಬಾಯಿ ಬಳ್ಳಾರಿ
ಪುಂಡಲೀಕ ಶಾಸ್ತ್ರೀ(ಬುಡಬುಡಕೆ) ಬೆಳಗಾವಿ
ಹೊರನಾಡು/ ಹೊರದೇಶ:
ಜಕಾರಿಯಾ ಬಜಪೆ (ಸೌದಿ),
ಪಿ ವಿ ಶೆಟ್ಟಿ (ಮುಂಬೈ)
ಪರಿಸರ:
ರಾಮೇಗೌಡ- ಚಾಮರಾಜನಗರ,
ಮಲ್ಲಿಕಾರ್ಜುನ ನಿಂಗಪ್ಪ- ಯಾದಗಿರಿ
ಕೃಷಿ:
ಡಾ.ಎಸ್.ವಿ.ಹಿತ್ತಲಮನಿ-ಹಾವೇರಿ,
ಎಂ ಸಿ ರಂಗಸ್ವಾಮಿ-ಹಾಸನ.
ಮಾಧ್ಯಮ:
ಕೆ.ಸುಬ್ರಮಣ್ಯ-ಬೆಂಗಳೂರು,
ಅಂಶಿ ಪ್ರಸನ್ನಕುಮಾರ-ಮೈಸೂರು,
ಬಿ.ಎಂ ಹನೀಫ್- ದಕ್ಷಿಣ ಕನ್ನಡ,
ಎಂ ಸಿದ್ಧರಾಜು- ಮಂಡ್ಯ,
ರಾಮಯ್ಯ ಚಿಕ್ಕಬಳ್ಳಾಪುರ,
ಏರ್ ಮಾರ್ಷಲ್ ಫಿಲಿಫ್‌ ರಾಜಕುಮಾರ ದಾವಣಗೆರೆ,
ಡಾ. ಆರ್. ವಿ ನಾಡಗೌಡ- ಗದಗ.
ಸಹಕಾರ:
ಶೇಖರಗೌಡ ವಿ ಮಾಲಿಪಾಟೀಲ -ಕೊಪ್ಪಳ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ನಾಲ್ವರಿಗೆ ಟಿಕೆಟ್‌ ಘೋಷಣೆ

ಯಕ್ಷಗಾನ:
ಕೋಟ ಸುರೇಶ ಬಂಗೇರ- ಉಡುಪಿ ,
ಐರಬೈಲ್‌ ಆನಂದ ಶೆಟ್ಟಿ ಉಡುಪಿ,
ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ)- ಉತ್ತರ ಕನ್ನಡ.
ಬಯಲಾಟ:
ಗುಂಡೂರಾಜ-ಹಾಸನ
ರಂಗಭೂಮಿ:
ಹೆಚ್.ಎಂ. ಪರಮಶಿವಯ್ಯ,ಬೆಂಗಳೂರು ದಕ್ಷಿಣ (ರಾಮನಗರ),
ಎಲ್.ಬಿ.ಶೇಖ್ (ಮಾಸ್ತರ್)-ವಿಜಯಪುರ,
ಬಂಗಾರಪ್ಪ ಖುದಾನಪುರ-ಬೆಂಗಳೂರು,
ಮೈಮ್ ರಮೇಶ- ದಕ್ಷಿಣ ಕನ್ನಡ,
ಡಿ.ರತ್ನಮ್ಮ ದೇಸಾಯಿ- ರಾಯಚೂರು

ಕ್ರೀಡೆ:
ಆಶೀಶಕುಮಾರ ಬಲ್ಲಾಳ-ಬೆಂಗಳೂರು,
ಎಂ ಯೋಗೇಂದ್ರ-ಮೈಸೂರು,
ಡಾ. ಬಬಿನಾ ಎನ್.ಎಂ (ಯೋಗ)ಕೊಡಗು.
ಶಿಕ್ಷಣ: ಡಾ. ಎಂ.ಆರ್. ಜಯರಾಮ-ಬೆಂಗಳೂರು,
ಡಾ. ಎನ್ ಎಸ್ ರಾಮೇಗೌಡ-ಮೈಸೂರು
ಎಸ್. ಬಿ. ಹೊಸಮನಿ- ಕಲಬುರಗಿ,
ರಾಜ ಶ್ರೀ ನಾಗರಾಜು- ಬೆಳಗಾವಿ.
ನ್ಯಾಯಾಂಗ:
ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ (ಪವನಕುಮಾರ ಭಜಂತ್ರಿ )-ಬಾಗಲಕೋಟೆ.
ಶಿಲ್ಪಕಲೆ: ಬಸಣ್ಣ ಮೋನಪ್ಪ ಬಡಿಗೇರ- ಯಾದಗಿರಿ,
ನಾಗಲಿಂಗಪ್ಪ ಜಿ ಗಂಗೂರ- ಬಾಗಲಕೋಟೆ.
ಚಿತ್ರಕಲೆ:
ಬಿ. ಮಾರುತಿ-ವಿಜಯನಗರ
ಕರಕುಶಲ
ಎಲ್. ಹೇಮಾಶೇಖರ-ಮೈಸೂರು

ಪ್ರಮುಖ ಸುದ್ದಿ :-   ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ ನೇಮಕ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement