ಮಹಿಳಾ ಕ್ರಿಕೆಟ್ ವಿಶ್ವಕಪ್ 2025 : ವಿಶ್ವ ಚಾಂಪಿಯನ್ ಭಾರತದ ತಂಡಕ್ಕೆ ದೊಡ್ಡ ಮೊತ್ತದ ಬಹುಮಾನ ಘೋಷಿಸಿದ ಬಿಸಿಸಿಐ ; ಮೊತ್ತ…

ಮುಂಬೈ : ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ 2025ರ ಟೂರ್ನಿಯಲ್ಲಿ ಭಾರತ ತಂಡ ಐತಿಹಾಸಿಕ ವಿಜಯ ಸಾಧಿಸಿದ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತದ ಮಹಿಳಾ ಕ್ರಿಕೆಟ್‌ ತಂಡಕ್ಕೆ ಬರೋಬ್ಬರಿ ₹51 ಕೋಟಿ ನಗದು ಬಹುಮಾನ ಘೋಷಿಸಿದೆ.
ಮುಂಬೈನ ಡಿ ವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಮಣಿಸುವ ಮೂಲಕ ಭಾರತವು ಚೊಚ್ಚಲ ಮಹಿಳಾ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. 2005 ಮತ್ತು 2017ರ ಫೈನಲ್ ಸೋಲುಗಳ ಕಹಿ ನೆನಪು ಸೇರಿದಂತೆ ದಶಕಗಳ ಕಾಯುವಿಕೆಯ ನಂತರ ಈ ಬಹುನಿರೀಕ್ಷಿತ ಕ್ಷಣ ಬಂದಿದೆ. ಇದು ಭಾರತದ ಮೊದಲ ಮಹಿಳಾ ವಿಶ್ವಕಪ್ ಪ್ರಶಸ್ತಿಯಾಗಿದೆ.

ಬಹುಮಾನ ಘೋಷಿಸಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ ಸೈಕಿಯಾ ಅವರು, “ಆಟಗಾರ್ತಿಯರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿರುವ ಇಡೀ ತಂಡಕ್ಕೆ ಬಿಸಿಸಿಐ ₹51 ಕೋಟಿ ಬಹುಮಾನ ಘೋಷಿಸಿದೆ. 1983ರಲ್ಲಿ ಪುರುಷರ ವಿಶ್ವಕಪ್ ಗೆಲುವಿನ ಮೂಲಕ ಕಪಿಲ್ ದೇವ್ ಅವರು ಭಾರತೀಯ ಕ್ರಿಕೆಟ್‌ಗೆ ಹೊಸ ಯುಗವನ್ನು ಆರಂಭಿಸಿದ್ದರು. ಇಂದು, ನಮ್ಮ ಮಹಿಳಾ ತಂಡವು ಅದೇ ಸ್ಫೂರ್ತಿ ಮತ್ತು ಹೆಮ್ಮೆಯನ್ನು ದೇಶದಲ್ಲಿ ಮರುಪ್ರಜ್ವಲಿಸಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಚಾಂಪಿಯನ್ ತಂಡಕ್ಕೆ ನೀಡುವ ₹41.77 ಕೋಟಿ ಬಹುಮಾನದ ಜೊತೆಗೆ, ಈ ₹51 ಕೋಟಿ ಬಹುಮಾನದ ಹಣವು ಆಟಗಾರ್ತಿಯರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಹಂಚಿಕೆಯಾಗಲಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಪ್ರಶಸ್ತಿ ಗೌರವ
ಫೈನಲ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಹಾಗೂ ನಿರ್ಣಾಯಕ ಬೌಲಿಂಗ್ ಪ್ರದರ್ಶನ ನೀಡಿದ ಶಫಾಲಿ ವರ್ಮಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ಇಡೀ ಟೂರ್ನಿಯಲ್ಲಿ 215 ರನ್ ಗಳಿಸಿ, 22 ವಿಕೆಟ್ ಕಬಳಿಸುವ ಮೂಲಕ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿದ ದೀಪ್ತಿ ಶರ್ಮಾ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ ದೀಪ್ತಿ ಶರ್ಮಾ ಅವರ ಅಮೋಘ ಆಲ್‌ರೌಂಡ್ ಪ್ರದರ್ಶನ ನೀಡಿದರು. ಅವರು ಬ್ಯಾಟಿಂಗ್‌ನಲ್ಲಿ ಅರ್ಧಶತಕ ಗಳಿಸಿದರು ಮತ್ತು ಬೌಲಿಂಗ್‌ನಲ್ಲಿ ಐದು ವಿಕೆಟ್‌ಗಳನ್ನು ಕಿತ್ತು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement