ಸ್ಕೂಟರ್ ಬೆಲೆ 1 ಲಕ್ಷ ರೂ…..ಹೆಲ್ಮೆಟ್ ಧರಿಸದ ಕಾರಣಕ್ಕೆ ಸವಾರನಿಗೆ ಬಿತ್ತು 21 ಲಕ್ಷ ರೂ. ದಂಡ…! ಆಗಿದ್ದೇನು..?

ಮುಜಫ್ಫರನಗರ : ಉತ್ತರ ಪ್ರದೇಶದ ಮುಜಫ್ಫರನಗರ ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದ ಸ್ಕೂಟರ್ ಸವಾರನಿಗೆ ಬರೊಬ್ಬರಿ ₹21 ಲಕ್ಷ ಸಂಚಾರ ದಂಡ ವಿಧಿಸಲಾಗಿದ್ದು, ಇದು ಆತನ ವಾಹನದ ಮೌಲ್ಯಕ್ಕಿಂತ 20 ಪಟ್ಟು ಹೆಚ್ಚಾಗಿದೆ.. ಈ ವಿಚಿತ್ರ ಘಟನೆ ಈಗ ಭಾರೀ ಸುದ್ದಿಯಲ್ಲಿದೆ.
ಚಲನ್‌ನ (ದಂಡದ ರಸೀದಿ) ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸ್ಕೂಟರ್‌ ಸವಾರನಿಗೆ ₹20,74,000 ದಂಡ ವಿಧಿಸಿರುವುದು ಕಂಡುಬಂದಿದೆ. ಆದರೆ, ಈ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾದ ನಂತರ, ಪೊಲೀಸರು ತಪ್ಪು ಸರಿಪಡಿಸಿ ದಂಡದ ಮೊತ್ತವನ್ನು ಕೇವಲ ₹4,000 ಕ್ಕೆ ಇಳಿಸಿದ್ದಾರೆ.
ಘಟನೆ ಏನು..?
ಕಳೆದ ಮಂಗಳವಾರ, ಅನ್ಮೋಲ್ ಸಿಂಘಾಲ್ ಎಂಬವರನ್ನು ಹೊಸ ಮಂಡಿ ಪ್ರದೇಶದಲ್ಲಿ ತಪಾಸಣೆ ವೇಳೆ ತಡೆಯಲಾಯಿತು. ಆ ಸಮಯದಲ್ಲಿ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಅಧಿಕಾರಿಯ ಪ್ರಕಾರ, ಅವರ ಬಳಿ ಅಗತ್ಯ ದಾಖಲೆಗಳೂ ಇರಲಿಲ್ಲ. ಪೊಲೀಸರು ಅವರ ಸ್ಕೂಟರ್ ಅನ್ನು ವಶಪಡಿಸಿಕೊಂಡು ₹20.74 ಲಕ್ಷ ದಂಡದ ಚಲನ್ ನೀಡಿದ್ದರು. ಈ ಬೃಹತ್ ದಂಡದಿಂದ ದಂಗಾದ ಸವಾರನು ಅದರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ತಕ್ಷಣವೇ ತೀವ್ರ ಟೀಕೆ ಎದುರಾದ ಹಿನ್ನೆಲೆಯಲ್ಲಿ, ಅಧಿಕಾರಿಗಳು ದಂಡವನ್ನು ₹4,000 ಕ್ಕೆ ಇಳಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.  ಮುಜಫ್ಫರ ನಗರದ ಸಂಚಾರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅತುಲ್ ಚೌಬೆ ಅವರು ಮಾತನಾಡಿ, ಚಲನ್ ನೀಡಿದ ಸಬ್ ಇನ್ಸ್‌ಪೆಕ್ಟರ್ ಮಾಡಿದ ತಪ್ಪಿನಿಂದಾಗಿ ಈ ದೋಷ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ತಪ್ಪಾಗಿದ್ದೇನು..?
“ಈ ಪ್ರಕರಣದಲ್ಲಿ ಮೋಟಾರು ವಾಹನ ಕಾಯ್ದೆಯ (MV Act) ಸೆಕ್ಷನ್ 207 ಅನ್ನು ಅನ್ವಯಿಸಲಾಗಿತ್ತು. ಆದರೆ, ಸಬ್ ಇನ್ಸ್‌ಪೆಕ್ಟರ್ ಅವರು ‘207’ ರ ನಂತರ ‘ಎಂವಿ ಕಾಯ್ದೆ’ (MV Act) ಎಂದು ನಮೂದಿಸಲು ಮರೆತಿದ್ದಾರೆ, ಇದರಿಂದಾಗಿ, ‘207’ ಮತ್ತು ಈ ವಿಭಾಗದ ಅಡಿಯಲ್ಲಿ ಕನಿಷ್ಠ ದಂಡದ ಮೊತ್ತವಾದ ‘₹4,000’ ಸೇರಿ ‘20,74,000’ ಎಂದಾಗಿದೆ ಎಂದು ಅವರು ತಿಳಿಸಿದ್ದಾರೆ. ಸವಾರ ಈಗ ಕೇವಲ ₹4,000 ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 207 ರ ಅಡಿಯಲ್ಲಿ, ವಾಹನ ಚಾಲಕರು ಅಗತ್ಯ ದಾಖಲೆಗಳನ್ನು ಒದಗಿಸಲು ವಿಫಲರಾದರೆ, ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement