
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ (Kaiga Nuclear Power Plant) ಅಣು ತ್ಯಾಜ್ಯ ಘಟಕದಲ್ಲಿ ಕಾವಲಿಗೆ ನಿಂತಿದ್ದ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ (CISF) ಹೆಡ್‌ಕಾನ್ಸ್‌ಟೇಬಲ್ ಒಬ್ಬರು ಮೈಮೇಲೆ ಕಬ್ಬಿಣದ ಗೇಟ್ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಮಹಾರಾಷ್ಟ್ರದ ಮಹಿಮಾನಗಢ ಮೂಲದ ಶೇಖರ ಜಗದಾಲೆ (48) ಎಂದು ಗುರುತಿಸಲಾಗಿದೆ. ಅವರು ಶನಿವಾರ ರಾತ್ರಿ ಕಾವಲು ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಭಾರವಾದ ಗೇಟ್ ನೇರವಾಗಿ ಅವರ ತಲೆಯ ಮೇಲೆ ಬಿದ್ದು ತೀವ್ರ ಗಾಯಗಳಾಗಿವೆ. ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿ ಅವರನ್ನು ತಕ್ಷಣ ಎಸ್‌ಟಿಎಫ್ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಕೈಗಾದ ಕೆಜಿಎಸ್ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ



ನಿಮ್ಮ ಕಾಮೆಂಟ್ ಬರೆಯಿರಿ