ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ; ಮತ್ತೆ ಒಂದಾಗುವ ‘ಠಾಕ್ರೆ’ ಸಹೋದರರು ; ಕಾಂಗ್ರೆಸ್‌ ದೂರ..?

ಮುಂಬೈ: ಬೃಹನ್‌  ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಬೆಳವಣಿಗೆಯಾಗಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಮತ್ತು ರಾಜ ಠಾಕ್ರೆ ಅವರ ಎಂಎನ್‌ಎಸ್ (MNS) ಮೈತ್ರಿ ಮಾಡಿಕೊಳ್ಳುವುದು ಈಗ ಬಹುತೇಕ ಖಚಿತವಾಗಿದೆ. ಈ ಬಗ್ಗೆ ಬುಧವಾರ(ಡಿ.24) ಮಧ್ಯಾಹ್ನ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಸಂಜಯ ರಾವತ್ ತಿಳಿಸಿದ್ದಾರೆ.
ರಾಜ್ ಠಾಕ್ರೆ ಅವರ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮುಂದುವರಿಸುವುದಿಲ್ಲ ಎಂದು ಸಂಜಯ ರಾವತ್ ಸ್ಪಷ್ಟಪಡಿಸಿದ್ದಾರೆ. “ಇನ್ಮುಂದೆ ಕಾಂಗ್ರೆಸ್ ಜೊತೆ ಯಾವುದೇ ಮಾತುಕತೆ ಇಲ್ಲ. ಚುನಾವಣೆ ಸಮಯದಲ್ಲಿ ಅವರೊಂದಿಗೆ ವೈರತ್ವ ಬೆಳೆಸಿಕೊಳ್ಳುವುದಿಲ್ಲ, ಆದರೆ ಚುನಾವಣಾ ನಂತರ ಅಗತ್ಯ ಬಿದ್ದರೆ ಅವರ ಬೆಂಬಲ ಪಡೆಯುತ್ತೇವೆ. ಬಿಎಂಸಿ ಚುನಾವಣೆಯಲ್ಲಿ ಇಬ್ಬರು ಸಹೋದರರು (ಉದ್ಧವ್ ಮತ್ತು ರಾಜ್) ಸೇರಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ,” ಎಂದು ರಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪ್ರತಿಕ್ರಿಯೆ ಮತ್ತು ಮುಂದಿನ ನಡೆ
ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಸಚಿನ್ ಸಾವಂತ ಪ್ರತಿಕ್ರಿಯಿಸಿ, “ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ವಿವಾದ ಸೃಷ್ಟಿಸುವವರಿಂದ ನಾವು ದೂರವಿರುತ್ತೇವೆ. ರಾಜ್ ಠಾಕ್ರೆ ಎಂವಿಎ (MVA) ಮೈತ್ರಿಯ ಭಾಗವಲ್ಲ. ಉದ್ಧವ್ ಠಾಕ್ರೆ ಅವರು ರಾಜ್ ಜೊತೆ ಕೈಜೋಡಿಸಿರುವುದರಿಂದ, ನಾವು ಅವರೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಲಿದ್ದೇವೆ” ಎಂದು ಹೇಳಿದ್ದಾರೆ.
ಅಲ್ಲದೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು ಕಾಂಗ್ರೆಸ್ ಜೊತೆ ಜಂಟಿಯಾಗಿ ಸ್ಪರ್ಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಮುಂದಿನ ಕೆಲವು ದಿನಗಳಲ್ಲಿ ಹೊಸ ಮೈತ್ರಿಕೂಟದ ಚಿತ್ರಣ ಸ್ಪಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ. ಶಿವಸೇನೆಯಿಂದ ಹೊರಬಂದು ಎಂಎನ್‌ಎಸ್ ಸ್ಥಾಪಿಸಿದ್ದ ರಾಜ್ ಠಾಕ್ರೆ, ಬರೋಬ್ಬರಿ 18 ವರ್ಷಗಳ ನಂತರ ಮತ್ತೆ ಉದ್ಧವ್ ಠಾಕ್ರೆ ಜೊತೆಗೂಡುತ್ತಿರುವುದು ಮಹಾರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement