ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಕೆರೆಗದ್ದೆ ಆಯ್ಕೆ

ಶಿರಸಿ: ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಮುಂದಿನ 3 ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ವಿಜಯ ಕರ್ನಾಟಕ ವರದಿಗಾರ ಕೃಷ್ಣಮೂರ್ತಿ ಕೆರೆಗದ್ದೆ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಚುನಾವಣೆಯಲ್ಲಿ ಕೃಷ್ಣಮೂರ್ತಿ ಕೆರೆಗದ್ದೆ 23 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ವಿಶ್ವವಾಣಿ ಜಿಲ್ಲಾ ವರದಿಗಾರ್ತಿ ವಿನುತಾ ಹೆಗಡೆ 6 ಮತಗಳನ್ನು ಪಡೆದರು.
ಉಪಾಧ್ಯಕ್ಷರಾಗಿ ವಿಜಯವಾಣಿಪತ್ರಿಕೆ ವರದಿಗಾರ ಮಂಜುನಾಥ ಸಾಯಿಮನೆ, ಪ್ರಧಾನ ಕಾರ್ಯದರ್ಶಿಯಾಗಿ ಶಿರಸಿ ಸಮಾಚಾರ ಪತ್ರಿಕೆ ವರದಿಗಾರ ಶಿವಪ್ರಸಾದ ಹಿರೇಕೈ, ಖಜಾಂಚಿಯಾಗಿ ಮಾರಿಕಾಂಬಾ ಟಿವಿ ವರದಿಗಾರ ಮಹಾದೇವ ನಾಯ್ಕ, ಕಾರ್ಯದರ್ಶಿಯಾಗಿ ತತ್ತ್ವನಿಷ್ಠ ಪತ್ರಿಕೆ ವರದಿಗಾರ ಮಂಜುನಾಥ ಈರಗೊಪ್ಪ, ತಾಲೂಕು ಕಾರ್ಯಕಾರಿಣಿ ಸದಸ್ಯರಾಗಿ ಶಿರಸಿ ಸಮಾಚಾರ ಪ್ರಧಾನ ಸಂಪಾದಕ ಸುಬ್ರಾಯ ಭಟ್ಟ ಬಕ್ಕಳ, ಜೀಕನ್ನಡ ನ್ಯೂಸ್ ವರದಿಗಾರ ವಿನಾಯಕ ಹೆಗಡೆ ಕಲ್ಮನೆ, ಲೋಕಧ್ವನಿ ಸಿಇಓ ಜಯಂತ ಭಟ್ಟ, ಇ ಉತ್ತರಕನ್ನಡದ ವರದಿಗಾರ ಗುರುಪ್ರಸಾದ ಶಾಸ್ತ್ರಿ, ತತ್ತ್ವನಿಷ್ಠ ಪ್ರಧಾನ ಸಂಪಾದಕ ಪ್ರವೀಣ ಹೆಗಡೆ, ಜನಾಂತರಂಗ ವರದಿಗಾರ ಪ್ರದೀಪ ಶೆಟ್ಟಿ, ವಿಜಯ ಸಂದೇಶ ವರದಿಗಾರ ರವಿ ಹೆಗಡೆ ಗಡಿಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಗಳಾಗಿ ಗುರುಪ್ರಸಾದ ಭಟ್ಟ ಹಾರೇಹುಲೇಕಲ್, ಗಣೇಶ ಮುರೇಗಾರ ಕಾರ್ಯನಿರ್ವಹಿಸಿದರು. ಫಲಿತಾಂಶ ಘೋಷಣೆ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ ಹಾಜರಿದ್ದರು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement