ಲಂಡನ್: 2026ರ ಹೊಸ ವರ್ಷದ ಆರಂಭದ ಬೆನ್ನಲ್ಲೇ, ಜಗತ್ಪ್ರಸಿದ್ಧ 16ನೇ ಶತಮಾನದ ಫ್ರೆಂಚ್ ಭವಿಷ್ಯಕಾರ ನಾಸ್ಟ್ರಾಡಾಮಸ್ ಅವರ ಮುನ್ಸೂಚನೆಗಳು ಈಗ ಜನರಲ್ಲಿ ಆತಂಕ ಮೂಡಿಸಿವೆ.
16ನೇ ಶತಮಾನದಲ್ಲೇ ಹಿಟ್ಲರ್ ಏರಿಕೆ ಹಾಗೂ ಪತನ, 9/11 ದಾಳಿ ಮತ್ತು ಕೋವಿಡ್ ಸಾಂಕ್ರಾಮಿಕದ ಬಗ್ಗೆ ನಿಖರವಾಗಿ ಭವಿಷ್ಯ ಹೇಳಿದ್ದ ಈತನ “ಲೆಸ್ ಪ್ರೊಫೆಟಿಸ್” (Les Prophetis) ಪುಸ್ತಕದ 26ನೇ ಶ್ಲೋಕಗಳು 2026ರ ಘಟನೆಗಳಿಗೆ ನೇರ ಸಂಬಂಧ ಹೊಂದಿವೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ವಿಶ್ವದ ಪ್ರಭಾವಿ ವ್ಯಕ್ತಿಯ ಅಂತ್ಯ?
ನಾಸ್ಟ್ರಾಡಾಮಸ್ ಬರೆದ ಕವಿತೆಯೊಂದರ ಪ್ರಕಾರ, “ದಿನದ ಬೆಳಕಿನಲ್ಲೇ ಒಬ್ಬ ಮಹಾನ್ ವ್ಯಕ್ತಿ ಸಿಡಿಲಿಗೆ ಬಲಿಯಾಗಲಿದ್ದಾನೆ.” ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿ ಹಾಗೂ ಬರಹಗಳನ್ನು ನಂಬುವವರು, ಅವರು ಪ್ರಮುಖ ಪುರುಷ ವ್ಯಕ್ತಿಯ ಹತ್ಯೆ ಅಥವಾ ರಾಜಕೀಯ ಆಡಳಿತವನ್ನು ಅಲುಗಾಡಿಸಬಹುದಾದ ರಾಜಕೀಯ ದಂಗೆಯನ್ನು ಉಲ್ಲೇಖಿಸಿದ್ದಾರೆ ಎಂದು ನಂಬುತ್ತಾರೆ.
ಸ್ವಿಟ್ಜರ್ಲೆಂಡ್ನಲ್ಲಿ ರಕ್ತಪಾತ: ಭವಿಷ್ಯ ನಿಜವಾಯಿತೇ?
2026ರಲ್ಲಿ ಸ್ವಿಟ್ಜರ್ಲೆಂಡ್ನ ಟಿಸಿನೋ (Ticino) ಪ್ರದೇಶವು “ರಕ್ತದಿಂದ ತುಂಬಿ ಹರಿಯಲಿದೆ” ಎಂದು ನಾಸ್ಟ್ರಾಡಾಮಸ್ ಹೇಳಿದ್ದರು.
ಕಾಕತಾಳೀಯವೆಂಬಂತೆ, 2026ರ ಜನವರಿ 1ರಂದೇ ಸ್ವಿಟ್ಜರ್ಲೆಂಡ್ನ ಟಿಸಿನೊದಿಂದ ಸುಮಾರು 167 ಕಿ.ಮೀ ದೂರದಲ್ಲಿರುವ ಸ್ವಿಟ್ಜರ್ಲ್ಯಾಂಡ್ನ ಕ್ರಾನ್ಸ್-ಮೊಂಟಾನಾದ ಐಷಾರಾಮಿ ಸ್ಕೀ ರೆಸಾರ್ಟ್ನಲ್ಲಿ ಕ್ರಾನ್ಸ್-ಮೊಂಟಾನಾದ ಬಾರ್ ಒಂದರಲ್ಲಿ ಭೀಕರ ಬೆಂಕಿ ಅನಾಹುತ ಸಂಭವಿಸಿದ್ದು, ಅನೇಕರು ಸಾವಿಗೀಡಾಗಿದ್ದಾರೆ ಹಾಗೂ ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ನಾಸ್ಟ್ರಾಡಾಮಸ್ ಹೇಳಿದ ರಕ್ತಪಾತದ ಆರಂಭವೇ ಎಂದು ವಿಶ್ಲೇಷಣೆಗಳು ನಡೆಯುತ್ತಿವೆ.
‘ಮಹಾಮಾರಿ ಜೇನು ನೊಣಗಳು’ ..
ನಾಸ್ಟ್ರಾಡಾಮಸ್ನ ಇತರ ಪ್ರಮುಖ ಭವಿಷ್ಯವಾಣಿಗಳು, “ಜೇನುನೊಣಗಳ ದೊಡ್ಡ ದಂಡು ರಾತ್ರಿಯ ಹೊತ್ತಿಗೆ ಹೊಂಚುದಾಳಿ
ಮಾಡಲಿದೆ” (“The great swarm of bees will arise… by night the ambush…”,) ಎಂಬ ನಿಗೂಢ ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಇಲ್ಲಿ ಜೇನುನೊಣಗಳು ಅಕ್ಷರಶಃ ಕೀಟಗಳಲ್ಲ, ಬದಲಿಗೆ ಸರ್ವಾಧಿಕಾರಿ ಧೋರಣೆಯ ರಾಜಕೀಯ ಗುಂಪುಗಳು ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ 2026ರಲ್ಲಿ ಜಗತ್ತಿನ ಕೆಲವು ಭಾಗಗಳಲ್ಲಿ ಫ್ಯಾಸಿಸ್ಟ್ ಮಾದರಿಯ ಆಡಳಿತಗಳು ಅಧಿಕಾರ ಹಿಡಿಯಲಿವೆ ಎಂಬ ಆತಂಕ ವ್ಯಕ್ತವಾಗಿದೆ.
ಏಳು ತಿಂಗಳ ಮಹಾಯುದ್ಧ
“Seven months great war, people dead through evil / Rouen, Evreux the King will not fail (ಏಳು ತಿಂಗಳುಗಳು ಮಹಾಯುದ್ಧ, ದುಷ್ಟತನದಿಂದ ಸತ್ತ ಜನರು / ರೂಯೆನ್, ಎವ್ರೆಕ್ಸ್ ರಾಜ ವಿಫಲನಾಗುವುದಿಲ್ಲ”) ಎಂಬ ಒಂದು ನಿರ್ದಿಷ್ಟ ಪದ್ಯದ ಸಾಲುಗಳನ್ನು ಏಳು ತಿಂಗಳ ಜಾಗತಿಕ ಸಂಘರ್ಷದ ಉಲ್ಲೇಖವಾಗಿ ವ್ಯಾಪಕವಾಗಿ ನೋಡಲಾಗುತ್ತದೆ. ಈ ನಿರ್ದಿಷ್ಟ ಶ್ಲೋಕವು “ಏಳು ತಿಂಗಳ ಕಾಲ ನಡೆಯುವ ಭೀಕರ ಯುದ್ಧ”ದ ಬಗ್ಗೆ ಉಲ್ಲೇಖಿಸುತ್ತದೆ. ಇಬ್ಬರು ಬಲಿಷ್ಠ ಜಾಗತಿಕ ನಾಯಕರ ನಡುವಿನ ಹಠಮಾರಿ ಧೋರಣೆಯಿಂದಾಗಿ ಸಾವಿರಾರು ಅಮಾಯಕರು ಬಲಿಯಾಗಲಿದ್ದಾರೆ ಎಂಬುದು ಇದರ ಸಾರಾಂಶ ಎಂದು ಹೇಳಲಾಗಿದೆ.
ನೌಕಾ ಸಮರ ಮತ್ತು ಚೀನಾ ಸಂಘರ್ಷ
“ಏಳು ಹಡಗುಗಳ ಸುತ್ತ ನೌಕಾ ಯುದ್ಧ ನಡೆಯಲಿದೆ” (Foists and galleys around seven ships, a mortal war will be let loose,” reads quatrain VII: 26) ಎಂಬ ಸಾಲುಗಳು ಏಷ್ಯಾದಲ್ಲಿ ಸಂಭವಿಸಬಹುದಾದ ಯುದ್ಧದ ಮುನ್ಸೂಚನೆ ಎನ್ನಲಾಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ, ತೈವಾನ್, ವಿಯೆಟ್ನಾಂ, ಮಲೇಷ್ಯಾ ಸೇರಿದಂತೆ ಏಳು ರಾಷ್ಟ್ರಗಳ ನಡುವೆ ಇರುವ ಪ್ರಾದೇಶಿಕ ವಿವಾದವು 2026ರಲ್ಲಿ ಯುದ್ಧಕ್ಕೆ ನಾಂದಿ ಹಾಡಬಹುದು. ದಕ್ಷಿಣ ಚೀನಾ ಸಮುದ್ರದಲ್ಲಿ ದೀರ್ಘಕಾಲದಿಂದ ಪ್ರಾದೇಶಿಕ ಘರ್ಷಣೆಗಳಲ್ಲಿ ಭಾಗಿಯಾಗಿರುವ ಚೀನಾವನ್ನು ನೌಕಾ ಯುದ್ಧವು ಒಳಗೊಂಡಿರಬಹುದು. ಭವಿಷ್ಯವಾಣಿಯಲ್ಲಿ ಉಲ್ಲೇಖಿಸಲಾದ ‘ಏಳು ಹಡಗುಗಳು’ ಚೀನಾ, ತೈವಾನ್, ವಿಯೆಟ್ನಾಂ, ಮಲೇಷ್ಯಾ, ಬ್ರೂನಿ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಆಗಿರಬಹುದು ಎಂದು ಊಹಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ