ಶಿರಸಿಯಲ್ಲಿ ಜ.22ರಿಂದ ಐದು ದಿನಗಳ ರೋಟರಿ ಆಹಾರ ಮೇಳ-ಆಲೆಮನೆ ಉತ್ಸವ

ಶಿರಸಿ : ನಾಲ್ಕನೇ ವರ್ಷದ ರೋಟರಿ ಆಹಾರ ಮೇಳ ಹಾಗೂ ಆಲೆಮನೆ ಉತ್ಸವವು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವಿಕಾಸಾಶ್ರಮ ಮೈದಾನದಲ್ಲಿ ಜ.೨೨ರಿಂದ ೨೬ರವರೆಗೆ ನಡೆಯಲಿದೆ.
ರೋಟರಿ ಸೆಂಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀನಿವಾಸ ನಾಯ್ಕ ಹಾಗೂ ಸಂಚಾಲಕ ಡಾ.ದಿನೇಶ ಹೆಗಡೆ ಮತ್ತಿತರರು ಈ ಬಗ್ಗೆ ಮಾಹಿತಿ ನೀಡಿದರು. ಆಲೆಮನೆ ಉತ್ಸವವು ಜ.೨೨ರಿಂದ ೨೬ರವರೆಗೆ ಪ್ರತಿದಿನ ಸಂಜೆ ೫:೩೦ರಿಂದ ರಾತ್ರಿ ೧೦:೩೦ರ ವರೆಗೆ ನಡೆಯಲಿದೆ.
ರೋಟರಿ ಕ್ಲಬ್ ಮತ್ತು ಶಿರಸಿ ಹೆರಿಟೇಜ್ ಇನ್ನರ್‌ವೀಲ್‌ ಕ್ಲಬ್ ಸಹಯೋಗದಲ್ಲಿ ಆಲೆಮನೆ ಉತ್ಸವ ನಡೆಯಲಿದೆ. ಐದು ದಿನಗಳ ಹಬ್ಬದಲ್ಲಿ ಕಬ್ಬಿನಹಾಲು, ತೊಡೆದೇವು, ಜೋನಿಬೆಲ್ಲ, ಮಣ್ಣಿ ಮುಂತಾದ ಖಾದ್ಯಗಳು ಲಭ್ಯವಿರಲಿದೆ. ಗೃಹ ನಿರ್ಮಾಣ, ಗೃಹೋಪಯೋಗಿ ಸಾಮಗ್ರಿ, ಕೃಷಿ ಉಪಕರಣ, ಖಾದ್ಯ ಪದಾರ್ಥಗಳ ಮಳಿಗೆಗಳಿರಲಿದೆ. ಅಲ್ಲದೆ, ರಕ್ತದಾನ ಶಿಬಿರ ಸಹ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಇದಲ್ಲದೆ, ಶ್ವಾನ ಪ್ರದರ್ಶನ, ಅಂತ್ಯಾಕ್ಷರಿ ಸ್ಪರ್ಧೆ, ಮಿಸ್ಟರ್ ಉತ್ತರ ಕನ್ನಡ ದೇಹದಾರ್ಢ್ಯ ಸ್ಪರ್ಧೆ ಮತ್ತು ಮಿಸ್ ಉತ್ತರ ಕನ್ನಡ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿದೆ. ಗಾಯಕರಾದ ರವಿ ಮೂರೂರು, ವಿದುಷಿ ರೇಖಾ ದಿನೇಶ ಮೊದಲಾದವರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಸಮಾಜಮುಖಿ ಸೇವಾಕಾರ್ಯಗಳನ್ನು ನಿರಂತರ ಮಾಡುತ್ತ ಬಂದಿರುವ ರೋಟರಿ ಕ್ಲಬ್‌ನ ಈ ಉತ್ಸವದಲ್ಲಿ ಉಳಿಯುವ ಹಣವನ್ನು ಸಮಾಜಮುಖಿ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

ರೋಟರಿಕ್ಲಬ್‌ ಈ ಹಿಂದೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದೆ. ೧೩೬ ಶಾಲೆಗಳಲ್ಲಿ ೧ ಕೋಟಿ ರೂ. ವೆಚ್ಚದಲ್ಲಿ ಇ-ಕಲಿಕಾ ಘಟಕಗಳು; ಎಂ.ಇ.ಎಸ್. ಆವರಣದಲ್ಲಿ ೫೮ ಲಕ್ಷ ರೂ. ವೆಚ್ಚದಲ್ಲಿ ಮಳೆಕೊಯ್ಲು ಮತ್ತು ನೀರಿಂಗಿಸುವ ಘಟಕ, ದೇವಿಕೆರೆ ಉದ್ಯಾನವನ ಸೇರಿ ೬ ಕಡೆಗಳಲ್ಲಿ ೫೦ ಲಕ್ಷ ರೂ. ವೆಚ್ಚದಲ್ಲಿ ಹಿರಿಯ ನಾಗರಿಕರಿಗೆ ವ್ಯಾಯಾಮ ಕೇಂದ್ರ, ೫ ಸರಕಾರಿ ಶಾಲೆಗಳಲ್ಲಿ ಸುಮಾರು ೮೮ ಲಕ್ಷ ರೂ. ಮೊತ್ತದಲ್ಲಿ ಹ್ಯಾಪಿ ಸ್ಕೂಲ್ ಯೋಜನೆ, ನಗರದ ೧೦ ಕಡೆಗಳಲ್ಲಿ ೪೦ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ೫೦ ಲಕ್ಷ ರೂ. ವೆಚ್ಚದಲ್ಲಿ ನವಜಾತ ಶಿಶು ಘಟಕ, ೫೦ ಲಕ್ಷ ರೂ. ವೆಚ್ಚದಲ್ಲಿ ವಿದ್ಯಾಸೇತು ಯೋಜನೆ, ೩೦ ಲಕ್ಷ ರೂ. ವೆಚ್ಚದಲ್ಲಿ ಅಂಧರಿಗಾಗಿ ಸ್ಮಾರ್ಟ್ ಗ್ಲಾಸ್ ವಿಶನ್ ಮುಂತಾದ ಯೋಜನೆಗಳನ್ನು ಅನುಷ್ಠಾನ ಮಾಡಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸತೀಶ ಭಟ್ ನಾಡಗುಳಿ, ರೋಟರಿ ಪ್ರಧಾನ ಕಾರ್ಯದರ್ಶಿ ಹರೀಶ ಹೆಗಡೆ, ರವಿ ಹೆಗಡೆ ಗಡಿಹಳ್ಳಿ, ವಿನಾಯಕ ಶೇಟ್, ವಿದ್ಯಾ ನಾಯ್ಕ, ಸಂಧ್ಯಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement