ಸಂಸದ ಬಿವೈ ರಾಘವೇಂದ್ರ ಕಾರಿಗೆ ವಾಹನ ಡಿಕ್ಕಿ

ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅವರ ಇನ್ನೋವಾ ಕಾರಿಗೆ ಮತ್ತೊಂದು ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ನಡೆದಿದೆಎಂದು ವರದಿಯಾಗಿದೆ. ಅವರು ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ.
ಲಭ್ಯವಾದ ಮಾಹಿತಿ ಪ್ರಕಾರ, ಕುಂಚೇನಹಳ್ಳಿ ಗ್ರಾಮದ ಸಮೀಪ ಸಂಸದ ರಾಘವೇಂದ್ರ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಮುಂದಿದ್ದ ಕಾರಿನ ಎಸ್ಕಾರ್ಟ್ ಹಂಪ್ಸ್ ಬಂತು ಎಂದು ನಿಧಾನ ಮಾಡಿದಾಗ ಸಂಸದರ ಕಾರಿನ ಹಿಂದಿನಿಂದ ಬರುತ್ತಿದ್ದ ಬೊಲೆರೋ ವಾಹನವು ನಿಯಂತ್ರಣ ತಪ್ಪಿ ಸಂಸದರ ಕಾರಿಗೆ ಗುದ್ದಿದೆ. ಪರಿಣಾಮ ಕಾರು ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಪೊಲೀಸ್ ಎಸ್ಕಾರ್ಟ್ ವಾಹನಕ್ಕೆ ತಾಕಿದೆ. ತಕ್ಷಣ ಚಾಲಕರು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿದ್ದು, ಸಂಸದರು ಹಾಗೂ ಅವರೊಂದಿಗೆ ಇದ್ದ ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದಾರೆ. ಕಾರಿಗೆ ಹಾನಿಯಾಗಿದ್ದರಿಂದ, ಸಂಸದ ಬಿವೈ ರಾಘವೇಂದ್ರ ಅವರ ಭದ್ರತಾ ಸಿಬ್ಬಂದಿ ಹಾಗೂ ಸಹಾಯಕರು ಮತ್ತೊಂದು ಕಾರಿನಲ್ಲಿ ತೆರಳಿದರು ಎನ್ನಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement