ವೀಡಿಯೊ…| ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತಕ್ಕೀಡಾದ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂಬೈ: ಬುಧವಾರ (ಜನವರಿ 28) ಬೆಳಿಗ್ಗೆ 8.46:02 ಗಂಟೆಗೆ ಮಹಾರಾಷ್ಟ್ರದ ಬಾರಾಮತಿಯ ವಿಮಾನ ನಿಲ್ದಾಣದಿಂದ ಕೆಲವೇ ನಿಮಿಷಗಳ ದೂರದಲ್ಲಿರುವ ಹೆದ್ದಾರಿಯಲ್ಲಿ ಬೆಂಕಿಯ ಚೆಂಡು ಮತ್ತು ಬೃಹತ್ ಹೊಗೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರಿದ್ದ ವಿಮಾನ ಪತನಗೊಂಡಿದ್ದು, ಆ ಅಪಘಾತದಲ್ಲಿ 66 ವರ್ಷದ ಅಜಿತ್ ಪವಾರ್ ಮೃತಪಟ್ಟಿದ್ದಾರೆ. ಅಜಿತ ಪವಾರ್ ಆರು ಬಾರಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದರು.   ಅವರಿದ್ದ ಲಿಯರ್‌ಜೆಟ್ 45 ಪತನಗೊಂಡು ಸ್ಫೋಟಗೊಂಡ ಕ್ಷಣವನ್ನು ಹೆದ್ದಾರಿ ಕ್ಯಾಮೆರಾ ಸೆರೆಹಿಡಿದಿದೆ.
 ಬುಧವಾರ ಬೆಳಿಗ್ಗೆ 8:10 ಕ್ಕೆ ಮುಂಬೈನಿಂದ ಹೊರಟ ಖಾಸಗಿ ಜೆಟ್  ಬಾರಾಮತಿ ವಿಮಾನ ನಿಲ್ದಾಣದ ಕೆಲವೇ ನಿಮಿಷಗಳ ಅಂತರದಲ್ಲಿರುವ ಹೆದ್ದಾರಿಯ ಪಕ್ಕದಲ್ಲಿ ಇಳಿಯುವಾಗ ಪತನಗೊಂಡಿತು.
ವಿಮಾನದಲ್ಲಿದ್ದ ಅಜಿತ್ ಪವಾರ್ ಸೇರಿದಂತೆ ಎಲ್ಲಾ ಐದು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬಾರಾಮತಿ ವಿಮಾನ ನಿಲ್ದಾಣದ ಸಮೀಪವಿರುವ ಹೆದ್ದಾರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ವಿಮಾನವು ಬೆಂಕಿಯ ಉಂಡೆಯಾಗಿ ಸ್ಫೋಟಗೊಳ್ಳುತ್ತಿರುವ ಭೀಕರ ದೃಶ್ಯ ಸೆರೆಯಾಗಿದೆ.
ಫ್ಲೈಟ್‌ರಾಡಾರ್24 (Flightradar24) ಅಂಕಿಅಂಶಗಳ ಪ್ರಕಾರ, ವಿಮಾನವು ಬೆಳಿಗ್ಗೆ 8:45 ಕ್ಕೆ ರೇಡಾರ್‌ನಿಂದ ಸಂಪರ್ಕ ಕಳೆದುಕೊಂಡಿತು. ಎರಡನೇ ಬಾರಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ರನ್ ವೇಗಿಂತ 100 ಅಡಿ ಮೊದಲೇ ವಿಮಾನ ಪತನಗೊಂಡಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಗಳು ಅಜಿತ್ ಪವಾರ್ ಅವರ ವಿಮಾನ ಅಪಘಾತಕ್ಕೀಡಾದ ಕ್ಷಣವನ್ನು ತೋರಿಸುತ್ತದೆ. ಫ್ಲೈಟ್‌ ರಾಡಾರ್‌ 24(Flightradar24) ಡೇಟಾ ಪ್ರಕಾರ, ವಿಮಾನವು ಬೆಳಿಗ್ಗೆ 8:45 ಕ್ಕೆ ರಾಡಾರ್‌ನಿಂದ ಬೇರ್ಪಟ್ಟಿತು ಮತ್ತು ಅದು ಎರಡನೇ ಲ್ಯಾಂಡಿಂಗ್‌ಗೆ ಪ್ರಯತ್ನಿಸುತ್ತಿತ್ತು; ರನ್‌ವೇಗಿಂತ 100 ಅಡಿ ಮೊದಲು ಅದು ಪತನಗೊಂಡಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ವಿಎಸ್‌ಆರ್ ಎಂಬ ಕಂಪನಿಯು ಈ ವಿಮಾನವನ್ನು ನಿರ್ವಹಿಸುತ್ತಿತ್ತು. ಫ್ಲೈಟ್‌ರಾಡಾರ್24 ರ ದತ್ತಾಂಶದ ಪ್ರಕಾರ, ವಿಮಾನವು ಬೆಳಿಗ್ಗೆ 8.45 ಕ್ಕೆ ರಾಡಾರ್‌ನಿಂದ ಬೇರ್ಪಟ್ಟಿತು ಮತ್ತು ಅದು ಎರಡನೇ ಲ್ಯಾಂಡಿಂಗ್‌ಗೆ ಪ್ರಯತ್ನಿಸುತ್ತಿದ್ದಾಗ ಅದು ಪತನಗೊಂಡಿತು. ವಿಮಾನ ಪತನಗೊಂಡ ನಂತರ ಅದು ಸ್ಫೋಟಗೊಂಡು ಭಾರಿ ಬೆಂಕಿಗೆ ಆಹುತಿಯಾಯಿತು. ಜನರು ಬಂದು ವಿಮಾನದಿಂದ ಪ್ರಯಾಣಿಕರನ್ನು ಹೊರತೆಗೆಯಲು ಪ್ರಯತ್ನಿಸಿದರು. ದೊಡ್ಡ ಬೆಂಕಿಯಿಂದಾಗಿ, ಅವರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ…” ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
 ಆ ಸಮಯದಲ್ಲಿ ಲಭ್ಯವಿರುವ ದತ್ತಾಂಶವು ವಿಮಾನವು 1016 ಮೀಟರ್ ಅಥವಾ ಒಂದು ಕಿಲೋಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿ ಮತ್ತು ಗಂಟೆಗೆ 237 ಕಿಲೋಮೀಟರ್ ವೇಗದಲ್ಲಿ ಹಾರುತ್ತಿದ್ದಾಗ ವಿಮಾನ ಟ್ರ್ಯಾಕಿಂಗ್ ಸರ್ವೀಸ್‌ ಜೊತೆ ಸಂಪರ್ಕವನ್ನು ಕಳೆದುಕೊಂಡಿತು ಎಂದು ಸೂಚಿಸುತ್ತದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement