ತೆಕ್ಕಲಕೋಟೆ ಬಳಿ ಉತ್ಖನನದ ವೇಳೆ ಸುಮಾರು 5,000 ವರ್ಷಗಳ ಹಿಂದಿನ ಮಾನವನ ಅಸ್ಥಿಪಂಜರ ಪತ್ತೆ

ಬಳ್ಳಾರಿ : ಜಿಲ್ಲೆಯ ತೆಕ್ಕಲಕೋಟೆಯ ‘ಗೌಡ್ರ ಮೂಲೆ’ ಬೆಟ್ಟದಲ್ಲಿ ಸುಮಾರು 5,000 ವರ್ಷಗಳ ಹಿಂದಿನ ನವಶಿಲಾಯುಗದ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ.
ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ತಂಡವು ಉತ್ಖನನದ ನಡೆಸುತ್ತಿದ್ದಾಗ, 5.5 ಅಡಿ ಉದ್ದದ ಅಸ್ಥಿಪಂಜರದೊಂದಿಗೆ ಶಿಲಾಯುಧಗಳು ಮತ್ತು ಮಡಕೆಗಳ ಕುರುಹುಗಳು
ಉತ್ಖನನದ ವೇಳೆ 5.5 ಅಡಿ ಉದ್ದದ ಅಸ್ಥಿಪಂಜರ ಪತ್ತೆಯಾಗಿದೆ.  ಶವ ಸಂಸ್ಕಾರದ ವೇಳೆ ಕಲ್ಲುಗಳನ್ನು ದೇಹದ ಮೇಲೆ ಇರಿಸಲಾಗಿತ್ತು. ಇದು ಆ ಕಾಲದ ಸಂಸ್ಕೃತಿಯನ್ನು ತಿಳಿಸುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಈ ಪ್ರದೇಶದಲ್ಲಿ ಶಿಲಾಯುಗ, ನವಶಿಲಾಯುಗ ಮತ್ತು ಲೋಹಯುಗದ ಕುರುಹುಗಳು ಕಂಡುಬಂದಿದ್ದು, ಚೂಪಾದ ಕಲ್ಲಿನ ಆಯುಧಗಳು, ಕೈ ಕೊಡಲಿ, ಪ್ರಾಣಿಗಳ ಹಲ್ಲು, ಮಡಕೆಗಳು ಸಹ ಪತ್ತೆಯಾಗಿವೆ. ಇವುಗಳು ಮಾನವನ ವಿಕಾಸದ ಅಧ್ಯಯನಕ್ಕೆ ಮಹತ್ವದ ಪುರಾವೆ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಕಾರ್ಬನ್ ಡೇಟಿಂಗ್ ಅಧ್ಯಯನ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ತೆಕ್ಕಲಕೋಟೆಯ ‘ಹಿರೇ ಅರ್ಲ’, ‘ಬೂದಿ ದಿಬ್ಬ’, ‘ಬಾಳೆ ತೋಟ’, ‘ಜಕ್ಕೇರು ಗುಡ್ಡ’ ಮತ್ತು ‘ಹುಡೇದಗುಡ್ಡ’ ಸುತ್ತಮುತ್ತಲಿನ ಹಲವು ಸ್ಥಳಗಳಲ್ಲಿ ತಜ್ಞರ ಮೂರು ತಂಡಗಳು ಉತ್ಪನನ ಹಾಗೂ ಸಂಶೋಧನಾ ಕಾರ್ಯದಲ್ಲಿ ನಿರತವಾಗಿದೆ.

ಪ್ರಮುಖ ಸುದ್ದಿ :-   ಇಂದು ಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ: ಪರಮೇಶ್ವರ ಡಿಸಿಎಂ ; 13 ಶಾಸಕರಿಗೆ ಸಚಿವ ಸ್ಥಾನ ; ಪಟ್ಟಿ ಇಲ್ಲಿದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement