ಶಿರಸಿ : ಐದು ದಿನಗಳ ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಪ್ರೋಗ್ರಾಂ ಉದ್ಘಾಟನೆ

ಶಿರಸಿ: ಉದ್ಯಮಿಗಳಿಗಾಗಿ ವಿಶೇಷವಾಗಿ ಆಯೋಜಿಸಲಾದ ಐದು ದಿನಗಳ ಡಿಜಿಟಲ್ ಮಾರ್ಕೆಟಿಂಗ್ ಕುರಿತು ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಪ್ರೋಗ್ರಾಂ (MDP) ಫೆ.13 ರಂದು ಶಿರಸಿಯ ಕದಂಬ ಆರ್ಗಾನಿಕ್ ಪಾಯಿಂಟ್‌ನಲ್ಲಿ ಪ್ರಾರಂಭವಾಯಿತು.
ಈ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಎಂಎಸ್‌ಎಂಇ (MSME) ಅಭಿವೃದ್ಧಿ ಮತ್ತು ಸೌಲಭ್ಯ ಕೇಂದ್ರವು ಶಿರಸಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಹಾಗೂ ನೆಲಸಿರಿ ರೈತ ಉತ್ಪಾದಕ ಕಂಪನಿಯ ಸಹಯೋಗದಲ್ಲಿ ಸಂಯುಕ್ತವಾಗಿ ಆಯೋಜಿಸಿದೆ.
ಈ ತರಬೇತಿ ಕಾರ್ಯಕ್ರಮದ ಉದ್ದೇಶ ಉದ್ಯಮಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್, ಬ್ರ್ಯಾಂಡಿಂಗ್, ಕಾನೂನುಬದ್ಧ ಅನುಸರಣೆ ಹಾಗೂ ಆನ್‌ಲೈನ್ ಮಾರುಕಟ್ಟೆ ವಿಸ್ತರಣೆ ಕುರಿತಾಗಿ ಪ್ರಾಯೋಗಿಕ ಜ್ಞಾನ ಮತ್ತು ಮಾರ್ಗದರ್ಶನ ನೀಡುವುದಾಗಿದೆ. ಇದು ಕೇವಲ ಮಾಹಿತಿಯ ವಿನಿಮಯ ಕಾರ್ಯಕ್ರಮವಲ್ಲದೆ, ಉದ್ಯಮಿಗಳು ತಮ್ಮ ವ್ಯವಹಾರಗಳಲ್ಲಿ ನೈಜವಾಗಿ ಅಳವಡಿಸಿಕೊಳ್ಳಲು ಸಹಾಯಕವಾಗುವ ಹ್ಯಾಂಡ್‌ಹೋಲ್ಡಿಂಗ್ ಹಾಗೂ ಅನುಷ್ಠಾನಮುಖಿ ತರಬೇತಿ ಕಾರ್ಯಕ್ರಮವಾಗಿದೆ.

ಕಾರ್ಯಕ್ರಮದ ಮೊದಲ ದಿನ ನಿವೃತ್ತ ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್ ಅವರು ಎಫ್‌ಎಸ್‌ಎಸ್‌ಎಐ (FSSAI) ಕಾನೂನುಬದ್ಧ ಅನುಸರಣೆ ಕುರಿತು ವಿವರವಾಗಿ ಮಾತನಾಡಿದರು. “ಏಕೆ, ಹೇಗೆ, ಯಾವಾಗ ಮತ್ತು ಎಲ್ಲಿ” ಎಂಬ ಅಂಶಗಳನ್ನು ಸ್ಪಷ್ಟಪಡಿಸಿ, ತಮ್ಮ ಸೇವಾ ಅವಧಿಯಲ್ಲಿ ಎದುರಿಸಿದ ಪ್ರಕರಣಗಳನ್ನು ಉದಾಹರಿಸಿದರು. ಲೈಸೆನ್ಸ್, ಲೇಬಲಿಂಗ್ ನಿಯಮಗಳು, ಸ್ವಚ್ಛತಾ ಮಾನದಂಡಗಳು ಹಾಗೂ ಕಾನೂನುಬದ್ಧ ಜವಾಬ್ದಾರಿಗಳ ಕುರಿತು ತಿಳಿಸಿದರು. ಆಹಾರ ಉತ್ಪನ್ನಗಳಿಗೆ ಸಂಬಂಧಿಸಿದ ಉದ್ಯಮಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಅನಂತರ ಎಂಎಸ್‌ಎಂಇ (MSME) ಸಹಾಯಕ ನಿರ್ದೇಶಕರಾದ ಮೊಹಮ್ಮದ್ ಅರ್ಷಾದ್ ಅವರು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಬ್ರ್ಯಾಂಡಿಂಗ್‌ನ ಮಹತ್ವ ಕುರಿತು ಮಾತನಾಡಿದರು. ಉತ್ಪನ್ನ ಬ್ರ್ಯಾಂಡಿಂಗ್, ಕಾರ್ಪೊರೇಟ್ ಬ್ರ್ಯಾಂಡಿಂಗ್ ಹಾಗೂ ಡಿಜಿಟಲ್ ಬ್ರ್ಯಾಂಡ್ ಪೋಜಿಷನಿಂಗ್ ಸೇರಿದಂತೆ ವಿವಿಧ ಬ್ರ್ಯಾಂಡಿಂಗ್ ವಿಧಾನಗಳ ಬಗ್ಗೆ ವಿವರಿಸಿ, ಬ್ರ್ಯಾಂಡ್ ಪ್ರೋತ್ಸಾಹ ಮತ್ತು ಮಾರುಕಟ್ಟೆ ವಿಸ್ತರಣೆಗೆ MSME ವತಿಯಿಂದ ಲಭ್ಯವಿರುವ ಸಹಾಯಧನ ಮತ್ತು ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಉಳಿದ ದಿನಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳು, ಇ-ಮಾರ್ಕೆಟ್‌ಪ್ಲೇಸ್ ನೋಂದಣಿ, ವೆಬ್‌ಸೈಟ್ ಅಭಿವೃದ್ಧಿ, GeM ನೋಂದಣಿ ಹಾಗೂ ವ್ಯವಹಾರ ವೃದ್ಧಿಗೆ ಅಗತ್ಯವಾದ ಮಾರ್ಗದರ್ಶನ ಕಾರ್ಯಕ್ರಮಗಳು ನಡೆಯಲಿವೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ಉದ್ಘಾಟನೆ:
ಕಾರ್ಯಕ್ರಮ ಉದ್ಘಾಟಿಸಿದ ಮೊಹಮ್ಮದ್ ಆರ್ಷದ್ ಅವರು ಕೊವಿಡ್ ಮಹಾಪಿಡುಗಿನ ನಂತರ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಸರಕಾರ ವಿವಿಧ ರೀತಿಯ ತರಬೇತಿ ಕಾರ್ಯಗಳನ್ನು ಆಯೋಜಿಸಿ ಉದ್ಯಮಶೀಲ ವ್ಯಕ್ತಿಗಳಿಗೆ ಅನುದಾನ, ಭದ್ರತಾ ರಹಿತ ಸಾಲ, ಇತ್ಯಾದಿಗಳನ್ನು ಒದಗಿಸುತ್ತಿದೆ. ಅದರಂತೆ ಪ್ರಸಕ್ತ ಸುಮಾರು ‌₹50000 ಮೌಲ್ಯದ ಈ ತರಬೇತಿ ತಮಗೆ ಇಲಾಖೆಯ ವತಿಯಿಂದ ಉಚಿತವಾಗಿ ದೊರಕುತ್ತಿದೆ. ತಾವು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕದಂಬ ಮಾರ್ಕೆಟಿಂಗ್ ನ ನಿರ್ದೇಶಕ ನಾರಾಯಣ ಹೆಗಡೆ ಗಡಿಕೈ ಅವರು ಔದ್ಯೋಗಿಕವಾಗಿ ಹಿಂದುಳಿದಿರುವ ನಮ್ಮ ಪ್ರದೇಶ ಅಭಿವೃದ್ಧಿ ಹೊಂದಲು ಆಹಾರ ಸಂಸ್ಕರಣೆಯಲ್ಲಿ ವಿಪುಲ ಅವಕಾಶಗಳಿವೆ. ಉದ್ಯೋಗ ಪ್ರಾರಂಭ ಮಾಡುವವರಿಗೆ ಇಂದು ಸುವರ್ಣಾವಕಾಶ ಇದೆ. ಸರಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ನಾವು ಪಡೆದುಕೊಳ್ಳಬೇಕು ಎಂದರು.
PMFMEಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುಜಯ ಭಟ್ಟರು ಪಾಲ್ಗೊಂಡಿದ್ದರು. ಶ್ಚೇತಾ ಹೆಗಡೆ ಇವರ ವಂದೇಮಾತರಂ ಹಾಡಿನೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಕದಂಬ ಮಾರ್ಕೆಟಿಂಗ್ ಸಲಹೆಗಾರ ವಿಶ್ವೇಶ್ವರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement