ಚೀನಾ ರೋಬೋಟ್ ವಿವಾದ: ದೆಹಲಿ ಎಐ(AI) ಇಂಪ್ಯಾಕ್ಟ್ ಸಮ್ಮಿಟ್’ನಿಂದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಗೇಟ್‌ ಪಾಸ್‌

ನವದೆಹಲಿ: ಚೀನಾ ಮೂಲದ ‘ರೋಬೋಟ್ ನಾಯಿ’ಯನ್ನು (Robodog) ತನ್ನದೇ ಆವಿಷ್ಕಾರ ಎಂದು ಪ್ರದರ್ಶಿಸಿದ ಆರೋಪದ ಮೇಲೆ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026’ ರಿಂದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಹೊರಹಾಕಲಾಗಿದೆ.
ವಿವಾದದ ಹಿನ್ನೆಲೆಯಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಮಳಿಗೆಯನ್ನು (Stall) ಖಾಲಿ ಮಾಡುವಂತೆ ಸೂಚಿಸಲಾಯಿತು. ಇದಾದ ಬೆನ್ನಲ್ಲೇ ಆ ಪೆವಿಲಿಯನ್‌ಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು.
ಚೀನಾದ ‘ಯೂನಿಟ್ರೀ’ (Unitree) ಕಂಪನಿ ತಯಾರಿಸಿದ ರೋಬೋಟ್ ನಾಯಿಯನ್ನು ವಿಶ್ವವಿದ್ಯಾಲಯವು ತನ್ನದೇ ತಯಾರಿಕೆ ಎಂದು ಬಿಂಬಿಸಿತ್ತು ಎಂಬ ಆರೋಪ ಕೇಳಿಬಂದಿದೆ.

ಸರ್ಕಾರದ ಕಠಿಣ ಕ್ರಮ:
ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಕ್ಷಣವೇ ಕ್ರಮ ಕೈಗೊಂಡು, ಮಳಿಗೆಯನ್ನು ತೆರವುಗೊಳಿಸಲು ಆದೇಶಿಸಿವೆ. ಪ್ರದರ್ಶನಕಾರರು ಪಾರದರ್ಶಕತೆ ಮತ್ತು ನಿಯಮಗಳನ್ನು ಪಾಲಿಸಲೇಬೇಕು ಎಂಬ ಖಡಕ್‌ ಸಂದೇಶವನ್ನು ಸರ್ಕಾರ ರವಾನಿಸಿದೆ.
ಭಾರತವು ಆಯೋಜಿಸಿದ ಇಂತಹ ಉನ್ನತ ಮಟ್ಟದ ತಂತ್ರಜ್ಞಾನ ಸಮ್ಮೇಳನದಲ್ಲಿ ಚೀನಾ ನಿರ್ಮಿತ ರೋಬೋಟ್‌ಗಳನ್ನು ಪ್ರದರ್ಶಿಸಿರುವುದು “ರಾಷ್ಟ್ರೀಯ ಮುಜುಗರ” ಎಂದು ರಾಜಕೀಯ ನಾಯಕರು ವಿಶ್ವವಿದ್ಯಾಲಯದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಶ್ವವಿದ್ಯಾಲಯದ ಸ್ಪಷ್ಟನೆ:
ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಅಧಿಕೃತ ಪ್ರಕಟಣೆ ಹೊರಡಿಸಿದೆ. “ಈ ರೋಬೋಟ್ ನಾಯಿಯನ್ನು ನಾವು ತಯಾರಿಸಿಲ್ಲ ಮತ್ತು ಅದನ್ನು ನಾವೇ ತಯಾರಿಸಿದ್ದು ಎಂದು ಎಲ್ಲೂ ಹೇಳಿಕೊಂಡಿಲ್ಲ. ಇದನ್ನು ಚೀನಾದ ಯೂನಿಟ್ರೀ ಕಂಪನಿಯಿಂದ ಖರೀದಿಸಲಾಗಿದೆ,” ಎಂದು ಸ್ಪಷ್ಟನೆ ನೀಡುವ ಮೂಲಕ ವಿವಾದದಿಂದ ದೂರ ಸರಿಯಲು ಪ್ರಯತ್ನಿಸಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಏನಿದು ವಿವಾದ..?
ಯುನಿಟ್ರೀ ಗೋ2 ರೋಬೋಟಿಕ್ ನಾಯಿಯನ್ನು “ಓರಿಯನ್” ಹೆಸರಿನಲ್ಲಿ ಪ್ರದರ್ಶಿಸಲಾಗಿದೆ ಎಂದು ವರದಿಗಳು ಸೂಚಿಸಿದ ನಂತರ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ತೀವ್ರ ಟೀಕೆಗೆ ಗುರಿಯಾಯಿತು, ಆಮದು ಮಾಡಿಕೊಂಡ ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಗಾಲ್ಗೋಟಿಯಾಸ್‌ನ ಪ್ರಾಧ್ಯಾಪಕಿ ನೇಹಾ ಸಿಂಗ್ ರೋಬೋಡಾಗ್ ಅನ್ನು ‘ಓರಿಯನ್’ ಎಂದು ಪರಿಚಯಿಸುತ್ತಿದ್ದಾರೆ ಮತ್ತು ಅದನ್ನು ಸಂಸ್ಥೆಯ ಶ್ರೇಷ್ಠತಾ ಕೇಂದ್ರವು ಅಭಿವೃದ್ಧಿಪಡಿಸಿದೆ ಎಂದು ಹೇಳುವ ಕ್ಲಿಪ್ ವೈರಲ್ ಆಗಿತ್ತು.
ಎಐ ಸಮ್ಮೇಳನದ ಘನತೆಗೆ ಧಕ್ಕೆ ತಂದ ಕಾರಣಕ್ಕಾಗಿ ಬುಧವಾರವೇ ವಿಶ್ವವಿದ್ಯಾಲಯದ ತಂಡಕ್ಕೆ ಸ್ಥಳದಿಂದ ಹೊರಹೋಗುವಂತೆ ಸೂಚಿಸಲಾಯಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement