ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಚೇರಿ ಖಾಲಿ ಮಾಡುವಂತೆ ಕಾಂಗ್ರೆಸ್ಸಿಗೆ ಸರ್ಕಾರದ ಸೂಚನೆ

ನವದೆಹಲಿ: ಕಳೆದ 48 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ದೆಹಲಿಯ ’24, ಅಕ್ಬರ್ ರಸ್ತೆ’ ಬಂಗಲೆಯನ್ನು ಶನಿವಾರದೊಳಗೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಈ ಬೆಳವಣಿಗೆಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಕಳೆದ ವರ್ಷವಷ್ಟೇ ಕಾಂಗ್ರೆಸ್ ಪಕ್ಷವು ಕೋಟ್ಲಾ ಮಾರ್ಗದಲ್ಲಿರುವ ತನ್ನ … Continued

ಚೀನಾ ರೋಬೋಟ್ ವಿವಾದ: ದೆಹಲಿ ಎಐ(AI) ಇಂಪ್ಯಾಕ್ಟ್ ಸಮ್ಮಿಟ್’ನಿಂದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಗೇಟ್‌ ಪಾಸ್‌

ನವದೆಹಲಿ: ಚೀನಾ ಮೂಲದ ‘ರೋಬೋಟ್ ನಾಯಿ’ಯನ್ನು (Robodog) ತನ್ನದೇ ಆವಿಷ್ಕಾರ ಎಂದು ಪ್ರದರ್ಶಿಸಿದ ಆರೋಪದ ಮೇಲೆ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026’ ರಿಂದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಹೊರಹಾಕಲಾಗಿದೆ. ವಿವಾದದ ಹಿನ್ನೆಲೆಯಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಮಳಿಗೆಯನ್ನು (Stall) ಖಾಲಿ ಮಾಡುವಂತೆ ಸೂಚಿಸಲಾಯಿತು. ಇದಾದ ಬೆನ್ನಲ್ಲೇ ಆ ಪೆವಿಲಿಯನ್‌ಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು … Continued

ಪಶ್ಚಿಮ ಘಟ್ಟದಲ್ಲಿ 2015ರ ನಂತರದ ಅರಣ್ಯ ಒತ್ತುವರಿ, ಅನಧಿಕೃತ ಹೋಮ್ ಸ್ಟೇ‌-ರೆಸಾರ್ಟ್ ತೆರವಿಗೆ ಅರಣ್ಯ ಸಚಿವರ ಸೂಚನೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರೂರು ಹಾಗೂ ಕೇರಳದ ವಯನಾಡು ಭೂಕುಸಿತ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿರುವ ಅನಧಿಕೃತ ಹೋಂ ಸ್ಟೇ, ರೆಸಾರ್ಟ್‌ಗಳನ್ನು ತೆರವುಗೊಳಿಸಲು ಮುಂದಾಗಿದೆ. ಪಶ್ಚಿಮ ಘಟ್ಟದಲ್ಲಿ (Western Ghats) 2015ರ ನಂತರ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಟ್ಟುನಿಟ್ಟಿನ … Continued