ವೀಡಿಯೊ..| ರಣಜಿ ಫೈನಲ್‌ ನಲ್ಲಿ ಜಮ್ಮು-ಕಾಶ್ಮೀರ ತಂಡಕ್ಕೆ ಹುರಿದುಂಬಿಸಲು ಹುಬ್ಬಳ್ಳಿಗೆ ಬಂದ ಸಿಎಂ ಓಮರ್ ಅಬ್ದುಲ್ಲಾ…!

ಹುಬ್ಬಳ್ಳಿ : ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡಗಳ ನಡುವೆ ಇಲ್ಲಿನ ಕೆ.ಎಸ್.ಸಿ.ಎ (KSCA) ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ವೀಕ್ಷಿಸಲು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಶುಕ್ರವಾರ ಸಂಜೆ ಹುಬ್ಬಳ್ಳಿಗೆ ಆಗಮಿಸಿದ್ದಾರೆ.
ಜೆಕೆ ತಂಡ ಬೃಹತ್ ಮುನ್ನಡೆ ಸಾಧಿಸಿದ್ದು, ಚೊಚ್ಚಲ ರಣಜಿ ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದೆ. ಹೀಗಾಗಿ ತಂಡಕ್ಕೆ ಚಿಯರ್ ಅಪ್ ಮಾಡಲು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಜಮ್ಮು ಕಾಶ್ಮೀರದಿಂದ ಹುಬ್ಬಳ್ಳಿಗೆ ಬಂದಿಳಿದಿದ್ದಾರೆ. ಶನಿವಾರ (ಫೆಬ್ರವರಿ 28) ಅಂತಿಮ ದಿನದ ಆಟವನ್ನು ವೀಕ್ಷಿಸಿ ತಂಡಕ್ಕೆ ಚೀಯರ್‌ ಅಪ್‌ ಮಾಡಲಿದ್ದಾರೆ.
ಕ್ರಿಕೆಟ್‌ ಮೈದಾನಕ್ಕೆ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಭೇಟಿ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಜಮ್ಮು-ಕಾಶ್ಮೀರ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಹೆಮ್ಮೆಯ ಕ್ಷಣ
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಓಮರ್ ಅಬ್ದುಲ್ಲಾ, ತಮ್ಮ ರಾಜ್ಯ ಜಮ್ಮು-ಕಾಶ್ಮೀರ ತಂಡ ಫೈನಲ್ ತಲುಪಿರುವುದಕ್ಕೆ ಸಂತಸವಾಗಿದೆ ಎಂದರು. “ಜಮ್ಮು ಮತ್ತು ಕಾಶ್ಮೀರ ಫೈನಲ್ ತಲುಪಿರುವುದು ಹೆಮ್ಮೆಯ ಕ್ಷಣ. ಈ ಐತಿಹಾಸಿಕ ಸಾಧನೆ ಮತ್ತು ಬಹುಶಃ ನಮಗೆ ಒಲಿಯಲಿರುವ ಮೊದಲ ಪ್ರಶಸ್ತಿ, ಜಮ್ಮು-ಕಾಶ್ಮೀರ ಭಾಗದ ಕ್ರಿಕೆಟ್ ಭವಿಷ್ಯವನ್ನೇ ಬದಲಿಸಬಹುದು ಎಂದರು.
ನಮ್ಮ ತಂಡ ಮೊದಲ ಬಾರಿಗೆ ರಣಜಿ ಗೆಲ್ಲುವ ಹೊಸ್ತಿಲಲ್ಲಿದೆ. ತಂಡವನ್ನು ಪ್ರೋತ್ಸಾಹಿಸಲು ಹುಬ್ಬಳ್ಳಿಗೆ ಬಂದಿದ್ದೇನೆ ಎಂದರು.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

ಜಮ್ಮು-ಕಾಶ್ಮೀರ ತಂಡ ಈ ಹಂತಕ್ಕೆ ಬರಲ್ಲ ಅನ್ನುತ್ತಿದ್ದರು. ಆದ್ರೆ, ನಮ್ಮ ಆಟಗಾರರು ಉತ್ತಮವಾಗಿ ಆಡಿ ತೋರಿಸಿದ್ದಾರೆ. ನಮ್ಮ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ, ಆದರೆ ಅವರಿಗೆ ಇದುವರೆಗೆ ಸರಿಯಾದ ಅವಕಾಶ ಅಥವಾ ಮಾನ್ಯತೆ ಸಿಕ್ಕಿರಲಿಲ್ಲ. ನಾವು ಖಂಡಿತವಾಗಿ ಟ್ರೋಫಿ ತೆಗೆದುಕೊಂಡು ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದು ಹುಬ್ಬಳ್ಳಿಗೆ ತಮ್ಮ ಮೊದಲ ಭೇಟಿ ಎಂದು ತಿಳಿಸಿದ ಅಬ್ದುಲ್ಲಾ, “ಕ್ರಿಕೆಟ್ ಧರ್ಮ ಮತ್ತು ಭೇದಭಾವಗಳನ್ನು ಮೀರಿ ಜನರನ್ನು ಒಂದುಗೂಡಿಸುತ್ತದೆ. ಜಮ್ಮು-ಕಾಶ್ಮೀರ ತಂಡ ಕಪ್ ಗೆದ್ದು ಮನೆಗೆ ಕೊಂಡೊಯ್ಯಲಿ ಎಂದು ಆಶಿಸುತ್ತೇನೆ,” ಎಂದರು.

ಪ್ರಮುಖ ಸುದ್ದಿ :-   ಕುಮಟಾ : ಶಾಲೆಯ ಪಕ್ಕವೇ ಭೂ ಕುಸಿತ ; ಕಟ್ಟಡಕ್ಕೆ ಬಂದು ಅಪ್ಪಳಿಸಿದ ಬೃಹತ್‌ ಬಂಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement