ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿಯ ಕಥಾನಾಯಕಿ ಭಾರ್ಗವಿ ಪಾತ್ರದ ನಟಿ ರಾಧಾ ಭಗವತಿ ಹಾಗೂ ಹಾಗೂ ಅಮೃತಧಾರೆ’ ಖ್ಯಾತಿಯ ಕಿರುತೆರೆ ನಟ ರಾಣವ್ ಗೌಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
‘ಅಮೃತಧಾರೆ’ ಸೀರಿಯಲ್ನಲ್ಲಿ ಜೆಡಿ ಪಾತ್ರದಲ್ಲಿ ರಾಣವ ಗೌಡ ಅನಟಿಸಿದ್ದಾರೆ.. ಈ ಹಿಂದೆ ‘ಅಮೃತಧಾರೆ’ ಸೀರಿಯಲ್ನಲ್ಲಿ ಜೆಡಿ ಪತ್ನಿ ಮಲ್ಲಿಯಾಗಿ ರಾಧಾ ಭಗವತಿ ನಟಿಸಿದ್ದರು. ಆಗಲೇ ಇಬ್ಬರ ನಡುವೆ ಪ್ರೀತಿ ಬೆಳೆದಿದೆ ಎನ್ನಲಾಗಿದೆ. ಈಗ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಿಸಿಕೊಂಡಿದ್ದಾರೆ. ರಾಣವ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಹಾರ ಹಾಕಿ ನಿಂತ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ‘ಫೈನಲಿ’ ಎಂಬ ಕ್ಯಾಪ್ಶನ್ ಬರೆದಿದ್ದಾರೆ. ಆದರೆ ಮದುವೆ ದಿನಾಂಕದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ