ಕೋಲ್ಕತ್ತಾ: 2026ರ ಟಿ20 ವಿಶ್ವಕಪ್ನ ಸೂಪರ್ ೮ರ ಹಂತದಲ್ಲಿ ಭಾರತವು ತಂಡವು ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್ಗಳ ಜಯಗಳಿಸಿ ಸೆಮಿ ಫೈನಲ್ ಪ್ರವೇಶಿಸಿದೆ. ಸಂಜು ಸ್ಯಾಮ್ಸನ್ ಸಮಯೋಚಿತ ಪ್ರದರ್ಶನ ನೀಡುವ ಮೂಲಕ ಈಡನ್ ಗಾರ್ಡನ್ನಲ್ಲಿ ಆತಿಥೇಯರಿಗೆ ಗೆಲುವು ತಂದುಕೊಟ್ಟರು. ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಸೆಮಿ ಫೈನಲ್ ಪಂದ್ಯ ನಡೆಯಲಿದೆ.
ವಿಂಡೀಸ್ ನೀಡಿದ 195 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಆರಂಭದಲ್ಲೇ ಅಭಿಷೇಕ ಶರ್ಮಾ ಮತ್ತು ಇಶಾನ್ ಕಿಶನ್ ಅವರ ವಿಕೆಟ್ ಕಳೆದುಕೊಂಡರೂ, ಈ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ತಾಳ್ಮೆ ಮತ್ತು ವಿವೇಚನಾಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಸ್ಯಾಮ್ಸನ್ 50 ಎಸೆತಗಳಲ್ಲಿ 97 ರನ್ ಗಳಿಸಿದರು.
ಅಭಿಷೇಕ್ ಶರ್ಮಾ ಅವರ ಫಾರ್ಮ್ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ, ಅವರು 11 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಮತ್ತೊಮ್ಮೆ ಬ್ಯಾಟಿಂಗ್ನಲ್ಲಿ ವಿಫಲರಾದರು.
ಪಂದ್ಯದ ಮೂರನೇ ಓವರ್ನಲ್ಲಿ ಸ್ಯಾಮ್ಸನ್ 17 ರನ್ ಗಳಿಸಿದ್ದಾಗ, ಅಭಿಷೇಕ ಕೊನೆಯ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕುವ ಅಗತ್ಯವಿರಲಿಲ್ಲ. ಆದರೂ ಅವರು ಹೊಡೆಯಲು ಹೋಗಿ ಅಕೀಲ್ ಹೊಸೈನ್ ಎಸೆತದಲ್ಲಿ ಹೆಟ್ಮೆಯರ್ ಅವರಿಗೆ ಸರಳ ಕ್ಯಾಚ್ ನೀಡಿ ಔಟಾದರು. ಅವರ ಬ್ಯಾಟಿಂಗ್ ಮಾತ್ರವಲ್ಲ; ಫೀಲ್ಡಿಂಗ್ ಕೂಡ ಹವ್ಯಾಸಿ ಕ್ರಿಕೆಟ್ಗಿಂತಲೂ ಕಳಪೆಯಾಗಿತ್ತು. ಅವರು ಎರಡು ಸುಲಭ ಕ್ಯಾಚ್ಗಳನ್ನು ಕೈಬಿಟ್ಟಿದ್ದು ವೆಸ್ಟ್ ಇಂಡೀಸ್ ಬೃಹತ್ ಮೊತ್ತ ಪೇರಿಸಲು ಕಾರಣವಾಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ಗೆ ಉತ್ತಮ ಆರಂಭ ಸಿಕ್ಕಿತು. ಶಾಯ್ ಹೋಪ್ ಹಾಗೂ ಚೇಸ್ ಮೊದಲ ವಿಕೆಟ್ಗೆ 68 ರನ್ಗಳ ಜೊತೆಯಾಟ ನೀಡಿದರು. ವಿಂಡೀಸ್ನ ಈ ಆರಂಭಕ್ಕೆ ಭಾರತದ ಫಿಲ್ಡರ್ಗಳ ಕೊಡುಗೆಯೂ ಅಪಾರವಾಗಿತ್ತು. ವರುಣ್ ಚಕ್ರವರ್ತಿ ರನೌಟ್ ಮಿಸ್ ಮಾಡಿದರೆ, ಅಭಿಷೇಕ ಶರ್ಮಾ ಎರಡು ಸುಲಭ ಕ್ಯಾಚ್ ಕೈಚೆಲ್ಲಿದರು. ಇದರ ಲಾಭ ಪಡೆದ ವಿಂಡೀಸ್ ವಿಕೆಟ್ಗಳ ಪತನದ ನಡುವೆಯೂ ಭಾರತದ ಬೌಲರ್ಗಳ ಮೇಲೆ ಸವಾರಿ ನಡೆಸಿತು.
ಮೊದಲ 10 ಓವರ್ಗಳಲ್ಲಿ ಭಾರತ ಉತ್ತಮವಾಗಿ ಬೌಲ್ ಮಾಡಿ ಕೇವಲ 82 ರನ್ ಬಿಟ್ಟುಕೊಟ್ಟಿತು. ಆದರೆ ಕೊನೆಯ 10 ಓವರ್ಗಳಲ್ಲಿ ವಿಂಡೀಸ್ 113 ರನ್ ಕಲೆಹಾಕಿತು. ವಿಂಡೀಸ್ ಪರ ರೊಸ್ಟನ್ ಚೇಸ್ ಅತ್ಯಧಿಕ 40 ರನ್ಗಳನ್ನು ಗಳಿಸಿದರೆ, ಪೊವೆಲ್ ಹಾಗೂ ಜೇಸನ್ ಹೋಲ್ಡರ್ ಕ್ರಮವಾಗಿ 34 ಮತ್ತು 37 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇವರಿಬ್ಬರ ನಡುವೆ ಐದನೇ ವಿಕೆಟ್ಗೆ 74 ರನ್ಗಳ ಜೊತೆಯಾಟವೂ ಮೂಡಿಬಂತು. ಇದರ ಪರಿಣಾಮವಾಗಿ ವಿಂಡೀಸ್ ಪಡೆ 20 ಓವರ್ಗಳಲ್ಲಿ 195 ರನ್ ಕಲೆಹಾಕಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ ತಮ್ಮ ನಾಲ್ಕು ಓವರ್ಗಳಲ್ಲಿ 36 ರನ್ ನೀಡಿ ಎರಡು ವಿಕೆಟ್ ಪಡೆದರು. ವರುಣ ಚಕ್ರವರ್ತಿ ನಾಲ್ಕು ಓವರ್ಗಳಲ್ಲಿ ಒಂದು ವಿಕೆಟ್ ಪಡೆದು 40 ರನ್ ಬಿಟ್ಟುಕೊಟ್ಟರು.
ಸ್ಯಾಮ್ಸನ್ ಚೆನ್ನಾಗಿ ಆಡದಿದ್ದರೆ ಪಂದ್ಯದ ಫಲಿತಾಂಶ ಬೇರೆಯೇಆಗಬಹುದಿತ್ತು.ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ ಅಜೇಯ 97 ರನ್ ಗಳಿಸಿದರು. ಈ ಇನ್ನಿಂಗ್ಸ್ನಲ್ಲಿ 12 ಬೌಂಡರಿಗಳು ಮತ್ತು 4 ಸಿಕ್ಸರ್ಗಳು ಸೇರಿದ್ದವು. ತಿಲಕ ವರ್ಮಾ ಕೂಡ 27 ರನ್ ಗಳಿಸಿದರು.. ಕೊನೆಯಲ್ಲಿ ಶಿವಂ ದುಬೆ ಕೂಡ ಅಜೇಯ 8 ರನ್ಗಳಿಸಿದರು. ಭಾರತವು ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆ ಜಯಗಳಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ