ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಕಡ್ಲೆಯ ಅರಬ್ಬೀ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೆಬರ ಪತ್ತೆಯಾಗಿದೆ.
ಸುಮಾರು 5 ಅಡಿ ಉದ್ದವಿರುವ ಡಾಲ್ಫಿನ್ ಕೊಳೆತ ಸ್ಥಿತಿಯಲ್ಲಿ ತೀರಕ್ಕೆ ಬಂದು ಬಿದ್ದಿದೆ. ಸಾಮಾನ್ಯವಾಗಿ ಹತ್ತರಿಂದ 15 ನಾಟಿಕಲ್ ಮೈಲು ಒಳಗೆ ಇದು ವಾಸಿಸುತ್ತಿದ್ದು ಸಮುದ್ರದ ನೀರಿನ ಇಳಿತದ ಸಂದರ್ಭದಲ್ಲಿ ಆಳ ಸಮುದ್ರಕ್ಕೆ ಹೋದ ಸಂದರ್ಭದಲ್ಲಿ ಮೀನುಗಾರಿಕಾ ಬೋಟಿನ ಫ್ಯಾನಿಗೆ ಸಿಕ್ಕಿ ಮೃತಪಟ್ಟಿರಬಹುದು.
ಕೆಲವು ಸಂದರ್ಭದಲ್ಲಿ ಕಲುಷಿತ ನೀರು ಹಾಗೂ ಆಮ್ಲಜನಕದ ಕೊರತೆಯಿಂದಲೂ ವಯಸ್ಸಾದ ಡಾಲ್ಫಿನ್ ಸಾಯಬಹುದು. ಅಲ್ಲದೆ ಹವಾಮಾನದ ವ್ಯತ್ಯಾಸದಿಂದಲೂ ಇದು ಹೊಂದಿಕೊಳ್ಳಲಾಗದೆ ಸಾವಿಗೀಡಾಗಬಹುದಾಗಿದೆ. ಕಡ್ಲೆ ತೀರದಲ್ಲಿ ಮೃತ ಡಾಲ್ಫಿನ್ ಕಂಡು ವಾಯು ವಿಹಾರಕ್ಕೆ ಬಂದ ಜನರು ಡಾಲ್ಫಿನ್ ಕಳೆಬರ ಕಂಡು ಮರುಗಿದ್ದಾರೆ. ಮಾನವ ಸ್ನೇಹಿಯಾಗಿರುವ ಡಾಲ್ಫಿನ್ ಅರಬ್ಬೀ ಸಮುದ್ರದಲ್ಲಿ ಏಪ್ರಿಲ್- ಮೇ ಅವಧಿಯಲ್ಲಿ ಸಾವಿಗೀಡಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ