ವೀಡಿಯೊ| ಈಜಿಪ್ಟ್ ಸಚಿವರನ್ನು ಸ್ವಾಗತಿಸುವಾಗ ಆಯತಪ್ಪಿ ಬಿದ್ದ ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್

ಇಸ್ಲಾಮಾಬಾದ್: ಪಾಕಿಸ್ತಾನದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಭಾನುವಾರ ಇಸ್ಲಾಮಾಬಾದ್‌ನಲ್ಲಿ ಈಜಿಪ್ಟ್‌ನ ವಿದೇಶಾಂಗ ಸಚಿವ ಬದರ್ ಅಬ್ದೆಲಟ್ಟಿ ಅವರನ್ನು ಸ್ವಾಗತಿಸುವ ವೇಳೆ ಕೆಂಪು ಹಾಸಿನ ಮೇಲೆ ಆಯತಪ್ಪಿ ಬಿದ್ದ ಘಟನೆ ನಡೆದಿದೆ.
ಮಧ್ಯಪ್ರಾಚ್ಯದ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಕುರಿತಾದ ಚರ್ಚೆಗಾಗಿ ಈಜಿಪ್ಟ್ ವಿದೇಶಾಂಗ ಸಚಿವ ಬದ್ರ್ ಅಬ್ದೆಲಾಟ್ಟಿ ಆಗಮಿಸಿದ್ದಾಗ ಈ ಘಟನೆ ಸಂಭವಿಸಿದೆ.
ಗಣ್ಯರನ್ನು ಬರಮಾಡಿಕೊಳ್ಳಲು ಮುಂದಕ್ಕೆ ಹೆಜ್ಜೆ ಹಾಕಿದಾಗ ದಾರ್ ಅವರು ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದರು. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಮೇಲೇಳಲು ಸಹಕರಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಬಿದ್ದ ರಭಸಕ್ಕೆ ಅವರ ಭುಜಕ್ಕೆ ‘ಹೇರ್‌ಲೈನ್ ಫ್ರ್ಯಾಕ್ಚರ್’ (ಸಣ್ಣ ಬಿರುಕು) ಆಗಿದೆ ಎಂದು ಅಧಿಕಾರಿಗಳು ನಂತರ ತಿಳಿಸಿದ್ದಾರೆ.

ಗಾಯಗೊಂಡಿದ್ದರೂ ಸಹ, ಇಶಾಕ್ ದಾರ್ ಅವರು ನಿಗದಿಪಡಿಸಿದ ಎಲ್ಲಾ ಸಭೆಗಳಲ್ಲಿ ಭಾಗವಹಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಅವರ ಪುತ್ರ ಅಲಿ ದಾರ್, “ನನ್ನ ತಂದೆ ನೋವು ನಿವಾರಕ ಮಾತ್ರೆಗಳನ್ನು (Painkillers) ತೆಗೆದುಕೊಳ್ಳುವ ಮೂಲಕ ದಿನವಿಡೀ ನಡೆದ ಪ್ರಮುಖ ಸಭೆಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ರಾತ್ರಿ 9 ಗಂಟೆಯ ನಂತರ ಕುಟುಂಬದವರ ಒತ್ತಾಯದ ಮೇರೆಗೆ ವೈದ್ಯಕೀಯ ತಪಾಸಣೆ ನಡೆಸಿದಾಗ ಭುಜದಲ್ಲಿ ಸಣ್ಣ ಬಿರುಕು ಇರುವುದು ಪತ್ತೆಯಾಗಿದೆ,” ಎಂದು ಎಕ್ಸ್ (X) ನಲ್ಲಿ ತಿಳಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬಗ್ಗೆ ಚರ್ಚಿಸಲು ಪಾಕಿಸ್ತಾನ, ಈಜಿಪ್ಟ್, ಟರ್ಕಿಯೆ ಮತ್ತು ಸೌದಿ ಅರೇಬಿಯಾದ ವಿದೇಶಾಂಗ ಮಂತ್ರಿಗಳ ನಡುವೆ ಇಸ್ಲಾಮಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಈ ಘಟನೆ ಸಂಭವಿಸಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನವು ಸಂಧಾನಕಾರನ ಪಾತ್ರ ವಹಿಸಲು ಮುಂದಾಗಿದೆ. ಯುದ್ಧ ಯಾರಿಗೂ ಹಿತವಲ್ಲ, ಇದು ಕೇವಲ ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತದೆ ಎಂದು ದಾರ್ ತಿಳಿಸಿದರು. ಟರ್ಕಿ ಮತ್ತು ಈಜಿಪ್ಟ್ ದೇಶಗಳು ಪಾಕಿಸ್ತಾನದ ಈ ಸಂಧಾನದ ಪ್ರಯತ್ನಕ್ಕೆ ಬೆಂಬಲ ಸೂಚಿಸಿವೆ. ಆದರೆ, ಅಮೆರಿಕ ಅಥವಾ ಇರಾನ್ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement