
ಕುಮಟಾ: ಸೌರಭ ಸಂಸ್ಥೆ ವತಿಯಿಂದ ʼಸಾಧನಾ ಸೌರಭ; ಸಾಂಸ್ಕೃತಿಕ ಅನುಸಂಧಾನ ಮತ್ತು ರಾಷ್ಟ್ರೀಯ ಸೌರಭ ಸಮ್ಮಾನ ಪ್ರಶಸ್ತಿ ಪ್ರದಾನ ಸಮಾರಂಭʼ (Sadhana Sourabha)ವನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾಭವನದಲ್ಲಿ ಏಪ್ರಿಲ್ 26ರಂದು ಭಾನುವಾರ ಬೆಳಿಗ್ಗೆ 9:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದಿನವಿಡೀ ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 26ರಂದು ಬೆಳಿಗ್ಗೆ 9:55ಕ್ಕೆ ವೇದಿಕೆ ಕಾರ್ಯಕ್ರಮವನ್ನು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಉದ್ಘಾಟಿಸಲಿದ್ದಾರೆ. ಈ ಬಾರಿಯ ರಾಷ್ಟ್ರೀಯ ಸೌರಭ ಸಮ್ಮಾನ ಪ್ರಶಸ್ತಿಯನ್ನು ವಿಶ್ವವಾಣಿ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಗೆ ಪ್ರದಾನ ಮಾಡಲಾಗುತ್ತದೆ.
ವಿಶ್ವೇಶ್ವರ ಭಟ್ ಅವರ ಕುರಿತು ಸಂವಾದ ʼಪತ್ರಿಕಾ ಪಥʼ ಬೆಳಿಗ್ಗೆ 11:10ಕ್ಕೆ ನಡೆಯಲಿದ್ದು, ಹೊನ್ನಾವರದ ನಾಗರಿಕ ಪತ್ರಿಕೆ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಕರ್ಕಿ ಮಾತನಾಡಲಿದ್ದಾರೆ. ಸಾಹಿತ್ಯ ಪಥ ಬೆಳಿಗೆ 11:45ಕ್ಕೆ ನಡೆಯಲಿದ್ದು, ಉಡುಪಿ ಜಿಲ್ಲೆ ಗಿಳಿಯಾರದ ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರ್ ಮಾತನಾಡಲಿದ್ದಾರೆ.ಕಲಾ ಸೌರಭ ಕಾರ್ಯಕ್ರಮದಲ್ಲಿ ಮಧ್ಯಾಹ್ನ 12:15ಕ್ಕೆ ಯುವ ಭಕ್ತಿ ಭಾವಗಾನ ಕಾರ್ಯಕ್ರಮ ನಡಯಲಿದ್ದು, ಹಿಂದೂಸ್ತಾನಿ ಗಾಯಕ ರಘುನಂದನ ಭಟ್ ಗಾಯನ ಮಾಡಲಿದ್ದಾರೆ. ಅವರಿಗೆ ತಬಲಾದಲ್ಲಿ ಗುರುರಾಜ ಹೆಗಡೆ ಹಾಗೂ ಹಾರ್ಮೋನಿಯಂನಲ್ಲಿ ಕಲಾವಿದ ಸತೀಶ ಭಟ್ ಹೆಗ್ಗಾರ ಸಾಥ್ ನೀಡಲಿದ್ದಾರೆ.

ವಿಸ್ಮಯ ಪಥ ಸಂವಾದ ಮಧ್ಯಾಹ್ನ 2:15ಕ್ಕೆ ನಡೆಯಲಿದ್ದು, ಅಂಕಣಕಾರ, ಹಿರಿಯ ಪತ್ರಕರ್ತ ರಾಜು ಅಡಕಳ್ಳಿ ಮಾತನಾಡಲಿದ್ದಾರೆ. ಪ್ರವಾಸ ಕಥನ ಸಂವಾದ ಮಧ್ಯಾಹ್ನ 2:45ಕ್ಕೆ ನಡೆಯಲಿದ್ದು, ಲೇಖಕ ಹಾಗೂ ಅಂಕಣಕಾರ ಕಿರಣ ಉಪಾಧ್ಯಾಯ (ಬಹ್ರೈನ್) ಮಾತನಾಡಲಿದ್ದಾರೆ. ಅಂತರಂಗ ಪಥವು ಮಧ್ಯಾಹ್ನ 3:35ಕ್ಕೆ ಮಾಜಿ ಸಂಸದ ಹಾಗೂ ಅಂಕಣಕಾರ ಪ್ರತಾಪ ಸಿಂಹ ಮಾತನಾಡಲಿದ್ದಾರೆ.
ಪ್ರಶಸ್ತಿ ಪ್ರದಾನ ಸಂಜೆ 4:35ಕ್ಕೆ ನಡೆಯಲಿದ್ದು, ಪ್ರಧಾನ ಅಭ್ಯಾಗತರಾಗಿ ಮೂಡುಬಿದಿರೆ ಆಳ್ವಾಸ್ ಫೌಂಡೇಶನ್ ಸಂಸ್ಥಾಪಕ ಡಾ.ಎಂ.ಎನ್. ಮೋಹನ ಆಳ್ವಾ ಭಾಗವಹಿಸಲಿದ್ದು, ಸೌರಭ ಅಧ್ಯಕ್ಷ ಶ್ರೀಕಾಂತ ಕೆ. ಭಟ್ಟ, ಉಪಾಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಅರುಣ ಎನ್.ಹೆಗಡೆ ಉಪಸ್ಥಿತರಿರಲಿದ್ದಾರೆ. ಸಂಜೆ 6:20ಕ್ಕೆ ಮೂಡುಬಿದಿರೆ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಸ್ತುತ ಪಡಿಸುವ ದಿ.ಬೊಟ್ಟಿಕೆರೆ ಪರುಷೋತ್ತಮ ಪೂಂಜ ವಿರಚಿತ ʼಸಿಂಧೂರ ಸಂಗ್ರಾಮʼ ಯಕ್ಷಗಾನ ಪ್ರದರ್ಶನ ನಡೆಯಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ