ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ.ವಿ.ಬಾಳಿಗಾ ಪ್ರೌಢಶಾಲಾ ವಿದ್ಯಾರ್ಥಿಗಲ್ಲಿ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಎರಡನೇ ರ್ಯಾಂಕ್ ಗಳಿಸಿದ್ದಾರೆ.
ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಅವರಲ್ಲಿ 25 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. 5 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ದಿಶಾಂತ ದಯಾನಂದ್ ನಾಯ್ಕ 625ಕ್ಕೆ 624 (99.84)ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಎರಡನೇ ರ್ಯಾಂಕ್
ಪಡೆದುಕೊಂಡಿದ್ದಾರೆ.
ಸಂಚಿತ ಸೂರಜ ರಾಯ್ಕರ ಅವರು 625ಕ್ಕೆ 617 (98.72)ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದಿದ್ದಾರೆ. ಶಾಲೆಗೆ ಕೀರ್ತಿ ತಂದ ಇವರನ್ನು ಮುಖ್ಯ ಆಧ್ಯಾಪಕಿ ಜಯಲಕ್ಷ್ಮಿ ಹಾಗೂ ಕೆನರಾ ಕಾಲೇಜ್ ಸೊಸೈಟಿಯ ಕಾರ್ಯಾಧ್ಯಕ್ಷ ಹನುಮಂತ ಶಾನಭಾಗ್, ಕಾರ್ಯದರ್ಶಿಗಳಾದ ವೈ. ವಿ. ಶಾನಭಾಗ ಅಭಿನಂದಿಸಿದ್ದಾರೆ


ನಿಮ್ಮ ಕಾಮೆಂಟ್ ಬರೆಯಿರಿ