ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ ; ಕೆರೆಮನೆ ಶಿವಾನಂದ ಹೆಗಡೆ, ಅನಂತಕೃಷ್ಣ ಶರ್ಮ, ಜ್ಯೋತಿ ಹೆಗಡೆ ಸೇರಿ ಕರ್ನಾಟಕದ 6 ಸಾಧಕರಿಗೆ ಪ್ರಶಸ್ತಿ

ನವದೆಹಲಿ: ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅತ್ಯುನ್ನತ ಫೆಲೋಶಿಪ್ (ಅಕಾಡೆಮಿ ರತ್ನ) ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2024 ಮತ್ತು 2025ನೇ ಸಾಲಿನ ಪ್ರತಿಷ್ಠಿತ ‘ಅಕಾಡೆಮಿ ಪ್ರಶಸ್ತಿಗಳು’ ಹಾಗೂ ಫೆಲೊಶಿಪ್‌ಗಳನ್ನು ಪ್ರಕಟಿಸಲಾಗಿದೆ. ಒಟ್ಟು ಏಳು ಸಾಧಕರನ್ನು ಅಕಾಡೆಮಿ ಫೆಲೋಶಿಪ್‌ ಗೌರವಕ್ಕೆ ಭಾಜನರಾಗಿದ್ದಾರೆ ಹಾಗೂ 108 ಸಾಧಕರನ್ನು ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕರ್ನಾಟಕದಿಂದ ಮೃದಂಗ ವಾದಕ ಅನೂರು ಅನಂತಕೃಷ್ಣ ಶರ್ಮ, ಯಕ್ಷಗಾನ ಕಲಾವಿದರಾದ ಕೆರೆಮನೆ ಶಿವಾನಂದ ಹೆಗಡೆ, ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ, ಕರ್ನಾಟಕಿ ವಿದ್ವಾಂಸರಾದ ಟಿ.ಎಸ್. ಸತ್ಯವತಿ, ಮೃದಂಗ ವಾದಕವೀಣಾ ವಾದಕಿ ಜ್ಯೋತಿ ಹೆಗಡೆ ಹಾಗೂ ಜಾನಪದ ಕಲಾ ಸಾಧಕ ಎಸ್.ಸಿ. ಶರ್ಮಾ ಅವರು ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. (ಅಕಾಡೆಮಿ ಪ್ರಕಟಿಸಿದ ಪ್ರಶಸ್ತಿಗಳ ಪಟ್ಟಿಯ ಪಿಡಿಎಫ್‌ ಅನ್ನು Sangeet Nataka Akademi award List   ಇಲ್ಲಿ ಕ್ಲಿಕ್‌ ಮಾಡಿ ನೋಡಬಹುದು)
ಫೆಲೋಶಿಪ್‌ (ಅಕಾಡೆಮಿ ರತ್ನ) ಪಟ್ಟಿ
ರಾಮಲಾಲ ಬರೇತ್‌
ಎ ವಿ ಆನಂದ
ರೀಟಾ ಗಂಗೂಲಿ
ಪುರು ದಧೀಚಿ
ಚಿತ್ತರಂಜನ್ ಜ್ಯೋತಿಷಿ
ಪಶುಮಾರ್ಥಿ ರತ್ತಯ್ಯ ಶರ್ಮ
ಸುಧಾರಾಣಿ ರಘುಪತಿ
2024ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಸಂಗೀತ ಕ್ಷೇತ್ರ  
ಅರುಣ ಕಶಾಲ್ಕರ್ – ಹಿಂದೂಸ್ತಾನಿ ಗಾಯನ
ನಿರ್ಮಾಲ್ಯ ಡೇ – ಹಿಂದೂಸ್ತಾನಿ ಗಾಯನ (ಧ್ರುಪದ)
ಭರತಭೂಷಣ ಗೋಸ್ವಾಮಿ – ಹಿಂದೂಸ್ತಾನಿ ವಾದ್ಯ ಸಂಗೀತ (ಸಾರಂಗಿ)
ಸಂಜಯ ಮುಖರ್ಜಿ – ಹಿಂದೂಸ್ತಾನಿ ವಾದ್ಯ ಸಂಗೀತ (ತಬಲಾ)
ಕೆ. ವಾಗೀಶ – ಕರ್ನಾಟಕಿ ಗಾಯನ
ಎನ್. ವಿಜಯ ಶಿವ – ಕರ್ನಾಟಕಿ ಗಾಯನ
ಎ. ಎಸ್. ಕೃಷ್ಣನ್ – ಕರ್ನಾಟಕ ವಾದ್ಯ ಸಂಗೀತ (ಮೋರ್ಸಿಂಗ್)
ಕೋಮಂಡೂರಿ ಶೇಷಾದ್ರಿ – ಕರ್ನಾಟಕಿ ವಾದ್ಯ ಸಂಗೀತ (ವಯಲಿನ್)
ರಾಕೇಶ ಚೌರಾಸಿಯಾ – ಸೃಜನಾತ್ಮಕ ಮತ್ತು ಪ್ರಾಯೋಗಿಕ ಸಂಗೀತ (ಕೊಳಲು)
ಪ್ರಭಾತಿ ಮುಖರ್ಜಿ – ಇತರ ಪ್ರಮುಖ ಸಂಗೀತ ಪರಂಪರೆ (ಸುಗಮ ಸಂಗೀತ)
ಆನಂದ ಭಾಟೆ – ಇತರ ಪ್ರಮುಖ ಸಂಗೀತ ಪರಂಪರೆ (ಅಭಂಗ)
ಸಮಂದರ್ ಖಾನ್ ಮಂಗನಿಯಾರ್ – ಇತರ ಪ್ರಮುಖ ಸಂಗೀತ ಪರಂಪರೆ (ಮಾಂಡ್)
ನೃತ್ಯ ಕ್ಷೇತ್ರ  
ರಾಜೇಶ್ವರಿ ಸಾಯಿನಾಥ – ಭರತನಾಟ್ಯ
ಬಿಪುಲಚಂದ್ರ ದಾಸ್ – ಕಥಕ್
ರಾಜಕುಮಾರಿ ತಾಳಂಬ್ಸನಾ ದೇವಿ – ಮಣಿಪುರಿ
ವೀಣಾಮೂರ್ತಿ ವಿಜಯ – ಕೂಚಿಪುಡಿ
ಬಿಚಿತ್ರಾನಂದ ಸ್ವೈನ್ – ಒಡಿಸ್ಸಿ
ಪ್ರೇಮಾ ಓಜಾ ಬೋರ್ಬಯಾನ್ – ಸತ್ರಿಯ
ಶ್ರೀದೇವಿ ರಾಜನ್ – ಮೋಹಿನಿಯಾಟ್ಟಂ
ನೃಪೇನ್ ಸಾಹಿಸ್ – ಛೌ
ಶಶಿಧರನ್ ನಾಯರ್ – ಸೃಜನಾತ್ಮಕ ಮತ್ತು ಪ್ರಾಯೋಗಿಕ ನೃತ್ಯ
ಕಲಾಮಂಡಲಂ ಉಣ್ಣಿಕೃಷ್ಣನ್ – ನೃತ್ಯಕ್ಕೆ ಸಂಗೀತ (ಕಥಕ್ಕಳಿ)
ಸೂರ್ಯ ನಾರಾಯಣ ಕುಮಾರ – ನೃತ್ಯಕ್ಕೆ ಸಂಗೀತ (ಕೂಚಿಪುಡಿ)
ಕೆರೆಮನೆ ಶಿವಾನಂದ ಹೆಗಡೆ – ಇತರ ಪ್ರಮುಖ ನೃತ್ಯ ಮತ್ತು ನೃತ್ಯ ನಾಟಕ ಪರಂಪರೆ (ಯಕ್ಷಗಾನ)
ರಂಗಭೂಮಿ ಕ್ಷೇತ್ರ  
ಸತೀಶ ದಾವೆ – ನಿರ್ದೇಶನ
ಟಿ. ಎಸ್. ನಾಗಾಭರಣ – ನಿರ್ದೇಶನ
ರವಿ ಚತುರ್ವೇದಿ – ನಿರ್ದೇಶನ
ಓಂ ಕಟಾರೆ – ನಿರ್ದೇಶನ
ಗುಮ್ಮಡಿ ಗೋಪಾಲಕೃಷ್ಣ ರಾವ್ – ನಟನೆ
ವಾಗೈ ಚಂದ್ರಶೇಖರ – ನಟನೆ
ಅರುಣ ನಲವಡೆ – ನಟನೆ
ಧೀರೇನ್ ಮರ್ಚೆಂಟ್ – ರಂಗಭೂಮಿ ಪೂರಕ ಕಲೆಗಳು (ಬೆಳಕಿನ ವಿನ್ಯಾಸ)
ದಿನೇಶಕುಮಾರ ಪೋದ್ದಾರ್ – ರಂಗಭೂಮಿ ಪೂರಕ ಕಲೆಗಳು (ಬೆಳಕಿನ ವಿನ್ಯಾಸ)
ಮುಕುಂದ ಮರಾಠೆ – ಸಾಂಪ್ರದಾಯಿಕ ರಂಗಭೂಮಿ (ಮಹಾರಾಷ್ಟ್ರ)
ಜಾನಪದ, ಬುಡಕಟ್ಟು, ಕೈಗೊಂಬೆ, ಮುಖವಾಡ ಮತ್ತು ವಾದ್ಯ ತಯಾರಿಕೆ  
ದುರ್ಶೆಟ್ಟಿ ರಾಮಯ್ಯ – ಜಾನಪದ ಸಂಗೀತ (ತೆಲಂಗಾಣ)
ಕೆ. ಮುರುಗನ್ – ಜಾನಪದ ನೃತ್ಯ (ಪುದುಚೇರಿ)
ಎಸ್. ಸಿ. ಶರ್ಮಾ – ಜಾನಪದ ಸಂಗೀತ (ಕರ್ನಾಟಕ)
ಆತ್ಮಜೀತ್ ಸಿಂಗ್ – ನೌಟಂಕಿ (ಉತ್ತರ ಪ್ರದೇಶ)
ಮಹೇಂದ್ರ ರಾಮ – ಜಾನಪದ ಸಂಗೀತ (ಬಿಹಾರ)
ಬೂತನ್ ದೇವಿ ಮತ್ತು ಸೋಂಬರಿ ದೇವಿ (ಜಂಟಿ) – ಜಾನಪದ ನೃತ್ಯ (ಜಾರ್ಖಂಡ್)
ರಂಜಿತಕುಮಾರ ನಾಗ್ – ಜಾನಪದ ನೃತ್ಯ (ಸಂಬಲ್ಪುರಿ, ಒಡಿಶಾ)
ಹವಾ ಸಿಂಗ್ – ಜಾನಪದ ಸಂಗೀತ (ಹರಿಯಾಣ)
ವೆಸ್ವುಜೊ ಫೆಸಾವೊ – ಜಾನಪದ ಸಂಗೀತ (ನಾಗಾಲ್ಯಾಂಡ್ – ಚಾಕೇಸಾಂಗ್ ಸಂಗೀತ)
ಗುಲಾಬೋ ಸಪೇರಾ – ಜಾನಪದ ನೃತ್ಯ (ರಾಜಸ್ಥಾನ – ಕಲ್ಬೇಲಿಯಾ)
ಲೌರೆಂಬಮ್ ಬೇದಬತಿ ದೇವಿ – ಜಾನಪದ ಸಂಗೀತ (ಮಣಿಪುರ)
ಸುಭಾಷ ನಾರಾಯಣ ನಾಕಾಶೆ – ಜಾನಪದ ನೃತ್ಯ (ಮಹಾರಾಷ್ಟ್ರ)
ಕಿಶೋರಭಾಯಿ ಸೋಮಾಭಾಯಿ ಮಿಸ್ತ್ರಿ – ವಾದ್ಯ ತಯಾರಿಕೆ (ರುದ್ರವೀಣೆ)
 ಒಟ್ಟಾರೆ ಕೊಡುಗೆ ಮತ್ತು ಇತರೆ  
ಟಿ. ಎಸ್. ಸತ್ಯವತಿ – ಸಂಗೀತ ಕ್ಷೇತ್ರದಲ್ಲಿ ಒಟ್ಟಾರೆ ಕೊಡುಗೆ
ವೋಲೇಟಿ ರಂಗಮಣಿ – ನೃತ್ಯ ಕ್ಷೇತ್ರದಲ್ಲಿ ಒಟ್ಟಾರೆ ಕೊಡುಗೆ
ಶುಭದಾ ವರದ್ಕರ್ – ಪ್ರದರ್ಶನ ಕಲೆಗಳ ಸಂಶೋಧನೆ/ವಿದ್ವತ್ (ನೃತ್ಯ)
ತಪತಿ ಚೌಧುರಿ – ಕಲಾ ವಿಮರ್ಶೆ (ಪ್ರದರ್ಶನ ಕಲೆಗಳು)
ಸುನಂದಾ ನಾಯರ್ – ಸಾಗರೋತ್ತರ ಸಾಧನೆ – ನೃತ್ಯ (ಮೋಹಿನಿಯಾಟ್ಟಂ)
2025ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
 ಸಂಗೀತ ಕ್ಷೇತ್ರ 
ಕೃಷ್ಣ ಮೋಹನ ಪಾಠಕ್ – ಹಿಂದೂಸ್ತಾನಿ ಗಾಯನ (ಧ್ರುಪದ್)
ಸುರೇಶ್ ಗಂಧರ್ವ – ಹಿಂದೂಸ್ತಾನಿ ಗಾಯನ
ಶೈಲೇಶ ಭಾಗವತ್ – ಹಿಂದೂಸ್ತಾನಿ ವಾದ್ಯ ಸಂಗೀತ (ಶಹನಾಯಿ)
ಜ್ಯೋತಿ ಹೆಗಡೆ – ಹಿಂದೂಸ್ತಾನಿ ವಾದ್ಯ ಸಂಗೀತ (ರುದ್ರವೀಣೆ)
ಪಂತುಲ ರಾಮಾ – ಕರ್ನಾಟಕಿ ಗಾಯನ
ಪಾಪನಾಶಂ ಅಶೋಕ ರಮಣಿ – ಕರ್ನಾಟಕಿ ಗಾಯನ
ತ್ರಿಪುನಿತುರ ಎನ್. ರಾಧಾಕೃಷ್ಣನ್ – ಕರ್ನಾಟಕಿ ವಾದ್ಯ ಸಂಗೀತ (ಘಟಂ)
ಅನೂರು ಆರ್. ಅನಂತಕೃಷ್ಣ ಶರ್ಮ – ಕರ್ನಾಟಕಿ ವಾದ್ಯ ಸಂಗೀತ (ಮೃದಂಗ)
ಡಿ. ಶ್ರೀನಿವಾಸ – ಕರ್ನಾಟಕಿ ವಾದ್ಯ ಸಂಗೀತ (ವೀಣೆ)
ಯುಗಾಂತರ್ ಸಿಂದೂರ – ಇತರ ಪ್ರಮುಖ ಸಂಗೀತ ಪರಂಪರೆ (ಸುಗಮ ಸಂಗೀತ)
ಸಚ್ಚಿದಾನಂದ ದಾಸ – ಇತರ ಪ್ರಮುಖ ಸಂಗೀತ ಪರಂಪರೆ (ಮರ್ದಲ)
ಸೀಮಾ ಅನಿಲ ಸೆಹಗಲ್ – ಇತರ ಪ್ರಮುಖ ಸಂಗೀತ ಪರಂಪರೆ (ಸುಗಮ ಸಂಗೀತ)
ನೃತ್ಯ ಕ್ಷೇತ್ರ  
ರೋಜಾ ಕಾನನ್ – ಭರತನಾಟ್ಯ
ಕೃಷ್ಣ ಮೋಹನ ಮಿಶ್ರಾ (ಮಹಾರಾಜ್), ವಾಸ್ವತಿ ಮಿಶ್ರಾ ಮತ್ತು ರಾಮಮೋಹನ ಮಹಾರಾಜ್ (ತ್ರಿವಳಿ) – ಕಥಕ್
ಕಲಾಮಂಡಲಂ ಕೃಷ್ಣಕುಮಾರ – ಕಥಕ್ಕಳಿ
ಇರೆಂಗ್ಬಮ್ ನಳಿನಿದೇವಿ – ಮಣಿಪುರಿ
ಪಿ. ನಾಗಜ್ಯೋತಿ ಮತ್ತು ಸೀತಾ ನಾಗಜ್ಯೋತಿ (ಜಂಟಿ) – ಕೂಚಿಪುಡಿ
ಇಲಿಯಾನಾ ಸಿಟಾರಿಸ್ಟಿ – ಒಡಿಸ್ಸಿ
ಮಲ್ಲಿಕಾ ಕಂದಲಿ – ಸತ್ರಿಯ
ಗಿರಿಜಾ ಚಂದ್ರನ್ – ಮೋಹಿನಿಯಾಟ್ಟಂ
ಪಗುಲು ಜೇನಾ – ಛೌ (ಮಯೂರ್‌ಭಂಜ್)
ಕೆ. ಹರಿಪ್ರಸಾದ – ನೃತ್ಯಕ್ಕೆ ಸಂಗೀತ (ಭರತನಾಟ್ಯ)
ಭಾಸ್ಕರ ಜ್ಯೋತಿ ಓಜಾ – ನೃತ್ಯಕ್ಕೆ ಸಂಗೀತ (ಸತ್ರಿಯ)
ಎಸ್. ಕುಮಾರ – ಇತರ ಪ್ರಮುಖ ನೃತ್ಯ ರಂಗಭೂಮಿ ಪರಂಪರೆ (ಭಾಗವತ ಮೇಳ)
ರಂಗಭೂಮಿ ಕ್ಷೇತ್ರ  
ಕಪಿಲದೇವ ಚಂದ್ರಕಾಂತ ಶುಕ್ಲಾ – ನಿರ್ದೇಶನ
ಕಲ್ಲೋಲ ಭಟ್ಟಾಚಾರ್ಯ – ನಿರ್ದೇಶನ
ನವದೀಪ ಕೌರ್ – ನಿರ್ದೇಶನ
ಪ್ರಮೋದ ಡಿ. ಪವಾರ್ – ನಿರ್ದೇಶನ
ಸುಬೋಧ ಪಟ್ನಾಯಕ್ – ನಿರ್ದೇಶನ
ಚೇತನಾ ದಾಸ – ನಟನೆ
ಸುರೇಶಕುಮಾರ (ಹಜ್ಜು) – ನಟನೆ
ಮಖನಲಾಲ ಸರಾಫ್ – ನಟನೆ
ಅಶೋಕ್ ಪಟ್ಕಿ – ರಂಗಭೂಮಿ ಪೂರಕ ಕಲೆಗಳು (ರಂಗಭೂಮಿ ಸಂಗೀತ)
ಉಷಾ ನಂಗ್ಯಾರ್ – ಪ್ರಮುಖ ರಂಗಭೂಮಿ ಪರಂಪರೆ (ನಂಗ್ಯಾರ್ ಕೂತ್ತು)
ಜಾನಪದ, ಬುಡಕಟ್ಟು, ಕೈಗೊಂಬೆ, ಮುಖವಾಡ ಮತ್ತು ವಾದ್ಯ ತಯಾರಿಕೆ 
ಅನುಪರಂಜನ್ ಪಾಂಡೆ – ಜಾನಪದ ನೃತ್ಯ (ಛತ್ತೀಸ್‌ಗಢ)
ಭೇರು ಸಿಂಗ್ ಚೌಹಾಣ – ಜಾನಪದ ಸಂಗೀತ (ಮಧ್ಯಪ್ರದೇಶ – ನಿರ್ಗುಣಿ)
ಸೂರ್ಯಕುಮಾರ್ ದೆಬ್‌ವರ್ಮಾ – ಜಾನಪದ ಸಂಗೀತ (ತ್ರಿಪುರಾ – ಚಾಂಗ್‌ಪ್ರೆಂಗ್)
ಜೋಗಿಂದರ ಸಿಂಗ್ ಹಬ್ಬಿ – ಜಾನಪದ ನೃತ್ಯ (ಹಿಮಾಚಲ ಪ್ರದೇಶ)
ರೊಮಾಲೋ ರಾಮ – ಜಾನಪದ ಸಂಗೀತ ಮತ್ತು ನೃತ್ಯ (ಜಮ್ಮು ಮತ್ತು ಕಾಶ್ಮೀರ)
ಹರ್ಮನ್‌ಪ್ರೀತ್ ಸಿಂಗ್ – ಜಾನಪದ ನೃತ್ಯ (ಪಂಜಾಬ್)
ಅಲಿ ಮೊಹಮ್ಮದ್ – (ಜಾನಪದ ಕಲೆ)
ಡೋಮಿನ್ ಕರ್ಬಾಕ್ – (ಜಾನಪದ ಕಲೆ)
ಕೆ. ರೋಸಿಯಾಮಾ –  (ಜಾನಪದ ಕಲೆ]
ರಾಣಿ ಮಾರಿಂಗ್ –  (ಜಾನಪದ ಕಲೆ)
ಸುಶಾಂತ ಕುಮಾರ ಮಹಾಪಾತ್ರ –  (ಮುಖವಾಡ ತಯಾರಿಕೆ/ಕಲೆ]
ಮಂಗಳ ಪ್ರಸಾದ ಶರ್ಮಾ – (ಜಾನಪದ ಕಲೆ)
(

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement