ನ್ಯಾಯಾಲಯದಲ್ಲೇ ದಾಖಲೆಗಳ ಎಸೆತ, ಸಿಜೆಐ ವಿರುದ್ಧ ನಿಂದನೆ ; ಅರ್ಜಿದಾರನ ವಿರುದ್ಧ ಕ್ರಮ ಕೈಗೊಳ್ಳದ ಸುಪ್ರೀಂ ಕೋರ್ಟ್

ನವದೆಹಲಿ : ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ (ಜುಲೈ 10) ನಡೆದ ವಿಚಾರಣೆಯ ವೇಳೆ ಅನಿರೀಕ್ಷಿತ ಘಟನೆ ನಡೆಯಿತು. ಸ್ವತಃ ತಮ್ಮ ಪ್ರಕರಣವನ್ನು ತಾವೇ ವಾದಿಸುತ್ತಿದ್ದ ಅರ್ಜಿದಾರರೊಬ್ಬರು ನ್ಯಾಯಾಲಯದಲ್ಲೇ ಪ್ರಕರಣದ ದಾಖಲೆಗಳನ್ನು ಎಸೆದು, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ವಿಚಾರಣೆಗೆ ಅಡ್ಡಿಪಡಿಸಿದ ಘಟನೆ ನಡೆಯಿತು. ನಂತರ ಭದ್ರತಾ ಸಿಬ್ಬಂದಿ ಆತನನ್ನು ಹೊರಗೆ ಕರೆದೊಯ್ದರು ಎಂದು ಲೈವ್‌ ಲಾ ವರದಿ ಮಾಡಿದೆ.
ವರದಿಯ ಪ್ರಕಾರ, ನ್ಯಾಯಪೀಠ ಸಂಪೂರ್ಣ ಸಂಯಮ ಕಾಪಾಡಿಕೊಂಡು ಯಾವುದೇ ಪ್ರತಿಕ್ರಿಯೆ ನೀಡದೇ, ಅರ್ಜಿದಾರನ ವಿರುದ್ಧ ಕ್ರಮ ಕೈಗೊಳ್ಳದೆ
ಭಾಗಶಃ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಹಾಗೂ ಅಲೋಕ ಆರಾಧೆ ಅವರು ವಿಚಾರಣೆ ನಡೆಸುತ್ತಿದ್ದರು. ಅಲಹಾಬಾದ್ ಹೈಕೋರ್ಟ್ ತನ್ನ ರಿಟ್ ಅರ್ಜಿಯನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಪ್ರಬಲ ಪ್ರತಾಪ ಎಂಬ ಅರ್ಜಿದಾರರು ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್ 173(4) ಅಡಿಯಲ್ಲಿ ಸಲ್ಲಿಸಿದ್ದ ತಮ್ಮ ಅರ್ಜಿಯನ್ನು ಖಾಸಗಿ ದೂರು (Private Complaint) ಪ್ರಕರಣವಾಗಿ ಪರಿವರ್ತಿಸಿರುವುದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಪ್ರಮುಖ ಸುದ್ದಿ :-   25 ವರ್ಷದ ಹಿಂದಿನ ಸಾಲ ತೀರಿಸಲು ವಿಳಾಸ, ಮೊಬೈಲ್ ನಂಬರ್‌ ಇಲ್ಲದೆ ಸ್ನೇಹಿತನ ಹುಡುಕಿಕೊಂಡು ಕೇರಳದಿಂದ ತೆಲಂಗಾಣಕ್ಕೆ ಬಂದ ವ್ಯಕ್ತಿ...!

ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರರು ನ್ಯಾಯಪೀಠವನ್ನು ಉದ್ದೇಶಿಸಿ, “ಮಿಸ್ಟರ್ ಜುಡಿಷಿಯಲ್ ಸರ್ವೆಂಟ್, ಲಕ್ನೋದ ವಿಕಾಸ್ ನಗರದ ಎಸಿಪಿ ವಿರುದ್ಧ ಎಫ್‌ಐಆರ್ ದಾಖಲಿಸಲು ನಾನು ನಿಮಗೆ ಆದೇಶಿಸುತ್ತೇನೆ” ಎಂದು ಅಸಭ್ಯವಾಗಿ ಹೇಳಿದರು. ಇದಕ್ಕೆ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್, “ನೀವು ನನಗೆ ಆದೇಶಿಸುತ್ತಿದ್ದೀರಾ? ನೀವು ನಮಗೆ ಆದೇಶಿಸುತ್ತಿದ್ದೀರಾ?” ಎಂದು ಪ್ರಶ್ನಿಸಿದರು.
ಈ ವೇಳೆ ಯಾವುದೇ ಪ್ರಚೋದನೆಯಿಲ್ಲದೆ ಅರ್ಜಿದಾರರು ಏಕಾಏಕಿ ತಮ್ಮ ಪ್ರಕರಣದ ದಾಖಲೆಗಳನ್ನು ನ್ಯಾಯಾಲಯದೊಳಗೆ ಎಸೆದು, ಭಾರತದ ಮುಖ್ಯ ನ್ಯಾಯಮೂರ್ತಿಯವರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದರು. ಕೂಡಲೇ ಸುಪ್ರೀಂ ಕೋರ್ಟ್‌ನ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ದರು.

ಇಷ್ಟಾದರೂ ನ್ಯಾಯಪೀಠ ಸಂಪೂರ್ಣ ಶಾಂತ ಹಾಗೂ ಸಂಯಮದಿಂದ ವರ್ತಿಸಿತು. ನಡೆದ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ, ದಿನದ ವಿಚಾರಣಾ ಪಟ್ಟಿಯಲ್ಲಿದ್ದ ಉಳಿದ ಪ್ರಕರಣಗಳ ವಿಚಾರಣೆಯನ್ನು ಎಂದಿನಂತೆ ಮುಂದುವರಿಸಿತು.
ಅರ್ಜಿದಾರರ ಅಸಭ್ಯ ಹಾಗೂ ಅಶಿಸ್ತಿನ ವರ್ತನೆಯ ಹೊರತಾಗಿಯೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ನ್ಯಾಯಪೀಠ ತೀರ್ಮಾನಿಸಿತು.
ಆದೇಶದಲ್ಲಿ ನ್ಯಾಯಪೀಠವು, “ಮೇಲ್ಕಂಡ ಅರ್ಜಿದಾರರ ಪರಿಸ್ಥಿತಿಯನ್ನು ಪರಿಗಣಿಸಿ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ನಾವು ಉದ್ದೇಶಿಸಿಲ್ಲ. ಪ್ರಕರಣದ ಅರ್ಹತೆಯ ವಿಚಾರಕ್ಕೆ ಬಂದರೆ, ದಾಖಲೆಗಳನ್ನು ಪರಿಶೀಲಿಸಿದ ನಂತರ ಪ್ರಶ್ನಿಸಲಾದ ತೀರ್ಪು ಅಥವಾ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸಮಂಜಸವಾದ ಆಧಾರ ಕಂಡುಬಂದಿಲ್ಲ” ಎಂದು ತಿಳಿಸಿತು.

ಪ್ರಮುಖ ಸುದ್ದಿ :-   ಪಕ್ಷ ಸೇರಿದ ಕೆಲವೇ ಗಂಟೆಗಳಲ್ಲಿ ಮೂವರು ಟಿಎಂಸಿ ಮಾಜಿ ಸಂಸದರಿಗೆ ರಾಜ್ಯಸಭೆ ಟಿಕೆಟ್ ನೀಡಿದ ಬಿಜೆಪಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement