ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಇಬ್ಬರಿಗೆ ಖಾತೆ ಬದಲು; ಯಾರಿಗೆ ಯಾವ ಖಾತೆ ? ಇಲ್ಲಿದೆ ವಿವರ

ಬೆಂಗಳೂರು : ಮುಖ್ಯಮಂತ್ರಿ ಡಿಕೆ ಶಿವಕುಮಾರ ಸಂಪುಟದ ಮಂತ್ರಿಗಳಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಆಗಸ್ಟ್ 3ರಂದು ಪ್ರಮಾಣ ವಚನ ಸ್ವೀಕರಿಸಿದ 19 ನೂತನ ಸಚಿವರಿಗೆ ಖಾತೆ (Portfolios) ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ರಾಮಲಿಂಗಾರೆಡ್ಡಿ ಹಾಗೂ ಮುನಿಯಪ್ಪನವರ ಖಾತೆಗಳನ್ನ ಬದಲಾವಣೆ ಮಾಡಲಾಗಿದೆ.
ಪ್ರಮುಖವಾಗಿ ಮೊದಲ ಹಂತದಲ್ಲೇ ಸಚಿವರಾಗಿದ್ದ ಮುನಿಯಪ್ಪ ಹಾಗೂ ರಾಮಲಿಂಗಾರೆಡ್ಡಿ ಅವರು ಖಾತೆ ಬಗ್ಗೆ ಅಸಮಾಧಾನಗೊಂಡಿದ್ದರು. ಆಹಾರ ಇಲಾಖೆ ಕೊಟ್ಟಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರು ಖುದ್ದು ರಾಹುಲ್ ಗಾಂಧಿ ಭೇಟಿ ಮಾಡಿ ಖಾತೆ ಬದಲಾವಣೆಗೆ ಮನವಿ ಮಾಡಿದ್ದರು. ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದರು. ಈಗ ಇಬ್ಬರ ಖಾತೆ ಬದಲಾವಣೆ ಮಾಡಲಾಗಿದ್ದು, ಮುನಿಯಪ್ಪ ಅವರಿಗೆ ಆಹಾರ ಖಾತೆ ಬದಲಿಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಬದಲಿಗೆ ಅರಣ್ಯ ಖಾತೆ ನೀಡಲಾಗಿದೆ. (ಖಾತೆಗಳ ವಿವರಗಳು ಪಿಡಿಎಫ್‌ನಲ್ಲಿದ್ದು, ನೋಡಲು ಇಲ್ಲಿ New ministers Portfolios  ಇಲ್ಲಿ ಕ್ಲಿಕ್‌ ಮಾಡಬಹುದು)

ಯಾರಿಗೆ ಯಾವ ಖಾತೆ  ಹಂಚಿಕೆ?
ರಾಮಲಿಂಗರೆಡ್ಡಿ-ಅರಣ್ಯ (ಈ ಹಿಂದೆ ಜಲ ಸಂಪನ್ಮೂಲ)
ಕೆ.ಹೆಚ್.ಮುನಿಯಪ್ಪ-ಸಮಾಜ ಕಲ್ಯಾಣ ಇಲಾಖೆ
ಲಕ್ಷ್ಮಣ ಸವದಿ- ಸಹಕಾರ ಇಲಾಖೆ (ಎಪಿಎಂಸಿ ಹೊರತು ಪಡಿಸಿ)
ಸಂತೋಷ್ ಲಾಡ್- ಕಾರ್ಮಿಕ ಇಲಾಖೆ
ಯು.ಟಿ.ಖಾದರ್-ಆರೋಗ್ಯ ಮತ್ತು ಕಲ್ಯಾಣ ಇಲಾಖೆ
ಶಿವರಾಜ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
ಬಸವರಾಜ ರಾಯರೆಡ್ಡಿ-ಉನ್ನತ ಶಿಕ್ಷಣ
ಎಚ್‌.ಸಿ.ಬಾಲಕೃಷ್ಣ-ಪೌರಾಡಳಿತ
ಕೆ.ಎಸ್‌.ಬಸವಂತಪ್ಪ-ಮುಜರಾಯಿ, ಮೀನುಗಾರಿಕೆ
ಎನ್‌.ಚಲುವರಾಯಸ್ವಾಮಿ- ಜಲಸಂಪನ್ಮೂಲ ಇಲಾಖೆ
ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಎಸ್‌.ಎಸ್‌.ಮಲ್ಲಿಕಾರ್ಜುನ್‌- ಗಣಿ ಮತ್ತು ಭೂವಿಜ್ಞಾನ ಇಲಾಖೆ
ಬಿ.ನಾಗೇಂದ್ರ-ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ಪಿ.ಎಂ.ನರೇಂದ್ರಸ್ವಾಮಿ-ಕೃಷಿ ಇಲಾಖೆ
ಸಿ.ಪುಟ್ಟರಂಗಶೆಟ್ಟಿ-ಪಶು ಸಂಗೋಪನಾ ಇಲಾಖೆ, ರೇಷ್ಮೆ
ಟಿ.ರಘುಮೂರ್ತಿ-ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ
ರಿಜ್ವಾನ್‌ ಅರ್ಷದ್‌-ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ರುದ್ರಪ್ಪ ಲಮಾಣಿ- ಸಕ್ಕರೆ ಮತ್ತು ಜವಳಿ
ಶಿವಲಿಂಗೇಗೌಡ-ಅಬಕಾರಿ ಖಾತೆ
ವಿಜಯಾನಂದ ಕಾಶಪ್ಪನವರ್‌-ಸಣ್ಣ ಕೈಗಾರಿಕೆ
ಜಮೀರ್‌ ಅಹ್ಮದ್‌ ಖಾನ್-ವಸತಿ
ಅಜಯ ಸಿಂಗ್-ಸಣ್ಣ ನೀರಾವರಿ, ಐಟಿ ಬಿಟಿ.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಚಿವರಾಗಿ ನಿಭಾಯಿಸಿದ್ದ ಖಾತೆಗಳ ಜವಾಬ್ದಾರಿ ನೀಡಲಾಗಿದೆ. ಸತೋಷ್ ಲಾಡ್ (ಕಾರ್ಮಿಕ ಇಲಾಖೆ), ಜಮೀರ್ ಅಹ್ಮದ್ ಖಾನ್ (ವಸತಿ), ಶಿವರಾಜ್ ತಂಗಡಗಿ ( ಕನ್ನಡ ಮತ್ತು ಸಂಸ್ಕೃತಿ), ಎಸ್​​ಎಸ್​ ಮಲ್ಲಿಕಾರ್ಜುನ (ಗಣಿ ಮತ್ತು ಭೂವಿಜ್ಞಾನ), ಮಧುಬಂಗಾರಪ್ಪ (ಪ್ರಾಥಮಿಕ ಶಿಕ್ಷಣ), ಅವರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಹೊಂದಿದ್ದ ಖಾತೆಗಳನ್ನೇ ​ಮುಂದುವರಿಸಲಾಗಿದೆ.

ಪ್ರಮುಖ ಸುದ್ದಿ :-   ಶಿವಂ ಅಸೋಸಿಯೇಟ್ಸ್‌ ಮೇಲೆ ಇ.ಡಿ. ದಾಳಿ : ₹1,777 ಕೋಟಿ ಲೆಕ್ಕಕ್ಕೆ ಸಿಗದ ಹಣ ಪತ್ತೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement